ರಿಪ್ಪನ್‌ಪೇಟೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಶನಿವಾರ ಬೆಳಗ್ಗೆಯಿಂದಲೆ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪೊಲೀಸ್, ಗ್ರಾಮಾಡಳಿತ ಮತ್ತು ಕಂದಾಯ ಇಲಾಖೆಯವರು ಕಟ್ಟುನಿಟ್ಟಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದಾರೆ.
ಶನಿವಾರ ಬೆಳಗ್ಗೆ ೬ ರಿಂದ ೧೧ಗಂಟೆಯ ತನಕ ದಿನಸಿ ಅಂಗಡಿ. ಹಾಲು ,ಹಣ್ಣು, ತರಕಾರಿ, ಮಾಂಸ ಮತ್ತು ಮೀನಿನಂಗಡಿಗಳು ಸೇರಿದಂತೆ ದಿನೋಪಯೋಗಿ ಅಂಗಡಿ ತೆರೆಯಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಕೆಲವರು ತಮ್ಮ ಅಂಗಡಿಗಳನ್ನು ತೆರೆದಿದ್ದರು. ೧೦ ಗಂಟೆಯ ನಂತರ ಅಧಿಕಾರಗಳು ಪಟ್ಟಣದ್ಯಾಂತ ಕಾರಣವಿಲ್ಲದೆ ಒಡಾಡುತ್ತಿದ್ದ ನಾಗರೀಕರಿಕರಿಗೆ ಖಡಕ್ ಎಚ್ಚರಿಕೆಯನ್ನು ನೀಡುವುದರ ಜೋತೆಗೆ ಮಾಸ್ಕ ಇಲ್ಲದೆ ಓಡಾಡುತ್ತಿದ್ದ ಜನರ ಮೇಲೆ ಕೇಸ್ ಹಾಕಿ ದಂಡವಿದಿಸಿದರು.
ಮೇ ೩೧ ರ ತನಕ ಸಂಪೂರ್ಣ ಲಾಕ್ ಡೌನ್
ರಿಪ್ಪನ್‌ಪೇಟೆ ಹಾಗೂ ಅಮೃತ ಗ್ರಾಮ ಪಂಚಾಯಿತಿಯಲ್ಲಿ ತಾಲೂಕ್ ಆಡಳಿತ ಅಧಿಕಾರಿ ವಿ.ರಾಜೀವ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ಗ್ರಾಮಾಡಳಿತ. ರಕ್ಷಣಾ ಇಲಾಖೆ ಮತ್ತು ಕಂದಾಯ ಇಲಾಖೆಯವರು ಮೇ ೩೧ ಸೋಮವಾರ ಬೆಳಗ್ಗೆ ೬ ತನಕ ಸಂಪೂರ್ಣ ಲಾಕ್ ಡೌನ್ ಮಾಡಿಸಿದ್ದಾರೆ.
ಗ್ರಾಮದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿ. ಯಾರೂ ಸಂಚರಿಸಬಾರದೆಂದು ಸೂಚನೇ ನೀಡಿದ್ದರೂ ಸಹ . ಕೆಲವರೂ ವಿನಾ ಕಾರಣ ಒಳ ರಸ್ತೆಗಳಲ್ಲಿ ಕಾರು ಮತ್ತು ಬೈಕ್ ಗಳಲ್ಲಿ ಸಂಚರಿಸುತ್ತಿದ್ದುದು ಕಂಡು ಬಂದಿದ್ದು. ಇಂತವರ ಕಾರು ಮತ್ತು ಬೈಕ್ ಗಳನ್ನು ಪೊಲೀಸರು ವಶ ಪಡಿಸಿಕೊಂಡರೆ ಸಂಚಾರ ನಿಯಂತ್ರಣವಾಗುತ್ತದೆ. ಪೊಲೀಸರು, ಹಾಗೂ ಗ್ರಾಮ ಪಂಚಾಯಿತಿ ಟಾಸ್ಕ್ ಪೊರ್ಸನವರು ಇಂತವರನ್ನು ನಿಯಂತ್ರಿಸಬೇಕೆಂದು ನಾಗರೀಕರು ಒತ್ತಾಯ ವ್ಯಕ್ತಪಡಿಸಿದ್ದಾರೆ.
ಕೃಷಿಗೆ ಕಂಟಕ:
ರಿಪ್ಪನ್ ಪೇಟೆ ಸುತ್ತಮುತ್ತ ಈಗ ಶುಂಠಿ ನಾಟಿ, ಗದ್ದೆ ಕೊಯ್ಲು ಹಾಗೂ ಹಂಕಲು ಬೇಸಾಯ ಬರದಿಂದ ಸಾಗುತ್ತಿದೆ. ಈ ಹೊತ್ತಿನಲ್ಲಿ ಕಠಿಣ ನಿಯಮದಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ ಎನ್ನಲಾಗಿದೆ. ಖಾಸಗಿ ಕ್ಲಿನಿಕ್ ಬಂದ್ ಮಾಡಿರುವುದರಿಂದ ಸಾಮಾನ್ಯ ಕಾಯಿಲೆಪೀಡಿತರಿಗೆ ಆರೋಗ್ಯ ತಪಾಸಣೆಗೆ ಕಷ್ಟವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನ ಕೇಸ್‌ಗಳೇ ಹೆಚ್ಚು ಬರುತ್ತಿರುವುದರಿಂದ ಜನರು ಅಲ್ಲಿಗೆ ಹೋಗಲು ಹೆದರುತಿದ್ದಾರೆ.
ಅನಗತ್ಯವಾಗಿ ಮನೆಯಿಂದ ಹೊರ ಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ವಾಹನ ವಶಪಡಿಸಿಕೊಳ್ಳುವುದರ ಮೂಲಕ ಕೇಸು ದಾಖಲಿಸುವುದರೊಂದಿಗೆ ದಂಡ ವಿಧಿಸಲಾಗುತ್ತದೆ
-ಮಧು ಸೂದನ್ .ಸಿಪಿಐ ಹೊಸನಗರ