ಶಿವಮೊಗ್ಗದಲ್ಲಿ ಸೋಮವಾರ ಕೊರೊನ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 49 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದರೆ, 3 ಮಂದಿ ನಿಧನರಾಗಿದ್ದಾರೆ. 138 ಜನ ಗುಣಮುಖರಾಗಿದ್ದು, ಕೊರೊನದಿಂದ ಈವರೆಗೆ ಸತ್ತವರ ಸಂಖ್ಯೆ 1017 ಕ್ಕೇರಿಕೆಯಾಗಿದೆ. ಸೋಮವಾರ ಶಿವಮೊಗ್ಗ ತಾಲೂಕಿನಲ್ಲಿ 17,ಭದ್ರಾವತಿಯಲ್ಲಿ 11, ತೀರ್ಥಹಳ್ಳಿಯಲ್ಲಿ 5,ಶಿಕಾರಿಪುರದಲ್ಲಿ 2, ಸಾಗರದಲ್ಲಿ 11, ಹೊಸನಗರ 1 ಹಾಗೂ ಇತರೆ ಜಿಲ್ಲೆಯ 2 ಪ್ರಕರಣಗಳು ವರದಿಯಾಗಿದ್ದರೆ, ಸೊರಬದಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.ಜಿಲ್ಲೆಯಲ್ಲಿ 834 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.