ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹೆಸರಿಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಕಂಡ ಧೀಮಂತ ರಾಜಕಾರಣಿ. ಉತ್ತಮ ಆಡಳಿತಗಾರ, ಕನ್ನಡ ಭಾಷೆ, ನೆಲ, ಜಲಕ್ಕಾಗಿ ಜನಪರ ಕಾಳಜಿ ಹೊಂದಿದ್ದ ಹೊಸ ಚಿಂತನೆ ರೂಪಿಸಿ ಜಾರಿಗೆ ತಂದವರು ಬಂಗಾರಪ್ಪ, ಅಕ್ಷಯ, ಆಶ್ರಯ, ಶುಶ್ರೂಷ, ಆರಾಧನಾ ಯೋಜನೆ, ರೈತರಿಗಾಗಿ ಉಚಿತ ವಿದ್ಯುತ್ ಸೌಲಭ್ಯ ಒದಗಿಸಿದ್ದ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದರು. ಹೀಗೆ ಹಲವು ಯೋಜನೆ ಜಾರಿಗೆ ತಂದ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ವಿನಯ್ ಕೆ.ಸಿ. ರಾಜಾವತ್, ಜೀವನ್ ಯು.ಎಸ್., ವೆಂಕಟೇಶ್ ನಾಯ್ಕ್, ಸೈಯದ್, ಚಂದನ್, ಪವನ್ ಮೊದಲಾದವರಿದ್ದರು.
previous post
next post