ಇಂಧನ ಮತ್ತುಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು.
ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಜೀವನ ಕಷ್ಟವಾಗಿದೆ. ಕೂಡಲೆ ಸರಕಾರ ತೆರಿಗೆ ಇಳಿಸಿ ಬೆಲೆ ಏರಿಕೆ ನಿಯಂತ್ರಿಸಬೇಕು. ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ ಆರ್.ಮಂಜು, ರಾಜ್ಯ ಸಂಚಾಲಕ ಎಸ್.ಮಧು, ತಾಲೂಕು ಅಧ್ಯಕ್ಷ ಶೈಲೇಶ್, ನಗರಾಧ್ಯಕ್ಷ ಲೋಹಿತ್ ನಾಗಸಂದ್ರ, ಅನಿಲ್ ಕುಮಾರ್, ರವಿ ಮತ್ತಿತರರು ಭಾಗವಹಿಸಿದ್ದರು .