ರಿಪ್ಪನ್‌ಪೇಟೆ: ಜಗತ್ತನ್ನೆ ತಲ್ಲಣಗೊಳಿದ ಕೊರೊನಾ ಸೋಂಕು ಈಗ ಹಳ್ಳಿ ಹಳ್ಳಿಗೂ ವ್ಯಾಪಿಸುವುದರ ಜೋತೆಗೆ ಬಲಿ ತೆಗೆದುಕೊಳ್ಳುತ್ತಿದೆ.ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರು ದಿಂಬ ಗ್ರಾಮದಲ್ಲಿ ಕೊರೊನಾ ಸೋಂಕಿನಿAದ ಒಂದೇ ವಾರದಲ್ಲಿ ತಾಯಿ ಮತ್ತು ಮಗ ಮೃತ ಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕೊರೊನಾ ಸೋಂಕಿನಿAದ ತಾಯಿ ರತ್ನಮ್ಮ(೮೬) ಕಳೆದ ವಾರ ಮೃತಪಟ್ಟಿದ್ದರು.ಮಗ ಯುವರಾಜ್(೪೬) ಸೋಮವಾರ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಮೃತರಾದರು.ಇದೀಗ ಇಡೀ ಕುಟುಂಬವೇ ಕೊರೊನಾ ಸೋಂಕಿಗೆ ತುತ್ತಾಗಿದೆ
.ಮಗಳ ಜನ್ಮದಿನದಂದೇ ತಂದೆ ಕೊರೋನಾ ಸೋಂಕಿಗೆ ಬಲಿಯಾದರು:
ಎಸ್.ಎಸ್.ಎಲ್.ಸಿ ಓದುತ್ತಿದ್ದ ಮಗಳು ಶಾಂಭವಿಯ ಜನ್ಮದಿನ ಸೋಮವಾರಸ್ನೇಹಿತರು ಮತ್ತು ಬಂಧು ಬಳಗದವರು ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ಜನ್ಮ ದಿನದ ಶುಭಾಶಯ ಕೋರುತ್ತಿದ್ದರೆ.ಯುವರಾಜ್ ಅವರು ಚೇತರಿಕೆ ಕಾಣದೆ ಕೊನೆಯುಸಿರೆಳದ ಸುದ್ದಿ ಆಸ್ಪತ್ರೆಯಿಂದ ಬಂದು ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿತು,
ಇಡೀ ಗ್ರಾಮವೇ ಸೀಲ್ ಡೌನ್:
ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರ ದಿಂಬ ಗ್ರಾಮವನ್ನು ಇದೀಗ ಮುಂಜಾಗ್ರತಾಕ್ರಮವಾಗಿ ತಾಲೂಕ್ ಆಡಳಿತ,ಗ್ರಾಮಾಡಳಿತ ಹಾಗೂ ಆರೋಗ್ಯ ಇಲಾಖೆಯವರು ಇಡೀ ಗ್ರಾಮವನ್ನೇ ಸಿಲ್ ಡೌನ್ ಮಾಡಿದ್ದಾರೆ. ಹಾಗೂ ಸೋಂಕಿತರ ಪ್ರತಿ ಮನೆಗೂ ಗ್ರಾಮಾಡಳಿತ ಸ್ಯಾನಿಟೈಸ್ ಮಾಡುವುದರೊಂದಿಗೆ ,ಪ್ರತಿಯೊಬ್ಬರು ಕೋವಿಡ್ ಟೆಸ್ಟ್ ಮಾಡಿಸುವಂತೆ ತಿಳಿಸಿದ್ದಾರೆ.