ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 25 ಸಾವಿರ ಜನರಿಗೆ ದಿನಸಿ ಕಿಟ್ ನೀಡಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ 25 ಸಾವಿರ ಜನರಿಗೆ ಮೇ.30 ರಿಂದ ಒಂದು ವಾರ ದಿನಸಿ ಕಿಟ್ ಹಂಚಲಾಗುವುದು. ಇದನ್ನ ಸೇವಾಭಾರತಿ ಹಾಗೂ ಪ್ರೇರಣಾ ಟ್ರಸ್ಟ್ ಅಡಿಯಲ್ಲಿ ನೀಡಲಾಗುವುದು ಎಂದು ಸಂಸದರು ತಿಳಿಸಿದರು.
ಮೇ.30 ರಂದು ತೀರ್ಥಹಳ್ಳಿ , ಜೂ.1 ರಂದು ಹೊಸನಗರ, 2 ರಂದು ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ, ಜೂ3 ರಂದು ಭದ್ರಾವತಿ ಜೂ. 4 ಸೊರಬ ಸೇರಿದಂತೆ ಒಂದು ವಾರದವರೆಗೆ ದಿನಸಿ ಸಾಮಗ್ರಿ ಹಂಚಲಾಗುತ್ತಿದೆ ಎಂದರು.
ಕಿಟ್‍ನಲ್ಲಿ ಏನೇನಿರಲಿದೆ
ಸಕ್ಕರೆ, ಎಣ್ಣೆ, ಬೇಳೆ ಕಾಳು, ಗೋದಿ ಹಿಟ್ಟು, ಸಾಂಬಾರ್ ಪದಾರ್ಥ, ಟೀಪುಡಿ ಮೊದಲಾದವುಗಳಿರುತ್ತದೆ(ಅಕ್ಕಿ,ಗೋದಿ ಇರುವುದಿಲ್ಲ) ಕೋವಿಡ್ ವಾರಿಯರ್ಸ್ ಗೆ ಹಂಚಲು ಚಿಂತಿಸಲಾಗುತ್ತಿದೆ. ಅಂಗನವಾಡಿ, ಆಶಾಕಾರ್ಯಕರ್ತೆ, ಸವಿತಾ ಸಮಾಜ, ಅಡಿಗೆ ಭಟ್ಟರು ಮತ್ತು ಸಹಾಯಕರಿಗೆ, ಅರ್ಚಕರಿಗೆ, ಪತ್ರಿಕಾ ವಿತರಕರಿಗೆ ನೀಡಲು ಚರ್ಚಿಸಲಾಗುತ್ತಿದೆ ಎಂದರು.
ಕೊರೊನ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಉತ್ತಮ ನಿರ್ವಹಣೆ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಕೊರೊನ ಸಂಕಷ್ಟದಲ್ಲಿದ್ದ ಜನರಿಗೆ ಸಂಘ ಸಂಸ್ಥೆಗಳು ಕೊರೋನ ಸಂಕಷ್ಟಕ್ಕೆ ಮುಂದಾಗಿದ್ದಾರೆ. ಸೇವಾ ಭಾರತಿ ಹಾಗೂ ಪ್ರೇರಣಾ ಟ್ರಸ್ಟ್ ಉತ್ತಮ ಚಟುವಟಿಕೆ ನಡೆಸುತ್ತಿದೆ ಎಂದು ಅವರು ತಿಳಿಸಿದರು