ಶಿವಮೊಗ್ಗ ಜಿಲ್ಲೆಯ ಎಲ್ಲಾ ಅಧಿಕೃತ ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸಗೊಬ್ಬರಗಳನ್ನು ಪರಿಷ್ಕøತ ದರದಲ್ಲೇ ಪಾಯಿಂಟ್ ಆಫ್ ಸೇಲ್ ಉಪಕರಣದಲ್ಲೇ ಮಾರಾಟ ಮಾಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣ್ ಕುಮಾರ್ ತಿಳಿಸಿದ್ದಾರೆ.
ರಸಗೊಬ್ಬರ ಖರೀದಿಗೆ ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್‍ನೊಂದಿಗೆ ತೆರಳಿ ಬಿಲ್ ಪಡೆದು ಖರೀದಿಸಬೇಕು. ಒಂದು ವೇಳೆ ಯಾವುದೇ ರಸಗೊಬ್ಬರ ಮಾರಾಟಗಾರರು ಪಾಯಿಂಟ್ ಆಫ್ ಸೇಲ್ ಉಪಕರಣ ಹೊರತುಪಡಿಸಿ ರಸಗೊಬ್ಬರ ಮಾರಾಟ ಅಥವಾ ರಸಗೊಬ್ಬರಗಳನ್ನು ನಿಗದಿಪಡಿಸಿದ ಪರಿಷ್ಕøತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಧಿಕಾರಿಗಳಿಗೆ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕರಿಗೆ (8277935643) ದೂರು ನೀಡಿದರೆ ಅಂತಹ ಮಾರಾಟಗಾರರ ವಿರುದ್ಧ ರಸಗೊಬ್ಬರ ನಿಯಂತ್ರಣ ಆದೇಶದಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.