Malenadu Mitra
ರಾಜ್ಯ ಶಿವಮೊಗ್ಗ

ಆಯುಷ್ ವೈದ್ಯರ ಪ್ರತಿಭಟನೆ

ಶಿವಮೊಗ್ಗ, ಜೂ. ೧: “ಕಾಲ ಕಾಲಕ್ಕೆ ನೀಡಲಾಗುವ ವೇತನ-ಭತ್ಯೆ -ಸ್ಥಾನಮಾನಗಳನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ವಿಸ್ತರಿಸಬೇ ಕೆಂದು”  ೨೦೧೩ರ ಜುಲೈ ೩೧ರಂದು ಸಚಿವ ಸಂಪುಟದಲ್ಲಿ ನಿರ್ಣಯಿಸ ಲಾಗಿದ್ದನ್ನು ಧಿಕ್ಕರಿಸಿ, ಆಯುಷ್ ವೈದ್ಯಾಧಿಕಾರಿಗಳನ್ನು ಹೊರತು ಪಡಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಗಳಿಗೆ ವಿಶೇಷ ಭತ್ಯೆಯನ್ನು ೨೦೧೦ರ ಸೆ. ೧ರಿಂದ ಹೆಚ್ಚಿಸಿ, ಪರಿಷ್ಕೃತ ಆದೇಶ ಹೊರಡಿಸಲಾಗಿರುವುದನ್ನು ಖಂಡಿಸಿ ಜಿಲ್ಲಾ ಆಯುಷ್ ವೈದ್ಯರು ಮಂಗಳ ವಾರ ಪ್ರತಿಭಟನೆ ನಡೆಸಿದರು.
ಪ್ರತಿಯೊಬ್ಬ ಆಯುಷ್ ವೈದ್ಯಾ ಧಿಕಾರಿಯೂ ಕೊವಿಡ್ ಕೇರ್ ಕೇಂದ್ರ, ತಪಾಸಣಾ ಕೇಂದ್ರ, ಚಿಕಿತ್ಸಾ ಕೇಂದ್ರ ಹೀಗೆ ಯಾವುದರಲ್ಲಿಯೂ ಹಿಂದೆಗೆಯದೆ ಅತ್ಯಂತ ದಕ್ಷತೆಯಿಂದ ಸೇವೆಸಲ್ಲಿ ಸುತ್ತಿದ್ದಾರೆ.  ಅಲೋಪಥಿ -ಆಯುಷ್ ವೈದ್ಯಾಧಿಕಾರಿಗಳನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲ ರೀತಿಯ ಸೇವೆಗಳಿಗೂ ನಿಯೋಜಿಸಿ ಸರ್ಕಾರವು ಸರಿಸಮಾನವಾಗಿ ಸೇವೆಯನ್ನು ಪಡೆಯುತ್ತಿದೆ.  ಆದರೆ ಆಯುಷ್ ವೈದ್ಯರ ವಿಶೇಷ ಭತ್ಯೆ ಪರಿಷ್ಕರಣೆಗೆ ಅಗತ್ಯವಿರುವ ಕೇವಲ ವಾರ್ಷಿಕ ೨೦ ಕೋಟಿ ರೂಪಾಯಿಗಳ ವೆಚ್ಚ ಸಂಬಂಧಿತ ಆದೇಶ ಹೊರಡಿ ಸದೆ ಸರ್ಕಾರವು ಒಡೆದಾಳುವ ನೀತಿಯನ್ನು  ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರ್ಕಾರದ ಈ ನಿಲುವನ್ನು ವಿರೋಧಿಸಿ, ಆಯುಷ್ ವೈದ್ಯಾಧಿಕಾರಿಗಳು ಪ್ರತಿಭಟನೆಯ ಹಾದಿ ಯನ್ನು ಹಿಡಿದಿದ್ದು, ಜೂನ್ ೧ ರಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜ ರಾಗುತ್ತಿದ್ದಾರೆ. ತಮ್ಮ ಬೇಡಿಕೆಗೆ ಸರ್ಕಾರವು ಸ್ಪಂದಿಸದೆ ಇದ್ದಲ್ಲಿ, ಮುಂದಿನ ಹಂತದ ಹೋರಾಟಕ್ಕೆ ಸಜ್ಜುಗೊಳ್ಳುವುದಾಗಿ ಕರ್ನಾಟಕ ರಾಜ್ಯ ಆಯುಷ್ ವೈದ್ಯಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಜೆ.ಈರಣ್ಣ ತಿಳಿಸಿದರು.
ಡಾ. ಸಿ.ಎ.ಹಿರೇಮಠ, ಡಾ. ಕುಮಾರ ಸಾಗರ, ಜಿಲ್ಲಾಧ್ಯಕ್ಷ ಡಾ ಸತೀಶ ಆಚಾರ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಎ.ಎಸ್. ಪುಷ್ಪ, ಡಾ. ಎಸ್. ರಾಘವೇಂದ್ರ,  ಡಾ. ಸತೀಶ ಎಂ.ಬಿ. ಡಾ. ಟಿ.ಎಂ. ಕಾಂತರಾಜ, ಡಾ. ರವಿರಾಜ, ಡಾ. ಹರ್ಷ ಪುತ್ರಾಯ, ಡಾ. ಎಸ್. ಎಚ್. ಲಿಂಗರಾಜ, ಡಾ. ಸುರೇಂದ್ರ ಮತ್ತಿತರರು ಉಪಸ್ಥಿತರಿದ್ದರು. 

Ad Widget

Related posts

ರಸಗೊಬ್ಬರ ಬೆಲೆ: ಇಲ್ಲಿದೆ ನಿಖರ ಮಾಹಿತಿ

Malenadu Mirror Desk

ಶಿವಮೊಗ್ಗದಲ್ಲಿ 672 ಸೋಂಕು, 6 ಸಾವು

Malenadu Mirror Desk

ಶಿವಮೊಗ್ಗದಲ್ಲಿ146 ಮಂದಿಗೆ ಕೊರೊನ ಒಂದು ಸಾವು ಯಾವ ತಾಲೂಕುಗಳಲ್ಲಿ ಎಷ್ಟು ಪಾಸಿಟಿವ್? ಇಲ್ಲಿದೆ ಮಾಹಿತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.