ಶಿವಮೊಗ್ಗದ ಸೋಗಾನೆ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ತಹಸೀಲ್ದಾರ್ ಶಿವಾನಂದ ಪಿ.ರಾಣೆ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡುನೇತೃತ್ವ ವಹಿಸಿ ಮಾತನಾಡಿ, ಹಿಂದುಳಿದ ವರ್ಗಗಳ ನಾಯಕನಾಗಿ, ಶೋಷಿತ ವರ್ಗಗಳ ಧ್ವನಿಯಾಗಿದ್ದ ಎಸ್. ಬಂಗಾರಪ್ಪ ಅವರ ಕೊಡುಗೆ ಎಲ್ಲಾ ವರ್ಗಕ್ಕೂ ಇದೆ. ಬಗರ್‌ಹುಕುಂ ಸಾಗುವಳಿದಾರರಿಗೆ ಜಮೀನು, ಊಳುವವನೇ ಹೊಲದೊಡೆಯ ಎಂಬ ಕಾನೂನಿನ ಮೂಲಕ ಬಂಗಾರಪ್ಪ ಅವರು ಗೇಣಿದಾರರ ರಕ್ಷಣೆಗಾಗಿ ರಾಜ್ಯದ ಲಕ್ಷಾಂತರ ರೈತರಿಗೆ ಜಮೀನು ಕೊಡಿಸಿದ್ದಲ್ಲದೆ, ರೈತರಿಗೆ ಪೈಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗ್ರಾಮೀಣ ಕೃಪಾಂಕ ಜಾರಿಗೆ ತರುವ ಮೂಲಕ ಅನೇಕ ಗ್ರಾಮೀಣ ಯುವಕರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಇಂತಹ ಅನೇಕ ಜನಪರ ಕಾರ್ಯ ಮಾಡಿದ ಬಂಗಾರಪ್ಪ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದರು.
ವೇದಿಕೆಯ ತಾಲೂಕು ಅಧ್ಯಕ್ಷ ಶಿವಕುಮಾರ ಬಿಳವಗೋಡು, ನಾಗರಾಜ್ ಹಳೇಸೊರಬ, ನಿಂಗಪ್ಪ ಗುಂಡಶೆಟ್ಟಿಕೊಪ್ಪ, ಲಿಂಗರಾಜ ಹಳೇಸೊರಬ, ಟೇಕರಾಜ ಉಪ್ಪಳ್ಳಿ, ಈಶ್ವರಪ್ಪ ಆರೇಕೊಪ್ಪ, ಶೇಖರಪ್ಪ, ಶಶಿಕುಮಾರ ಚೀಲನೂರು, ಕೆ.ಧರ್ಮಪ್ಪ, ಇತರರಿದ್ದರು.