ಶಿವಮೊಗ್ಗ ಸಮೀಪದ ಸಕ್ರೆಬೈಲ್ ಆನೆಬಿಡಾರದ ಮಾವುತರು ಮತ್ತು ಕಾವಾಡಿಗಳಿಗೆ ಶುಕ್ರವಾರ ವೈಲ್ಡ್ ಟಸ್ಕರ್ ಸಂಸ್ಥೆಯಿಂದ ಆಹಾರ ಕಿಟ್‍ಗಳನ್ನು ವಿತರಿಸಿತು. ಈ ಸಂದರ್ಭ ಮಾತನಾಡಿದ ಸಂಸ್ಥೆಯ ಗೌರವ ಟ್ರಷ್ಟಿ ಎಂ.ಶ್ರೀಕಾಂತ್ ಅವರು, ಸರಕಾರ ಅರಣ್ಯ ಇಲಾಖೆ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಅವರಿಗೆ ಲಸಿಕೆ ನೀಡಬೇಕು. ಕೊರೊನ ಸಂಕಷ್ಟದ ಸಮಯದಲ್ಲಿ ಕೆಳಹಂತದ ಸಿಬ್ಬಂದಿಗಳಿಗೆ ಸಂಸ್ಥೆ ನೆರವು ನೀಡುತ್ತಿರುವುದು ಸಂತೋಷದ ಸಂಗತಿ ಎಂದರು.
ಶಿವಮೊಗ್ಗ ಪ್ರೆಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ವೈಲ್ಡ್ ಟಸ್ಕರ್ ಸಂಸ್ಥೆ ಕಾಡಿನ ಮಕ್ಕಳೇ ಆಗಿರುವ ಕಾವಾಡಿಗಳು ಮತ್ತು ಮಾವುತರಿಗೆ ಆಹಾರ್ ಕಿಟ್‍ನೀಡುತ್ತಿರುವುದು ಮಾದರಿ ಕೆಲಸ ಎಂದರು.
ಸಂಸ್ಥೆ ನಿರ್ದೇಶಕ ಪಿ.ಜೇಸುದಾಸ್ ಮಾತನಾಡಿ, ಆಹಾರ ಕಿಟ್ ನೀಡಲು ನೆರವಾದ ಡಾ.ಈರಣ್ಣ, ಸಂತೋಷ್ ನಡುಬೆಟ್ಟ, ಜ್ಞಾನೇಶ್ ತೆಗ್ಗಿನಮಠ ಅವರನ್ನು ಸ್ಮರಿಸಿದರು. ಸಂಸ್ಥೆ ನಿರಂತರವಾಗಿ ಈ ರೀತಿಯ ಕೆಲಸ ಮಾಡಲಿದೆ ಎಂದರು.