ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಹೆಚ್ಚಳದ ಕಾರಣ ಮಾ.31 ರಿಂದ ಜೂನ್ 6 ತನಕ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದೆ. ಅಗತ್ಯ ವಸ್ತುಗಳು ಹಾಗೂ ಮದ್ಯವನ್ನು ಸೋಮವಾರ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಮಾ.31 ರಂದು ಮಧ್ಯಾಹ್ನ 1 ಗಂಟೆ ತನಕ ತರಕಾರಿ, ದಿನಸಿ ಇತ್ಯಾದಿ ಕೊಂಡುಕೊಳ್ಳಬೇಕು. ಮದ್ಯಪ್ರಿಯರೂ ಕೂಡಾ ಸೋಮವಾರ ಬೆಳಗ್ಗೆ 10 ರೊಳಗೆ ಖರೀದಿ ಮಾಡಿಕೊಂಡರೆ ಜೂನ್ 6 ರತನಕ ಅಂಗಡಿ ಕಡೆ ಮುಖ ಹಾಕುವಂಗಿಲ್ಲ.
ಪ್ರತಿದಿನ ಬೆಳಗ್ಗೆ 6 ರಿಂದ8 ರವರೆಗೆ ಹಾಲು ಖರೀದಿಗೆ ಅವಕಾಶವಿದೆ. ಔಷಧ ಮತ್ತು ಆರೋಗ್ಯ ಸೇವೆ ಹೊರತುಪಡಿಸಿ ಇನ್ನಾವುದೇ ಸೇವೆಗಳು ಇರುವುದಿಲ್ಲ ಎಂದು ಜಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಅವಧಿಯಲ್ಲಿ ದಿನಸಿ ಅಂಗಡಿ, ಪೆಟ್ರೋಲ್ ಬಂಕ್, ಹೂವಿನ ಅಂಗಡಿ, ವಾಣಿಜ್ಯ ಚಟುವಟಿಕೆಗಳು, ಕಟ್ಟಡ ಕಾಮಗಾರಿ ಎಲ್ಲವೂ ಬಂದ್ ಆಗಲಿವೆ. ಆದೇಶ ಮೀರಿ ಬೀದಿಗಿಳಿಯುವ ಜನರ ಮೇಲೆ ಕಠಿಣ ಕಾನೂನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ