Malenadu Mitra
ರಾಜ್ಯ ಶಿವಮೊಗ್ಗ

ಜೀವ ಕಾಯ್ವ ವೈದ್ಯರೇ ನಿಮಗೆ ನಮೋ..ನಮಃ…

ಇಂದು ರಾಷ್ಟ್ರೀಯ ವೈದ್ಯರ ದಿನ

ನಿಜವಾಗಿಯೂ ನಾವುಗಳು ಈ ದಿನ ನಮ್ಮನ್ನು ದೇಶದ ಒಳಗಡೆ ಸೈನಿಕರಂತೆ ಕೊರೂನ ಎಂಬ ವೈರಿಯನ್ನು,ಅದರ ಜೊತೆಗೆ ವಿವಿದ ವೈರಿಗಳು ನಮ್ಮ ದೇಹಕ್ಕೆ ಆಕ್ರಮಣ ಮಾಡಿದಾಗ ಕಾಪಾಡುವವರು ವೈದ್ಯರು ಅದ್ದರಿಂದ ನಾವು ನಿಂತ ಸ್ಥಳದಿಂದ ನಮ್ಮ ನಮ್ಮವರನ್ನೂ ಕಾಪಾಡಿದ ವೈದ್ಯರಿಗೆ ಶಿರಬಾಗಿ ನಮಿಸೋಣ.

ನಮ್ಮ ಹುಟ್ಟಿನಿಂದ ಹಿಡಿದು,ಬದುಕಿನೊಂದಿಗೆ ಜೊತೆಗೆ ಸಾವಿನ ಜೊತೆಗೆ ನಮ್ಮ ತಂದೆ ತಾಯಿ ಬಂಧು ಬಳಗಕ್ಕಿಂತ ವಿಶೇಷ ರೀತಿಯ ಆರೈಕೆ,ಆರೋಗ್ಯ,ವಾತ್ಸಲ್ಯ ನೀಡುವ ಚೇತನ ವೈದ್ಯರು.ತಾಯಿಯಂತೆ ಮಮತೆ,ತಂದೆಯಂತೆ ದೈರ್ಯ,ಸ್ನೇಹಿತರಂತೆ ಪ್ರೀತಿ ತುಂಬಿ,ಸಾವಿನ ದವಡೆಯಿಂದ ಪಾರುಮಾಡುವ ಶಕ್ತಿ ಈ ನಮ್ಮ ವೈದ್ಯರಿಗೆ ಮಾತ್ರ ಸಾಧ್ಯ.ಅನಾರೋಗ್ಯದಲ್ಲಿ ಆರೋಗ್ಯ ಹುಡುಕುತ್ತಾ,ಸಂಕಷ್ಟದಲ್ಲಿ ಸಂತೋಷ ತರುವ ದೈವಿಕ ಸ್ವರೂಪಿಗಳು ವೈದ್ಯರು.

ಬದುಕಿನ ಕಷ್ಟದ ಕಾಲದಲ್ಲಿ ನಾವಿದ್ದೇವೆ ಎಂದು ತಮ್ಮ ಜೀವವನ್ನು ಪಣಕ್ಕಿಟ್ಟು ನಮ್ಮನ್ನು ಬದುಕಿಸುವ ಅತ್ಯಂತ ಸಂಕಷ್ಟ ಹರಣ ಮನೋಭಾವದವರು ವೈದ್ಯರು. ಈ ಕೊರೂನ ಸಂಕಷ್ಟಕಾಲದಲ್ಲಿ ನಮ್ಮ ಈ ವೈದ್ಯರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ.ಬಾಯಿ,ಮೂಗು ದೇಹಗಳನ್ನು ಮುಚ್ಚಿಕೊಂಡು, ಅತ್ಯಂತ ಅಪಾಯದ ಸ್ಥಿತಿಯಲ್ಲಿ ಇಡೀ ವಿಶ್ವವನ್ನು ಆರೋಗ್ಯದ ಪಥಕ್ಕೆ ಸಾಗಿಸುವ ಅತ್ಯಂತ ಜವಾಬ್ದಾರಿಯುತ ಕಾರ್ಯ ಮಾಡಿದವರು ವೈದ್ಯರು.ತಮ್ಮವರು ಬೇರೆಯವರು ಎಂದು ಎಣಿಸದೇ ತಮ್ಮ ಹತ್ತಿರ ಬರುವ ಕೊಳೆತ,ಸಾಂಕ್ರಾಮಿಕ ರೋಗವಿರುವ ಅಥವಾ ಎಂತಹ ಪರಿಸ್ಥಿತಿಯ ರೋಗಿಗಳನ್ನು ತಮ್ಮವರಂತೆ ಚಿಕಿತ್ಸೆ ನೀಡುವ ಏಕಮಾತ್ರ ವ್ಯೆಕ್ತಿಗಳು ವೈದ್ಯರು. ಈ ಕಾರಣದಿಂದಲೇ ವೈದ್ಯರನ್ನು “ವೈದ್ಯೂ ನಾರಾಯಣೋ ಹರಿಃ
ದೇವರಿಗೆ ಸರಿ ಸಮಾನವಾಗಿ ಕಾಣುತ್ತಾರೆ.

ದೇಶದ ಸ್ವಾಸ್ಥ್ಯ ವನ್ನು ಕಾಪಾಡುವ ಜವಾಬ್ದಾರಿ ವೈದ್ಯರಿಗಿದೆ.ಒಬ್ಬ ವೈದ್ಯರು ತಪ್ಪು ಮಾಡಿದರೇ ಒಂದು ಕುಟುಂಬ ಸರ್ವನಾಶವಾಗುತ್ತದೆ.ಒಬ್ಬ ವೈದ್ಯ ಮನಸ್ಸು ಮಾಡಿದರೇ ಇಡೀ ವಿಶ್ವವನ್ನೇ ಸುಖಿಯಾಗಿ ಇಡಬಲ್ಲರು.ಇಂದಿನ ಕೊರೂನ ಲಸಿಕೆಯನ್ನು ನಮ್ಮ ವೈದ್ಯ ವಿಜ್ಞಾನ ಕಂಡುಹಿಡಿದಿಲ್ಲವೆಂದರೇ ವಿಶ್ವವೆ ಸ್ಮಶಾನ ವಾಗುತ್ತಿತ್ತು.

ಇಂತಹ ಮಹಾನ್ ಕಾರ್ಯ ಮಾಡಿದ ನಮ್ಮ ರಾಷ್ಟ್ರೀಯ ವೈದ್ಯರನ್ನು ನೆನಪಿಸುವ ಹಾಗೂ ಈ ದಿನವನ್ನು ಆಚರಿಸುತ್ತಿರುವುದು ಮಹಾನ್ ನಾಯಕರು,ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರ ರಾಯ್ ರವರ ಸ್ಮರಣಾರ್ಥ. ಅವರೊಬ್ಬ ಅಸಾಧಾರಣ ವೈದ್ಯರಾಗಿದ್ದವರು.ರಾಜಕೀಯ ಉನ್ನತ ಸ್ಥಾನ ವನ್ನು ನಿಭಾಯಿಸುತ್ತಾ ಒಂದು ಗಂಟೆಯ ಕಾಲ ವೈದ್ಯರಾಗಿ ಕೊಳಚೆ ಪ್ರದೇಶದ ರೋಗಿಗಳ ಆರೋಗ್ಯವನ್ನು ಕಾಪಾಡುವ ಕಾಯಕವನ್ನು ಮಾಡುತ್ತಿದ್ದ ರಾಷ್ಟ್ರೀಯ ಚೇತನರು.

ಅವರ ಗಣನೀಯ ಸೇವೆಯನ್ನು ಪರಿಗಣಿಸಿ 1961ರ ಫೆಬ್ರವರಿ 4ರಂದು ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ರಾಷ್ಟ್ರೀಯ ಅತ್ಯುನ್ನತ ವ್ಯಕ್ತಿಯಾಗಿ ಗೌರವಿಸಿತು ವಿಸ್ಮಯಕಾರಿ ವಿಚಾರವೆಂದರೆ ಅವರು ಜನಿಸಿದ್ದು 1882, ಜುಲೈ.1ರಂದು,ಇವರು ದೈವದೀನರಾದುದ್ದು ಸಹಿತ 1962 ಜುಲೈ.1. ಅವರು ಜನಿಸಿದ ದಿನ ಮತ್ತು ತೀರಿಕೊಂಡ ದಿನ ಒಂದೇ ಆಗಿದೆ. ಇಂತಹ ಹತ್ತು ಹಲವು ಕಾರಣಗಳಿಂದ ಡಾ.ಬಿದಾನ್ ಚಂದ್ರ ರಾಯ್ ರವರ ಜನ್ಮ ಮತ್ತು ಮರಣದ ದಿನವನ್ನು ನಾವು ನಮ್ಮ ವೈದ್ಯರ ದಿನಾಚರಣೆಯಾಗಿ ಆಚರಿಸುತ್ತಾ ವೈದ್ಯರಿಗೆ ಗೌರವ ಸಲ್ಲಿಸುತ್ತೇವೆ.

ಒಬ್ಬ ಮಾದರಿ ವೈದ್ಯರಾಗಿ ತಮ್ಮ ಬದುಕು ಸವೆಸಿದ ಅವರ ನೆನಪಿನಲ್ಲೇ ರಾಷ್ಟ್ರೀಯ ವೈದ್ಯರ ದಿನ ಆಚರಿಸಬೇಕು .ಇವರ ಸೇವೆಯನ್ನು ಹಸಿರಾಗಿ ಇಡಬೇಕೆಂದು ಎಂದು ನಿರ್ಧರಿಸಿದ ಭಾರತ ಸರ್ಕಾರ 1991ರಲ್ಲಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಒಂದೊಂದು ಘೋಷವಾಕ್ಯಗಳೊಂದಿಗೆ ಆಚರಿಸುತ್ತಾ ಬಂದಿದೆ.

ರಾಯ್ ಅವರು ಅಪ್ರತಿಮ ವೈದ್ಯರಾಗಿದ್ದರು. ತಮ್ಮ ದೂರದೃಷ್ಟಿ ನಿಲುವುಗಳಿಂದ ವೈದ್ಯಲೋಕಕ್ಕೆ ಅಪರೂಪದ ಕೊಡುಗೆ ಕೊಟ್ಟವರು. ಮೇಲು ಕೀಳು ನೋಡದೆ, ಭೇದಭಾವ ಮಾಡದೆ ಎಲ್ಲರನ್ನೂ ಒಂದೇ ರೀತಿ ನೋಡಿದ ಜನಮೆಚ್ಚಿದ ವೈದ್ಯರಾಗಿದ್ದ ರಾಯ್, ಹೊಸತನದ ಆಲೋಚನೆಗಳನ್ನು ಹೊಂದಿದ್ದರು. 

1905ರಲ್ಲಿ ಅವರು ಕೋಲ್ಕತಾ ವಿವಿಯಲ್ಲಿ ಓದುತ್ತಿರುವಾಗ ಬಂಗಾಳ ವಿಭಜನೆಯಾಯಿತು. ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದ ರಾಯ್ ಅವರು ಕೆಲ ಕಾಲ ಮಹಾತ್ಮ ಗಾಂಧೀಜಿಯ ವೈದ್ಯರೂ ಆಗಿದ್ದರು ಎನ್ನುವುದು ವಿಶೇಷ. ಅವರು ವೈದ್ಯರಾಗಿದ್ದೂ ಅಲ್ಲದೆ ಆಡಳಿತದಲ್ಲೂ ಮುಂದೆ ನಿಂತು ಕೆಲಸ ಮಾಡಿದ್ದು, ಅಚ್ಚರಿ ತರುವಂತಹದ್ದು. 

ನಮ್ಮ ಈ ದಿನವನ್ನು ಸಾರ್ಥಕವಾಗಿ ಮಾಡಬೇಕಾದರೆ ವೈದ್ಯರು ಶಕ್ತಿ ಮೀರಿ ಶ್ರಮಿಸಿದಾಗ ಕೆಲವೊಮ್ಮೆ ದುರ್ಘಟನೆಗಳು ಸಂಭವಿಸಿದಾಗ ವೈದ್ಯರ ಮೇಲೆ ಹಲ್ಲೆ ನಡೆಸುವುದು.ಬೆದರಿಕೆ ಹಾಕುವುದು,ಆಸ್ಪತ್ರೆಗೆ ಹಾನಿ ಮಾಡುವುದು ಮಾಡದೇ ನಮ್ಮಂತೆಯೇ ಅವರು ಹೃದಯವಿರುವ ಕರುಣಾಮಯಿಗಳು ಎಂದು ಅರಿತು ಅವರಿಗೆ ಅತ್ಯುತ್ತಮ ಗೌರವ ನೀಡಿದಾಗ ವೈದ್ಯರಿಗೆ ಇನ್ನೂ ಹೆಚ್ಚಿನ ಬದ್ಧತೆ ಕಾಯಕ ಮಾಡುವರು. ಅವರು ಭಯರಹಿತ ಚಿಕಿತ್ಸೆ ನೀಡಲು ಅನುಕೂಲ ವಾಗುತ್ತದೆ.

ಚಂದ್ರಪ್ಪ ಅಳೂರು , ಶಿಕ್ಷಕರು ಹಾಳಸಸಿ
ಸಾಗರ

Ad Widget

Related posts

ಶಿವಮೊಗ್ಗ ದಸರಾಗೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಚಾಲನೆ

Malenadu Mirror Desk

ಚುನಾವಣೆ ದಿನ ಸಿಗಂದೂರಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಸರ್ವರೂ ಮತದಾನದಲ್ಲಿ ಭಾಗಿಯಾಗಿ: ಧರ್ಮದರ್ಶಿ ಡಾ.ರಾಮಪ್ಪ

Malenadu Mirror Desk

ನೂತನ ಕುಲಸಚಿವರಿಂದ ಅಧಿಕಾರ ಸ್ವೀಕಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.