ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಸೋಂಕು ಕೊಂಚ ಇಳಿಮುಖವಾಗಿದ್ದರೂ, ಸಾವಿನ ಪ್ರಮಾಣ ಯಥಾಸ್ಥಿತಿಯಲ್ಲಿದೆ. ಈ ನಡುವೆ ಬ್ಲಾಕ್ ಫಂಗಸ್‍ಗೆ ಶಿವಮೊಗ್ಗ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದರು. ಕರಿಮಾರಿಗೆ ಬಲಿಯಾದವರ ಸಂಖ್ಯೆ ಜಿಲ್ಲೆಯಲ್ಲಿ ಎರಡಕ್ಕೇರಿದೆ.
ಸೋಮವಾರ ಜಿಲ್ಲೆಯಲ್ಲಿ 558 ಜನರಿಗೆ ಹೊಸದಾಗಿ ಸೋಂಕು ತಗಲಿದ್ದರೆ,809 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರಲ್ಲಿ13 ಮಂದಿ ಒಂದೇ ದಿನ ಮೃತರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 807ಕ್ಕೇರಿದೆ.
ಶಿವಮೊಗ್ಗ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಗಂಭೀರವಾಗಿಯೇ ಇದ್ದು, ಸೋಮವಾರ 205 ಮಂದಿಯಲ್ಲಿ ಪಾಜಿಟಿವ್ ವರದಿ ಬಂದಿದೆ.ಭದ್ರಾವತಿಯಲ್ಲಿ 89,ತೀರ್ಥಹಳ್ಳಿಯಲ್ಲಿ 21,ಶಿಕಾರಿಪುರ 71, ಸಾಗರದಲ್ಲಿ 55, ಹೊಸನಗರ 39, ಸೊರಬದಲಿ 64 ಹಾಗೂ ಇತರೆ ಜಿಲ್ಲೆಯ 14 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 6979 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.