ರಾಜ್ಯದ ಆರು ಬ್ಲಾಕ್ ಫಂಗಸ್ ಚಿಕಿತ್ಸಾ ಕೇಂದ್ರಗಳಲ್ಲಿ ಶಿವಮೊಗ್ಗವೂ ಒಂದು. ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿನ ಇ ಎನ್ ಟಿ ವಿಭಾಗದ ಮುಖ್ಯಸ್ಥರಾಗಿರುವ ಗಂಗಾಧರ್ ಬ್ಲ್ಯಾಕ್ ಫಂಗಸ್ ಚಿಕಿತ್ಸೆಯ ಹೊಣೆ ಹೊತ್ತಿದ್ದಾರೆ.
ಮ್ಯೂಕರ್ ಮೈಕೋಸಿಸ್ (mucormycosis) ಚಿಕಿತ್ಸೆಗಾಗಿ ಏಳು ನುರಿತ ವೈದರ ತಂಡ ರಚಿಸಲಾಗಿದೆ. ರೋಗಿಗಳ ಚಿಕಿತ್ಸೆ ಗಾಗಿ 25 ರಿಂದ 30 ಹಾಸಿಗೆಗಳನ್ನು ಸಿದ್ದಪಡಿಸಲಾಗಿದೆ. ರೋಗಿಗಳ ಸಂಖ್ಯೆ ನೋಡಿ ಮತ್ತಷ್ಟು ಬೆಡ್ ಗಳನ್ನು ಹೆಚ್ಚಿಸಲಾಗುತ್ತದೆ. ನೆನ್ನೆ ಪರೀಕ್ಷೆ ಮಾಡಿದ ರೋಗಿಗಳಲ್ಲಿ ಹತ್ತು ಮಂದಿಗೆ ಬ್ಲಾಕ್ ಫಂಗಸ್ ಕಂಡು ಬಂದಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸರ್ಕಾರ ರಾಜ್ಯದ ಆರು ಜಿಲ್ಲೆಗಳಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸಾ ಕೇಂದ್ರ ತೆರೆದಿದೆ. ಬೆಂಗಳೂರು ಶಿವಮೊಗ್ಗ ಮೈಸೂರು ಹುಬ್ಬಳಿ ಗುಲ್ಬರ್ಗಾ ಮಂಗಳೂರಿನಲ್ಲಿ ಕೇಂದ್ರ ತೆರೆಯಲಾಗಿದೆ. ನೆನ್ನೆಯಿಂದ ಈ ಕ್ಲಿನಿಕ್ ಕೇರ್ ಸೆಂಟರ್ ನಲ್ಲಿ ಬ್ಲಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಾಂಕ್ರಾಮಿಕ ರೋಗವಲ್ಲ
ದಾವಣಗೆರೆ ಚಿತ್ರದುರ್ಗ ಚಿಕ್ಕಮಗಳೂರು ಸಿರಸಿ ಕಾರವಾರದಿಂದ ರೋಗಿಗಳು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ.ಬ್ಲಾಕ್ ಫಂಗಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಲ್ಲ. ಮೊದಲು ಮೂಗು ಕಣ್ಣು ಆವರಿಸುವ ಫಂಗಸ್ ಅಂತಿಮವಾಗಿ ಮೆದುಳಿಗೆ ವಿಸ್ತರಿಸುತ್ತೆ. ದೀರ್ಘ ಕಾಲ ಕೊರೊನಾದಿಂದ ಬಳಲಿ ಗುಣಮುಖರಾದವರಲ್ಲಿ ಹೆಚ್ಚಾಗಿ ಬ್ಲಾಕ್ ಫಂಗಸ್ ಕಂಡುಬರುತ್ತದೆ. ಇದಕ್ಕೆ ಚಿಕಿತ್ಸೆ ನೀಡಲು ವೈದ್ಯ ತಂಡ ಸಜ್ಜಾಗಿದೆ. ಯಾರು ಭಯಪಡುವ ಅಗತ್ಯವಿಲ್ಲ ಎಂದು ಸಿಮ್ಸ್ ENT ವಿಭಾಗದ ಮುಖ್ಯಸ್ಥ ಗಂಗಾಧರಪ್ಪ ಹೇಳಿದ್ದಾರೆ.