Malenadu Mitra
ಶಿವಮೊಗ್ಗ ಹೊಸನಗರ

ಪಿಂಚಿಣಿ ಹಣಕ್ಕಾಗಿ ಹೆತ್ತತಾಯಿಗೆ ಮಗ, ಸೊಸೆಯಿಂದ ಮಾರಣಾಂತಿಕ ಹಲ್ಲೆ

ರಿಪ್ಪನ್‍ಪೇಟೆ;-ಪಟ್ಟಣದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರುವೆ ಗ್ರಾಮದ ವಾಸಿ ಇಂದ್ರಮ್ಮ (65) ಎಂಬ ವೃದ್ದೆಗೆ ಮಗ ಮತ್ತು ಸೊಸೆ ಪಿಂಚಣಿ ಹಣ ನೀಡುವಂತೆ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ಎಸಗಿದ್ದು ಮಗ ಪ್ರವೀಣ ಯಾನೆ ಅಣ್ಣಪ್ಪ ಮತ್ತು ಸೊಸೆ ವಿರುದ್ದ ಕೇಸ್ ದಾಖಲಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ತಂದೆ ಸತ್ಯನಾರಾಯಣ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯಾಗಿ ನಿವೃತ್ತರಾಗಿ ಮೃತರಾಗಿದ್ದು ಅವರ ಪತ್ನಿ ಇಂದ್ರಮ್ಮರಿಗೆ ಪಿಂಚಣಿ ಹಣ ಬರುತ್ತಿದ್ದು ಅದನ್ನು ಪ್ರತಿತಿಂಗಳು ನಮಗೆ ಕೊಡಬೇಕು ಎಂದು ಸೊಸೆ ಗ್ರಾಮ ಪಂಚಾಯ್ತಿ ಉಪಾದ್ಯಕ್ಷೆ ಮಹಾಲಕ್ಷ್ಮಿ ಗಂಡ ಪ್ರವೀಣ್‍ಗೆ ಪ್ರಚೋದನೆ ನೀಡಿದ ಪರಿಣಾಮ ಮಂಗಳವಾರ ರಾತ್ರಿ ಕತ್ತುಹಿಸುಕಿ ಕೊಲೆಗೆ ಪ್ರಯತ್ನಿಸಿದ ಪ್ರಸಂಗ ನಡೆದು ತಾಯಿ ಇಂದ್ರಮ್ಮ ಸ್ಥಳೀಯ ಪೊಲೀಸ್ ಠಾಣೆ ದೂರು ನೀಡಿದ ಹಿನ್ನಲೆಯಲ್ಲಿ ಕೇಸ್ ದಾಖಲಿಸಿಕೊಂಡು ಅರೋಪಿ ಮಗ ಪ್ರವೀಣ್ ಯಾನೆ ಅಣ್ಣಪ್ಪನನ್ನು
ಬಂಧಿಸಿ ಪೊಲೀಸರು ಮುಂದಿನ ತೆನಿಖೆ ಕೈಗೊಂಡಿದ್ದಾರೆ

Ad Widget

Related posts

ಎಲ್ಲ ಅರ್ಹರು ಬೂಸ್ಟರ್ ಡೋಸ್ ಪಡೆಯುವಂತೆ ಸಚಿವರ ಕರೆ

Malenadu Mirror Desk

ಶತಕ ದಾಟಿದ ಪೆಟ್ರೋಲ್ ಬೆಲೆ: ಸಿಎಂ ತವರಿನಲ್ಲಿ ಅಣಕು ಸಂಭ್ರಮಾಚರಣೆ

Malenadu Mirror Desk

ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.