ಸಾಗರ : ಸಂಕಷ್ಟದ ಸಂದರ್ಭದಲ್ಲಿ ನೊಂದ ಜನರ ಪರವಾಗಿ ನಿಲ್ಲುವುದು ಮಾನವೀಯ ಲಕ್ಷಣ. ಅಂತಹ ಕೆಲಸವನ್ನು ಕೊರೋನಾ ಸೇರಿದಂತೆ ಹಿಂದೆನೆಲ್ಲಾ ಸಂಕಷ್ಟ ಸಂದರ್ಭದಲ್ಲಿ ನಾನು ವೈಯಕ್ತಿಕವಾಗಿ ನೀಡಿದ್ದೇನೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಗಣಪತಿ ದೇವಸ್ಥಾನ ಆವರಣದಲ್ಲಿ ಗುರುವಾರ ಗೋಪಾಲಕೃಷ್ಣ ಅಭಿಮಾನಿ ಬಳಗದ ವತಿಯಿಂದ ಅರ್ಚಕರಿಗೆ ಮತ್ತು ಪುರೋಹಿತರಿಗೆ ದಿನಸಿ ಕಿಟ್ ವಿತರಣೆ ಹಿರಿಯ ಪುರೋಹಿತ ಎಸ್. ಗಜಾನನ ಜೋಯ್ಸ್ ಅವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಕೊರೋನಾ ಹಿನ್ನೆಲೆಯಲ್ಲಿ ದೇವಸ್ಥಾನದ ಬಾಗಿಲುಗಳನ್ನು ತೆರೆಯದೆ ಇರುವುದರಿಂದ ಅರ್ಚಕರು ತೀವೃ ಸಂಕಷ್ಟದಲ್ಲಿದ್ದಾರೆ. ಅರ್ಚಕ ಕುಟುಂಬಗಳು ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಕಾಣಿಕೆಯನ್ನೇ ನಂಬಿಕೊಂಡಿರುತ್ತಾರೆ. ಅವರಿಗೆ ಇತರೆ ಮೂಲದಿಂದ ಆದಾಯವೂ ಇರುವುದಿಲ್ಲ. ಅರ್ಚಕರಿಗೆ ಕೈಲಾದ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ. ಸರ್ಕಾರ ಅರ್ಚಕರಿಗೆ ಹೆಚ್ಚಿನ ನೆರವು ಕಲ್ಪಿಸುವ ಜೊತೆಗೆ ದೇವಸ್ಥಾನ ಬಾಗಿಲು ತೆರೆಯುವ ಬಗ್ಗೆ ಗಮನ ಹರಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಧಾ ಗೋಪಾಲಕೃಷ್ಣ, ಕಾಂಗ್ರೇಸ್ ನಗರ ಅಧ್ಯಕ್ಷ ಸುರೇಶ್ ಬಾಬು, ಪ್ರಮುಖರಾದ ವಿ.ಶಂಕರ್, ಗಣಪತಿ ಮಂಡಗಳಲೆ, ಅಮಿತ್, ರಮೇಶ್ ಚಂದ್ರಗುತ್ತಿ, ಸಂತೋಷ್, ವಿಜಯ್, ರವಿ ಲಿಂಗನಮಕ್ಕಿ ಇನ್ನಿತರರು ಹಾಜರಿದ್ದರು.
previous post
next post