ಅರಣ್ಯ ಹಕ್ಕು ಕಾಯಿದೆಗೆ ತಿದ್ದುಪಡಿ ತರುವುದಕ್ಕೆ, ಕಂದಾಯ ಭೂಮಿ ಅರಣ್ಯ ಇಲಾಖೆಗೆ ಇಂಡೀಕರಣ ಮಾಡಿರುವುದರ ವಿರುದ್ಧ ಕೇಂದ್ರ, ರಾಜ್ಯದಲ್ಲಿಹೋರಾಟ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವುದಕ್ಕೆ ಕಾಂಗ್ರೆಸ್ ಕ್ರಮ ಕೈಗೊಳ್ಳುತ್ತದೆ ಎಂದು ಕಾಂಗ್ರೆಸ್ ಪಕ್ಷ ದ ರಾಜ್ಯ ಘಟಕ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಶಿಕಾರಿಪುರ ತಾಲೂಕಿನ ಬೇಗೂರು ಮರಡಿ ತಾಂಡದಲ್ಲಿ ಗುರುವಾರ ಲಂಬಾಣಿ ತಾಂಡಾ ಜನರೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು. ಅರಣ್ಯ ಹಕ್ಕು ಕಾಯಿದೆಯಲ್ಲಿಮೂರು ತಲೆಮಾರಿನ ದಾಖಲೆ ನೀಡಬೇಕು ಎನ್ನುವ ಕಾರಣಕ್ಕೆ ದೊಡ್ಡ ಪ್ರಮಾಣದ ಬಡವರಿಗೆ ಭೂಮಿ ಹಕ್ಕು ಸಿಗಲು ಸಾಧ್ಯವಾಗಿಲ್ಲ. ಅದು ಕಡಿಮೆ ಮಾಡುವುದಕ್ಕೆ ಸಹೋದರ ಸುರೇಶ್ ಮೂಲಕ ಸಂಸತ್‌ನಲ್ಲಿಧ್ವನಿಯೆತ್ತುವುದಲ್ಲದೆ ಪಕ್ಷ ದ ಮೂಲಕವೂ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು.ಕಂದಾಯ ಭೂಮಿ ಇಂಡೀಕರಣ ಮೂಲಕ ಅರಣ್ಯ ಇಲಾಖೆಗೆ ಹೋಗಿರುವುದು ಸರಿಯಲ್ಲ. ಈ ಎರಡು ಕಾರಣಕ್ಕೆ ವಸತಿ ಪ್ರದೇಶದಲ್ಲಿನ ಜನರಿಗೆ ಮನೆಗೆ ಹಕ್ಕುಪತ್ರ, ಉಳುಮೆ ಮಾಡಿರುವ ರೈತರಿಗೆ ಜಮೀನಿನ ಹಕ್ಕುಪತ್ರ ಸಿಗುತ್ತಿಲ್ಲ, ಬಹುತೇಕ ತಾಂಡ ವಸತಿಪ್ರದೇಶ ಅರಣ್ಯ ಭೂಮಿಯಲ್ಲಿದ್ದು ಅವುಗಳ ಸಕ್ರಮಗೊಳಿಸಿ ಕಂದಾಯ ಗ್ರಾಮ ಮಾಡುವುದಕ್ಕೆ ಕಾಯಿದೆಯಲ್ಲಿತಿದ್ದುಪಡಿ ತರುವುದಕ್ಕೆ ರಾಜ್ಯದಲ್ಲೂಹೋರಾಟ ಮಾಡಲಾಗುವುದು. ಈಗಿನ ಸಮಸ್ಯೆಗೆ ಯಾವುದೆ ಪಕ್ಷ ಕಾರಣವಾಗಿದೆ ಎಂದು ದೂರುವ ಬದಲಿಗೆ ಸಮಸ್ಯೆ ಪರಿಹಾರ ಆಗಬೇಕು ಅದಕ್ಕಾಗಿ ಕೆಲಸ ಮಾಡುತ್ತೇನೆ. ಸಮಸ್ಯೆ ಪರಿಹಾರಕ್ಕೆ ನಮ್ಮ ಪಕ್ಷ ದೊಳಗಿನ ಅನುಭವಿ ನಾಯಕರ ಜತೆ ಚರ್ಚಿಸುತ್ತೇನೆ ಎಂದರು.
ಸಣ್ಣ ವಯಸ್ಸಿನಲ್ಲಿಲಂಬಾಣಿ ಜನರೊಂದಿಗೆ ಬೆಳೆದವನು ನಾನು ಅವರ ಕಷ್ಟಕ್ಕೆ ಧ್ವನಿಯಾಗಬೇಕು ಅವರ ಸಮಸ್ಯೆ ಹತ್ತಿರದಿಂದ ಅರಿಯಬೇಕು ಎನ್ನುವ ಕಾರಣಕ್ಕೆ ಪ್ರವಾಸ ಮಾಡುತ್ತಿದ್ದೇನೆ. ಸಭೆಯಲ್ಲಿನಮ್ಮ ಪಕ್ಷ ದ ರಾಜಕೀಯ ಪಕ್ಷ ದ ಧ್ವಜ ಹಾಕಿಲ್ಲ. ಯಾವುದೆ ಮುಖಂಡರನ್ನ ವೇದಿಕೆಯಲ್ಲಿಕೂರಿಸಿಲ್ಲ. ಸಮಸ್ಯೆ ಹೇಳುವವರೂ ಯಾವುದೆ ವ್ಯಕ್ತಿ, ಸರಕಾರ ದೂಷಿಸುವುದಕ್ಕೆ ಅವಕಾಶ ನೀಡದೆ ಸಮಸ್ಯೆ ಅರಿಕೆ ಮಾಡಿಕೊಳ್ಳಲು, ಅವರಿಗೆ ತಿಳಿದ ಪರಿಹಾರ ಸಲಹೆ ನೀಡಲು ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂವಾದ ಕಾರ‍್ಯಕ್ರಮದಲ್ಲಿನಾಗಿಬಾಯಿ ಮಾತನಾಡಿ, ಸ್ವಸಹಾಯ ಸಂಘದ ಸದಸ್ಯರು 5 ಲಕ್ಷ ರೂ. ಸಾಲ ಪಡೆದಿದ್ದು ಕೊರೊನಾ ಸಂಕಷ್ಟದಿಂದಾಗಿ ಸಾಲ ಮರುಪಾವತಿ ಸಾಧ್ಯವಾಗಿಲ್ಲ. 2ವರ್ಷದಲ್ಲಿಲಕ್ಷ ಗಟ್ಟಲೆ ಬಡ್ಡಿ ಕಟ್ಟಬೇಕಿದ್ದು ಅದಕ್ಕೆ ಪರಿಹಾರ ಕಲ್ಪಿಸಿ, ಗ್ರಾಮದಲ್ಲಿಮೇಲ್ವರ್ಗದ ಜಾತಿ ಜನರಿಂದ ತುಳಿತಕ್ಕೊಳಗಾಗುತ್ತಿದ್ದೇವೆ ಅದನ್ನು ಸರಿಪಡಿಸಿ ಎಂದರು.
ಈ ಭಾಗದಲ್ಲಿಇನಾಂ ಭೂಮಿ 452ಎಕರೆ ಇದ್ದು ಅದು ರೈತರಿಗೆ ಸೇರಿಸಬೇಕು. ತಾಂಡಾದ ಜನರಿಗೆ ವಾಸವಿರುವ ಮನೆಗೆ ಇ-ಸ್ವತ್ತು ಸಿಗದೆ ಸಾಲ ಪಡೆಯಲು, ಆಸ್ತಿ ವಿಭಾಗ ಮಾಡುವುದು, ಅನುದಾನ ಪಡೆಯುವುದಕ್ಕೆ ಸಮಸ್ಯೆ ಆಗಿದೆ, ಲಂಬಾಣಿ ಯುವಜನರಿಗೆ ಪ್ರತ್ಯೇಕ ಉದ್ಯೋಗ ಮೇಳ ನಡೆಸಬೇಕು, ಬೇಗೂರು ಮರಡಿ ತಾಂಡದ 54ಎಕರೆ ಕಂದಾಯ ಭೂಮಿಯಲ್ಲಿಸ್ಮಶಾನಕ್ಕೆ ಜಾಗೆ ನೀಡಬೇಕು ಎನ್ನುವುದು ಸೇರಿ ಹಲವು ಸಮಸ್ಯೆ ಕುರಿತು ಹೊಸೂರು ಚಂದ್ರು, ತರಲಘಟ್ಟ ಮಂಜುನಾಯ್ಕ, ಕುಮಾರನಾಯ್ಕ, ರಾಘು ಬೇಗೂರು, ಹೇಮ್ಲಾನಾಯ್ಕ ಮತ್ತಿತರರು ಡಿ.ಕೆ.ಶಿವಕುಮಾರ್ ಗಮನಸೆಳೆದರು. ಉಮೇಶ್ ಮಾರವಳ್ಳಿ ಮಾತನಾಡಿ, ಇಂಡೀಕರಣ ಸಮಸ್ಯೆ ಪರಿಹರಿಸಿದರೆ ಜಿಲ್ಲೆಯ 25ಸಾವಿರ ರೈತರಿಗೆ ಅನುಕೂಲ ಆಗುತ್ತದೆ ಎಂದರು.
ಗ್ರಾಮಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಆರತಿ ಬೆಳಗಿ, ಲಂಬಾಣಿ ನೃತ್ಯದ ಮೂಲಕ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಸಭೆಯಲ್ಲಿಕಾಂಗ್ರೆಸ್ ಮುಖಂಡರಾದ ರುದ್ರಪ್ಪ ಲಮಾಣಿ, ಸುಂದರೇಶ್, ತಿ.ನಾ.ಶ್ರೀನಿವಾಸ್, ಆರ್.ಪ್ರಸನ್ನಕುಮಾರ್, ಕೆ.ಬಿ.ಪ್ರಸನ್ನಕುಮಾರ್, ಪ್ರಕಾಶ್ ರಾಥೋಡ್, ಮಂಜುನಾಥ ಭಂಡಾರಿ, ಶಾಂತವೀರಪ್ಪಗೌಡ, ಗೋಣಿ ಮಾಲತೇಶ್, ನರಸಿಂಗನಾಯ್ಕ, ಉಳ್ಳಿ ದರ್ಶನ್, ಭಂಡಾರಿ ಮಾಲತೇಶ್, ನಾಗರಾಜಗೌಡ ಮತ್ತಿತರರು ಇದ್ದರು.