Malenadu Mitra
ರಾಜ್ಯ ಶಿವಮೊಗ್ಗ

ಆರ್ಟ್ ಆಫ್ ಲಿವಿಂಗ್‍ನಿಂದ ಜಿಲ್ಲಾಡಳಿತಕ್ಕೆ ಆಕ್ಸಿಜನ್ ಕಾನ್ಸನ್‍ಟ್ರೇಟರ್ ಹಸ್ತಾಂತರ

ಶಿವಮೊಗ್ಗ, ಜುಲೈ 16 : ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ಇದರ ಅಂಗ ಸಂಸ್ಥೆಯಾದ ಇಂಟರ್ ನ್ಯಾಷನಲ್ , ಸಾಮರ್ಥ್ಯದಅಸೋಸಿಯೇಷನ್ ಫಾರ್ ಹ್ಯೂಮನ್ ವ್ಯಾಲ್ಯೂ ಇವರ ಸಹಯೋಗದಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ 19 ರೋಗಿಗಳಿಗೆ ಅನುಕೂಲವಾಗುವ ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕೋವಿಡ್ ಪರಿಹಾರ ಕಾರ್ಯಕ್ರಮ ಕರ್ನಾಟಕ ಇದರಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ 19 ಸೋಂಕಿತರು ಮತ್ತು ಆಕ್ಸಿಜನ್ ಅವಶ್ಯಕತೆ ಇರುವವರಿಗೆ ಅನುಕೂಲವಾಗುವ ದೃಷ್ಟಿಯಿಂದ 5 ಲೀಟರ್ ಸಾಮರ್ಥ್ಯದ ಒಟ್ಟು 25 ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳನ್ನು ನೀಡಲಾಯಿತು.
5 ಲೀ.ಸಾಮರ್ಥ್ಯವುಳ್ಳ ಒಂದು ಕಾನ್ಸನ್‍ಟ್ರೇಟರ್ ಮೊತ್ತ ರೂ.1.28 ಲಕ್ಷ ಆಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ 5 ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಿಗೆ ತಲಾ 4 ರಂತೆ ಒಟ್ಟು 25 ಕಾನ್ಸನ್‍ಟ್ರೇಟರ್‍ಗಳನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ.ಸಿಇಓ ಎಂ.ಎಲ್.ವೈಶಾಲಿ ಹಾಗೂ ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿಯವರಿಗೆ ಸಂಸ್ಥೆಯ ಪದಾಧಿಕಾರಿಗಳು ಹಸ್ತಾಂತರಿಸಿದರು.

ಈ ವೇಳೆ ಆರ್ಟ್ ಆಫ್ ಲಿವಿಂಗ್‍ನ ಜಿಲ್ಲಾ ಶಿಕ್ಷಕ ಸಂಯೋಜಕ ಶಶಿಭೂಷಣ್ ಶಾಸ್ತ್ರಿ, ಶಿಕ್ಷಕರಾದ ಮೂರ್ತಿ ಭದ್ರಾವತಿ, ಭಾಗ್ಯ ಮೂರ್ತಿ, ಸಂಸ್ಥೆಯ ಜಿಲ್ಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ವೇಣುಗೋಪಾಲ್, ಪ್ರಕಾಶ್, ನಾಗರಾಜ್ ಸೇಠ್ ಹಾಜರಿದ್ದರು.

Ad Widget

Related posts

ಕುಮಾರ ಬಂಗಾರಪ್ಪ ಮುನಿಸು: ಮನವೊಲಿಸಿದ ಸಂಸದರು

Malenadu Mirror Desk

ದಿಲ್ಲಿ ರೈತರ ಹೋರಾಟ ವಿದೇಶಿ ಪ್ರೇರಿತ

Malenadu Mirror Desk

ಶಿವಮೊಗ್ಗದಲ್ಲಿ ಈಡಿಗರ ಒಡ್ಡೋಲಗ, ಬೀದಿಗಿಳಿದು ಶಕ್ತಿಪ್ರದರ್ಶನ, ಹಕ್ಕಿಗಾಗಿ ನಿರಂತರ ಹೋರಾಟ ಎಂದು ಸ್ವಾಮೀಜಿಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.