ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು, ತುಂಗಾ,ಭದ್ರಾ ಹಾಗೂ ಶರಾವತಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮೂರು ನದಿಗಳ ನೀರಿನ ಮಟ್ಟ ಏರಿಕೆ ಕಂಡು ಬರುತ್ತಿದೆ. ಕೊಪ್ಪ, ಶೃಂಗೇರಿಯಲ್ಲಿ ಮಳೆ ಹೆಚ್ಚಾಗಿರುವುದರಿಂದ ತೀರ್ಥಹಳ್ಳಿಯಲ್ಲಿತುಂಗೆ ಮೈದುಂಬಿ ಹರಿಯುತ್ತಿದ್ದಾಳೆ. ಗಾಜನೂರು ಜಲಾಶಯಕ್ಕೆ 27000 ಕ್ಯೂಸೆಕ್ ಒಳಹರಿವಿದ್ದು, 33000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಶನಿವಾರ ಶಿವಮೊಗ್ಗ ನಗರದ ಕೋರ್ಪಲಯ್ಯನ ಛತ್ರದ ಬಳಿ ಇರುವ ಮಂಟಪ ಮುಳುಗುವ ಹಂತಕ್ಕೆಬAದಿದ್ದು, ಎರಡು ಅಡಿಯಷ್ಟೇ ಬಾಕಿಯಿದೆ.
ಭದ್ರಾನದಿಗೆ 148.4 ಅಡಿ ನೀರು ಬಂದಿದ್ದು,17885ಕ್ಯೂಸೆಕ್ ಒಳ ಹರಿವಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನದಿಗೆ 135.2 ಅಡಿ ನೀರು ಬಂದಿತ್ತು. ಲಿಂಗನಮಕ್ಕಿ ಜಲಾಶಯಕ್ಕೆ 1782.80 ಅಡಿ ನೀರು ಬಂದಿದ್ದು, ನದಿಗೆ 229473 ಕ್ಯೂಸೆಕ್ ನೀರು ಒಳಹರಿವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1760.10 ಅಡಿಯಾಗಿತ್ತು. ಜೋಗ ಜಲಪಾತಕ್ಕೆ ಹೆಚ್ಚಿನ ನೀರು ಬಂದಿದ್ದು, ಜಲಪಾತದ ದೃಶ್ಯ ರುದ್ರ ರಮಣೀಯವಾಗಿದೆ.
ತಾಲೂಕುವಾರು ಮಳೆವಿವರ
ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರದಲಿ 288 ಮಿ.ಮೀ ಅತಿಹೆಚ್ಚು ಮಳೆಯಾಗಿದೆ. ಉಳಿದಂತೆ ಶಿವಮೊಗ್ಗದಲ್ಲಿ 4.80,ಭದ್ರಾವತಿ 4.40 ತೀರ್ಥಹಳ್ಳಿಯಲ್ಲಿ 37.80. ಶಿಕಾರಿಪುರದಲ್ಲಿ7.60, ಸೊರಬ ತಾಲೂಕಿನಲ್ಲಿ 32.40 ಮಿಮೀ