ಮೂರು ದಿನದಿಂದ ಮಲೆನಾಡಿನ ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಅಧಿಕ ನೀರು ಗಾಜನೂರು ಡ್ಯಾಂಗೆ ಹರಿದುಬಂದ್ದಿದು, ಒಳಹರಿವು ಹೆಚ್ಚಾಗಿದೆ.ಗಾಜನೂರು ತುಂಗಾ ಜಲಾಶಯದ 22 ಗೇಟ್ ನಲ್ಲಿ 21 ಗೇಟ್ ತೆಗೆಯಲಾಗಿದೆ.
ತುಂಗಾ ಜಲಾಶಯದಿಂದ ವಿದ್ಯುತ್ ಉತ್ಪಾದನೆಗೆ 5300 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು, ಒಟ್ಟು 7300 ಕ್ಯೂಸೆಕ್ಸ್ ನಷ್ಟು ನೀರು ನದಿಗೆ ಬಿಡುಗಡೆ ಮಾಡಲಾಗಿದೆ
ತುಂಗಾ ಜಲಾಶಯಕ್ಕೆ 3774 ಕ್ಯೂಸೆಕ್ ಒಳಹರಿವು ಇದ್ದು, 3.24 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 2.411 ಟಿಎಂಸಿಯಷ್ಟು ನೀರಿದೆ. ವಿದ್ಯುತ್ ಉತ್ಪಾದನೆ ಮತ್ತು ಜಲಾಶಯದಿಂದ ನೇರವಾಗಿ ಒಟ್ಟು 9500 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ.