ವೃತ್ತಿನಿರತ ವೈದ್ಯರ ಮೇಲಾಗುತ್ತಿರುವ ಹಲ್ಲೆಯನ್ನು ಖಂಡಿಸಿ ಶಿವಮೊಗ್ಗದ ಭಾರತೀಯ ವೈದ್ಯಕೀಯ ಸಂಘದ ಆವರಣದಲ್ಲಿ ಶುಕ್ರವಾರ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಸಭೆ ನಡೆಸಿದರು.
2021ರ ಜೂನ್ 18 ರಂದು, ದೇಶಾದ್ಯಂತ ಭಾರತೀಯ ವೈದ್ಯ ಸಂಘ ಈ ದಿನವನ್ನು ರಾಷ್ಟ್ರೀಯ ಪ್ರತಿಭಟನಾ ದಿನವಾಗಿ ಆಚರಿಸುತ್ತಿದೆ. ಇಡೀ ದೇಶಾದ್ಯಂತ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಈ ಹಿಂಸೆಯ ಘಟನೆಗಳನ್ನು ನೋಡಿ ನಮಗೆಲ್ಲಾ ತುಂಬಾ ನೋವಾಗಿದೆ. ಅಸ್ಸಾಂನಲ್ಲಿ ನಮ್ಮ ಯುವ ವೈದ್ಯರ ಮೇಲೆ ಕ್ರೂರ ಹತ್ಯೆಯಾಗಿದೆ ಮತ್ತು ಮಹಿಳಾ ವೈದ್ಯರ ಮೇಲೆ ಅನುಭವಿ ವೈದ್ಯರ ಮೇಲೆ ಕ್ರೂರ ಹಲ್ಲೆಗಳು ವೃತ್ತಿನಿರತ ವೈದ್ಯರಲ್ಲಿ ಮಾನಸಿಕ ಆಘಾತವನ್ನು ಉಂಟುಮಾಡುತ್ತಿವೆ ಎಂದು ಪ್ರತಿಭಟನಾಕರರು ಆರೋಪಿಸಿದರು.
ಆಧುನಿಕ ಆರೋಗ್ಯ ರಕ್ಷಣಾ ವೃತ್ತಿಗೆ ಸೂಕ್ತವಾದ ವಾತಾವರಣವನ್ನು ಕಲ್ಪಿಸಬೇಕು. ವೈದ್ಯರ ಮೇಲಾಗುತ್ತಿರುವ ದೈಹಿಕ ಹಲ್ಲೆಗಳು ನಿಲ್ಲಬೇಕು ಮತ್ತು ಈ ಮುಷ್ಕರವನ್ನು ರೋಗಿಗಳಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಮಾಡುತ್ತಿದ್ದೇವೆ. ನಮ್ಮ ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರೆಯುತ್ತವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಐಎಂಎ ಅಧ್ಯಕ್ಷ ಡಾ.ಪರಮೇಶ್ವರ ಶಿಗ್ಗಾಂವಿ, ಡಾ.ಶಂಭುಲಿಂಗ, ಡಾ.ಕೆ.ಬಿ.ಶೇಖರ್, ಡಾ.ರಾಹುಲ್ ನವೀನ್ ಮತ್ತಿತರರು ಭಾಗವಹಿಸಿದ್ದರು.
previous post