ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೊಡಮಾಡುವ2020 ನೇ ಸಾಲಿನ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಒಡಿಸ್ಸಾದ ಖ್ಯಾತ ಕವಿ ಕವಿ ಡಾ.ರಾಜೇಂದ್ರ ಕಿಶೋರ್ ಪಂಡಾ ಅವರು ಆಯ್ಕೆಯಾಗಿದ್ದಾರೆ. ಆಧುನಿಕ ಒರಿಯಾ ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿ ಕವಿಯಾಗಿರುವ ರಾಜೇಂದ್ರ ಕಿಶೋರ್ ಪಂಡಾ ಹದಿನಾರು ಕವನ ಸಂಕಲನ, ಒಂದು ಕಾದಂಬರಿ ಹಾಗೂ ಅಂತರ್ಜಾಲ ಸಂಪಾದನ ಕಾವ್ಯ ಸಂಚಯ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿರುವ ಪಂಡಾ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಅಂತರ್ಜಾಲ ಪತ್ರಿಕಾ ಸಂಪಾದಕರೂ ಆಗಿರುವ ಅವರಿಗೆ ಸಂಬಲ್ಪುರ್ ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿ ಸಮ್ಮಾನಿಸಿದೆ.
ಪ್ರತಿಷ್ಠಾನದ ಆಯ್ಕೆ ಸಮಿತಿಯಲ್ಲಿ ಡಾ.ಎಚ್.ಎಸ್.ಶಿವಪ್ರಕಾಶ್, ಅಗ್ರಹಾರ ಕೃಷ್ಣಮೂರ್ತಿ, ಬಂಗಾಳಿ ಸಾಹಿತಿ ಶಾಮಲ ಭಟ್ಟಾಚಾರ್ಯ ಅವರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಹಂಪ ನಾಗರಾಜಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ರಾಂಜೇಂದ್ರ ಕಿಶೋರ್ ಅವರ ಹೆಸರು ಅಂತಿಮಗೊಳಿಸಲಾಗಿದೆ. ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ 29 ರಂದು ಕುಪ್ಪಳಿಯಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ಕೋವಿಡ್-19 ಕಾರಣಕ್ಕೆ 2020 ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬವಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
next post