Malenadu Mitra
Uncategorized

ಕೊರೊನಾ ಸೋಂಕು ಹೆಚ್ಚಳ ಜೂನ್7ರ ವರೆಗೆ ರಿಪ್ಪನ್‌ಪೇಟೆ ಸಂಪೂರ್ಣ ಲಾಕ್

ರಿಪ್ಪನ್‌ಪೇಟೆ,ಮೇ: ಪಟ್ಟಣದಲ್ಲಿ ಮೇ29 ರಿಂದ ಜೂನ್7 ಸೋಮವಾರದ ವರಗೆ ಹಾಲು ಔಷಧಿ ಅಂಗಡಿಯನ್ನು ಹೊರತು ಪಡಿಸಿ ಉಳಿದಂತೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡುವಂತೆ ಶಾಸಕ ಹರತಾಳು ಹಾಲಪ್ಪ ಗ್ರಾಮಡಳಿತಕ್ಕೆ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರಾದ ಹರತಾಳು ಹಾಲಪ್ಪ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರುಗಳು, ಹೊಸನಗರ ತಾಲೂಕಿನಲ್ಲಿ ಮೇ ೭ ರವರಗೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಈ ನಿರ್ಧಾರವನ್ನು ಮಾಡಲಾಗಿದೆ ಎಂದರು.
ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ:
ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅನಾವಶ್ಯಕವಾಗಿ ವಾಹನಗಳಲ್ಲಿ ಸಂಚರಿಸುವವರ ವಿರುದ್ದ ಕ್ರಮಕೈಗೊಳ್ಳುವಂತೆ ಸ್ಥಳೀಯ ಠಾಣಾಧಿಕಾರಿಗಳಿಗೆ ತಿಳಿಸಿದರು. ನಾಳೆಯಿಂದ ಯಾವುದೇ ವಾಹನಗಳು ಮತ್ತು ಓಡಾಡುವರ ವಿರುದ್ದ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ಎಂದು ಸೂಚಿಸಿದರು
ತಹಶೀಲ್ಧಾರ್ ವಿ.ರಾಜೀವ್,ಉಪತಹಶೀಲ್ದಾರ್ ಹುಚ್ಚರಾಯಪ್ಪ,ರೆವಿನ್ಯೂ ಇನ್ಸ್‌ಪೆಕ್ಟರ್ ರಾಜು,ಪಿಎಸ್‌ಐ ಪಾರ್ವತಿಬಾಯಿ,ಅರಸಾಳು ವಲಯ ಅರಣ್ಯಾಧಿಕಾರಿ ಬಾಬುರಾಜೇಂದ್ರಪ್ರಸಾದ್, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ.ಪಿಡಿಒ ಜಿ.ಚಂದ್ರಶೇಖರ್,ಉಪಾಧ್ಯಕ್ಷೆ ಮಹಾಲಕ್ಷ್ಮಿ . ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅನಿಲ್ ಕುಮಾರ್. ಗ್ರಾ.ಪಂ. ಸದಸ್ಯರಾದ ಪಿ.ರಮೇಶ್. ಸುದೀಂದ್ರ ಪೂಜಾರಿ. ಆಸಿಫ್. ಚಂದ್ರೇಶ್. ಕಂದಾಯ ಇಲಾಖೆಯ ರಾಜು,ಶ್ರೀನಿವಾಸ್ ,ಇನ್ನಿತರರು ಹಾಜರಿದ್ದರು.

Ad Widget

Related posts

ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ ಭೀಕರ ಅಪಘಾತ- ಇಬ್ಬರು ಯುವಕರು ಸಾವು

Malenadu Mirror Desk

ಬೆಂಗಳೂರಿನಲ್ಲಿ ಬ್ರಿಟನ್ ವೈರಸ್

Malenadu Mirror Desk

ನಾನು ಮಂತ್ರಿಯಾಗಿರುವವರೆಗೆ ಪುತ್ರನ ಸ್ಪರ್ಧೆ ಇಲ್ಲ :ಕೆ.ಎಸ್. ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.