Malenadu Mitra
ರಾಜ್ಯ ಶಿವಮೊಗ್ಗ ಸಾಗರ

ದಮನಿತ ಮಹಿಳಿಯರಿಗೆ ವಸತಿ ಸೌಲಭ್ಯ

ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಶೀಘ್ರದಲ್ಲೇ ಮಹಿಳಾ ಅಭಿವೃದ್ದಿ ನಿಗಮಕ್ಕೆ ಜಾಗ ದೊರಕಲಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಶಿಕಲಾ ವಿ.ಟೆಂಗಳಿ ಹೇಳಿದರು.
 ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಯೋಜನೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿ ಸೌಲಭ್ಯಕ್ಕೆ ಮನವಿ

ನಿಗಮದ ವತಿಯಿಂದ ಪ್ರತಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ದಮನಿತರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಜಾಗ ನೀಡುವಂತೆ ಮನವಿ ಮಾಡಿದ್ದೇನೆ. ಶಿವಮೊಗ್ಗದ ಜಿಲ್ಲಾಧಿಕಾರಿಗಳು ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, 5 ಎಕರೆ ಜಾಗ ನೀಡಲು ಒಪ್ಪಿದ್ದಾರೆ. ಶಿವಮೊಗ್ಗ ನಗರದಲ್ಲಿ ಸುಮಾರು 300 ದಮನಿತ ಮಹಿಳೆಯರು ಮತ್ತು600 ಅಂಗತ್ವ ಅಲ್ಪಸಂಖ್ಯಾತರಿದ್ದು, ಇವರು ಸ್ವಾವಲಂಬಿಗಳಾಗಿ ಮತ್ತು ಗೌರವಯುತವಾಗಿ ಜೀವಿಸಲು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ಮಾಡದಂತೆ ಮನವಿ ಮಾಡುತ್ತೇನೆ ಎಂದರು.
 ನಿಗಮದ ವಿವಿಧ ಯೋಜನೆಗಳಾದ ಉದ್ಯೋಗಿನಿ, ಕಿರುಸಾಲ, ಸಮೃದ್ದಿ, ಪ.ಜಾತಿ-ಪ.ಪಂ ಉಪಯೋಜನೆಗಳು, ಧನಶ್ರೀ, ಚೇತನ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳು ಒಳಗೊಂಡಂತೆ ದಮನಿತ-ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಗೆ ಅನುಕೂಲವಾಗುವಂತಹ ಇತರೆ ಯೋಜನೆಗಳನ್ನೂ ಅವರಿಗೆ ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು.
ಘಟಕ ಸ್ಥಾಪನೆಗೆ ಧನಸಹಾಯ   

  ರಾಯಚೂರು, ಹೊಸಪೇಟೆ ಜಿಲ್ಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಒಟ್ಟಾಗಿ ಉತ್ಪಾದಕ ಘಟಕಗಳನ್ನು ಸ್ಥಾಪಿಸಿ ನಡೆಸುತ್ತಿದ್ದಾರೆ. ಹೊಸಪೇಟೆಯಲ್ಲಿ ಸ್ಥಾಪಿಸಲಾಗಿರುವ ಶೇಂಗಾ ಚಕ್ಕಿ ಘಟಕ ಅತ್ಯಂತ ಯಶಸ್ವಿಯಾಗಿದೆ. ಇದೇ ರೀತಿ ನೀವು ಯಾವುದಾದರೂ ಘಟಕ ಸ್ಥಾಪಿಸಲು ಮುಂದಾದಲ್ಲಿ ನಿಗಮ ಆರ್ಥಿಕ ಸೌಲಭ್ಯ ನೀಡಲು ಸಿದ್ದವಾಗಿದೆ. ಹಾಗೂ ಘಟಕ ಸ್ಥಾಪನೆ ಬಗ್ಗೆ ತರಬೇತಿ ಸಹ ನಿಡಲಾಗುವುದು ಎಂದರು. ೧೫ ರಿಂದ ೨೦ ಜನ ಸಂಘಟಿತರಾಗಿ ಧೃಡ ಮನಸ್ಸು ಮಾಡಿ ಮುಂದೆ ಬಂದರೆ ತರಬೇತಿ ಜೊತೆಗೆ ಘಟಕ ಸ್ಥಾಪಿಸಲು ಸಹಕಾರ ನೀಡಲಾಗುವುದು ಎಂದರು.
     ಹಾಗೂ ಪ್ರತಿ ಜಿಲ್ಲೆಗಳಲ್ಲಿ ನಿಗಮದ ವತಿಯಿಂದ ಒಂದೊಂದು ಸ್ವ ಸಹಾಯ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ಇದನ್ನು ಸಾಕಾರಗೊಳಿಸಲು ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು, ಮಾಜಿ ದೇವದಾಸಿಯರು ಸಂಘಟಿತರಾಗಿ ಮುಂದೆ ಬರಬೇಕೆಂದರು.
ಆನ್‌ಲೈನ್ ಅರ್ಜಿ  

ನಿಗಮದ ವಿವಿಧ ಯೋಜನೆಗಳಡಿ ಸಾಲ ಪಡೆದಿರುವವರು ಸಾಲವನ್ನು ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ ಸಕಾಲದಲ್ಲಿ ಬ್ಯಾಂಕಿಗೆ ಸಾಲ ಮರು ಪಾವತಿ ಮಾಡಬೇಕು. ಆಗ ಬ್ಯಾಂಕ್‌ನವರು ಕೂಡ ಉತ್ತಮವಾಗಿ ಸಹಕರಿಸುತ್ತಾರೆ. ಕಿರುಸಾಲ ಪಡೆದು ಬಹುತೇಕ ಫಲಾನುಭವಿಗಳು ಸರಿಯಾಗಿ ಸಾಲ ಮರುಪಾವತಿ ಮಾಡಿರುತ್ತಾರೆ. ತಾಲ್ಲೂಕುಗಳ ಸಿಡಿಪಿಓ ಗಳು ಹೀಗೆ ಮರುಪಾವತಿ ಮಾಡಿದ ಮೇಲೆ ಮತ್ತೆ ಸಾಲದ ಅವಶ್ಯಕತೆ ಇದ್ದರೆ ಸಹಕರಿಸಬೇಕು. ಹಾಗೂ ಅವಶ್ಯಕತೆ ಇರುವವರಿಗೆ ಸಾಲ ದೊರಕಬೇಕೆಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಮಹಿಳಾ ಅಭಿವೃದ್ದಿ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಸುರೇಶ್, ಸಿ ಮಾತನಾಡಿ ಮಹಿಳಾ ಅಭಿವೃದ್ದಿ ನಿಗದಮ ವಿವಿಧ ಯೋಜನೆಗಳ ಕುರಿತು ಪ್ರಗತಿ ವರದಿ ಸಲ್ಲಿಸಿದರು. ತಾಲ್ಲೂಕುಗಳ ಸಿಡಿಪಿಓ ಗಳು ತಾಲ್ಲೂಕುಗಳ ಪ್ರಗತಿ ವರದಿ ಸಲ್ಲಿಸಿದರು.

 ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ, ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್ ಎಂ.ಡಿ ಸೇರಿದಂತೆ ವಿವಿಧ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

Ad Widget

Related posts

ಪರಿಸರ ರಕ್ಷಣೆಗೆ ಕಠಿಣ ಕಾನೂನು ಅಗತ್ಯವಿದೆ: ವಿನಯ್ ಗುರೂಜಿ

Malenadu Mirror Desk

ಕಾಂಗ್ರೆಸ್ ವತಿಯಿಂದ ಹುತಾತ್ಮರ ದಿನಾಚರಣೆ

Malenadu Mirror Desk

ಅಪಘಾತದ ಗಾಯಾಳುಗೆ ಆಪದ್ಭಾಂದವ ಬೇಳೂರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.