Malenadu Mitra
ರಾಜ್ಯ ಶಿವಮೊಗ್ಗ

ಕುವೆಂಪು ವಿವಿ ದೇಶದ 56ನೇ ಶ್ರೇಷ್ಠ ಸಂಶೋಧನಾ ಸಂಸ್ಥೆ

ಜಾಗತಿಕ ವಿವಿಗಳ ಪೈಕಿ 569ನೇ ರ್‍ಯಾಂಕಿಂಗ್ ಮತ್ತು ಏಷ್ಯಾದಲ್ಲಿ 303ನೇ ಸ್ಥಾನ
ಉನ್ನತ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗಳ ಜಾಗತಿಕ ರ್‍ಯಾಂಕಿಂಗ್ ಅನ್ನು ನಿರ್ಧರಿಸುವ ಪ್ರತಿಷ್ಠಿತ ಸೈಮ್ಯಾಗೋ ಪಟ್ಟಿಯು ಇತ್ತೀಚೆಗೆ ಬಿಡುಗಡೆಯಾಗಿದ್ದು, ಕುವೆಂಪು ವಿಶ್ವವಿದ್ಯಾಲಯವು ಭಾರತದ ವಿಶ್ವವಿದ್ಯಾಲಯಗಳ ಪೈಕಿ ೫೬ನೇ ಸ್ಥಾನ ಪಡೆದ ಸಾಧನೆ ಮಾಡಿದೆ.
 ಕಳೆದ ವರ್ಷ66ನೇ ಸ್ಥಾನದಲ್ಲಿದ್ದ ವಿಶ್ವವಿದ್ಯಾಲಯ,2021ರ ಸಾಲಿನಲ್ಲಿ ಸಂಶೋಧನಾ ಮಾನದಂಡದಲ್ಲಿ 41ನೇ ಸ್ಥಾನ, ನಾವೀನ್ಯತೆಯಲ್ಲಿ ೩೮ನೇ ಸ್ಥಾನ ಮತ್ತು ಸಾಮಾಜಿಕ ಪ್ರಭಾವ ಮಾನದಂಡದಲ್ಲಿ26ನೇ ಸ್ಥಾನ ಪಡೆದಿದ್ದು, ಸಮಗ್ರವಾಗಿ 56ನೇ ಸ್ಥಾನ ಪಡೆದಿದೆ.
ಜಗತ್ತಿನಾದ್ಯಂತ ವಿಜ್ಞಾನ ಸಂಶೋಧನಾ ಪ್ರಕಟಣೆಗಳ ಶ್ರೇಷ್ಠತೆಯನ್ನು ಅಳೆಯುವ ಸ್ಕೋಪಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸಮೀಕ್ಷೆ ಕೈಗೊಳ್ಳುವ ಸೈಮ್ಯಾಗೋ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸರ್ಕಾರಿ, ಖಾಸಗಿ, ಆರೋಗ್ಯ, ಉನ್ನತ ಶಿಕ್ಷಣ ಮತ್ತು ಸರ್ಕಾರೇತರ ಕ್ಷೇತ್ರಗಳ ವಿಭಾಗಗಳಲ್ಲಿ7533 ಸಂಸ್ಥೆಗಳನ್ನು ಒಳಗೊಂಡ 2021ನೇ ಸಾಲಿನ ಸಮಗ್ರ ರ್‍ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸಂಶೋಧನಾ ಚಟುವಟಿಕೆ, ನಾವೀನ್ಯತೆ ಹಾಗೂ ಅವುಗಳ ಸಾಮಾಜಿಕ ಪ್ರಭಾವವನ್ನು ರ್‍ಯಾಂಕಿಂಗ್ ಮಾನದಂಡಗಳಾಗಿ ಪರಿಗಣಿಸುತ್ತ್ತಿದ್ದು, ಜಾಗತಿಕವಾಗಿ ಅತ್ಯಂತ ವಿಶ್ವಾಸಾರ್ಹತೆಯನ್ನು ಹೊಂದಿದೆ.
ಜಾಗತಿಕ ವಿಶ್ವವಿದ್ಯಾಲಯಗಳ ಸಮಗ್ರ ರ್‍ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿವಿ 569ನೇ ಸ್ಥಾನ ಗಳಿಸಿದ್ದು, ಏಷ್ಯಾ ವಲಯದಲ್ಲಿ 1437ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 303ನೇ ಸ್ಥಾನಗಳಿಸಿದೆ ಮತ್ತು ಭಾರತದ ವಿಶ್ವವಿದ್ಯಾಲಯಗಳ ಪಟ್ಟಿಯೊಳಗೆ 56ನೇ ಸ್ಥಾನ ಗಿಟ್ಟಿಸಿದೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕ ಮೂಲದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೊದಲನೇ ಸ್ಥಾನದಲ್ಲಿದ್ದರೆ, ಮಣಿಪಾಲ ವಿಶ್ವವಿದ್ಯಾಲಯ15ನೇ ಸ್ಥಾನದಲ್ಲಿದೆ. ಜೈನ್ ವಿಶ್ವವಿದ್ಯಾಲಯ48ನೇ ಸ್ಥಾನದಲ್ಲಿದ್ದರೆ, ಯೆನೋಪಾಯ ವಿವಿ ೪೯ನೇ ಸ್ಥಾನದಲ್ಲಿದೆ.
ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪೈಕಿ ಕುವೆಂಪು ವಿಶ್ವವಿದ್ಯಾಲಯ 56ನೇ ರ್‍ಯಾಂಕಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ (60), ಮೈಸೂರು ವಿಶ್ವವಿದ್ಯಾಲಯ (80), ಕರ್ನಾಟಕ ವಿಶ್ವವಿದ್ಯಾಲಯ (110), ಮತ್ತು ಮಂಗಳೂರು ವಿಶ್ವವಿದ್ಯಾಲಯ (112)ಗಳು ಸ್ಥಾನ ಪಡೆದುಕೊಂಡಿವೆ.


ಸಾಂಪ್ರದಾಯಿಕ ಶೈಕ್ಷಣಿಕ ಕೋರ್ಸ್‌ಗಳನ್ನು ನಡೆಸುವ ಜೊತೆ ಜೊತೆಯಲ್ಲಿಯೇ ಸಂಶೋಧನೆಯಲ್ಲೂ ಗಮನಾರ್ಹ ಸಾಧನೆ ತೋರುತ್ತಿರುವ ಕುವೆಂಪು ವಿವಿ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ ಈ ರ್‍ಯಾಂಕಿಂಗ್ ಪಡೆದಿರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟವನ್ನು ತೋರಿಸುತ್ತದೆ.
ಪ್ರೊ. ಬಿ. ಪಿ. ವೀರಭದ್ರಪ್ಪ , ಕುಲಪತಿ,ಕುವೆಂಪು ವಿವಿ

2010ರಲ್ಲಿ 792ನೇ ರ್‍ಯಾಂಕ್‌ನಲ್ಲಿದ್ದ ವಿವಿಯು, 2020ರಲ್ಲಿ774ನೇ ರ್‍ಯಾಂಕ್‌ಗೆ ಪಡೆದಿತ್ತು. ಪ್ರಸ್ತುತ ಜಾಗತಿಕ ವಿಶ್ವವಿದ್ಯಾಲಯಗಳ ಪೈಕಿ569ನೇ ಸ್ಥಾನ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
-ಪ್ರೊ. ಎಸ್. ಎಸ್. ಪಾಟೀಲ್ ,ಕುಲಸಚಿವ ,ಕುವೆಂಪು ವಿವಿ

Ad Widget

Related posts

ಕಾಂಗ್ರೆಸ್ ಒಡೆದ ಮನೆಯಾಗಿದೆ, ಸಿದ್ದರಾಮಯ್ಯ ವಿರುದ್ಧ ಅಲ್ಲಿ ಅಲೆ ಎದ್ದಿದೆ : ಕೆ.ಎಸ್.ಈಶ್ವರಪ್ಪ ಲೇವಡಿ

Malenadu Mirror Desk

ಶಾರದಾ ಪೂರ್‍ಯಾನಾಯ್ಕ್ ನೇತೃತ್ವದಲ್ಲಿಜೆಡಿಎಸ್ ಪ್ರತಿಭಟನೆ

Malenadu Mirror Desk

ರಾಗಿಗುಡ್ಡ ಘಟನೆಗೆ ವಿಷಾದ ವ್ಯಕ್ತಪಡಿಸಿದ ಸಚಿವ ಮಧುಬಂಗಾರಪ್ಪ, ಶಾಂತಿಯಿಂದ ಇರಲು ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.