ಮಾತನಾಡುತ್ತಿರುವರಿಗೆ ಉತ್ತರ ಕೊಡಲು ಅಧ್ಯಯನದ ಮೂಲಕ ಬಿಜೆಪಿ ಕಾರ್ಯಕರ್ತರು ಸಿದ್ಧರಾಗಬೇಕಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ಬಿಜೆಪಿವತಿಯಿಂದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಿದ್ದ ನೂತನ ಕೃಷಿ ಕಾಯ್ದೆ ಸತ್ಯ-ಮಿಥ್ಯೆ ಕುರಿತ ಕೃಷಿ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೋದಿ ಯಾವುದೇ ಕಾರ್ಯಕ್ರಮ ಜಾರಿ ಮಾಡಿದರೂ ವಿರೋಧ ಮಾಡಲಾಗುತ್ತಿದೆ. ಕೊರೋನಾ ಲಸಿಕೆ ತಂದಾಗಲೂ ವಿರೋಧ ಮಾಡಿದ್ದರು. ಬಳಿಕ ಅವರೇ ಲಸಿಕೆ ಪಡೆಯಲು ಮುಂದೆ ಬಂದರು. 370 ನೇ ವಿಧಿ ಜಾರಿಗೆ ತಂದಾಗಲೂ ವಿರೋಧ ವ್ಯಕ್ತ ಮಾಡಿದ್ದರು ಎಂದರು.
ಬಿಜೆಪಿ ರಾಜ್ಯ ರೈತಮೋರ್ಚಾ ಕಾರ್ಯದರ್ಶಿ ಡಾ. ನವೀನ್ ಮಾತನಾಡಿ, ಕೃಷಿ ಕಾಯ್ದೆಗಳನ್ನು ವಿರೋಧ ಮಾಡುವ ಸಲುವಾಗಿಯೇ ಬಿಜೆಪಿಯೇತರ ಪಕ್ಷಗಳ ಒಂದು ಗುಂಪು ಸಿದ್ಧವಾಗಿದೆ. ರೈತರ ಸಬಲೀಕರಣ ಮಾಡುವ ಸಲುವಾಗಿಯೇ ಕೃಷಿ ಕಾಯ್ದೆಗಳನ್ನು ಜಾರಿಗೆ ತರಕಾಗಿದ್ದು, ಇದನ್ನು ತಿಳಿದುಕೊಳ್ಳದೆ ಸುಳ್ಳು ಅರೋಪ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಕಳೆದ 60 ವರ್ಷ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾ ಆ ಪದಗಳನ್ನು ಸವಕಲು ಮಾಡುತ್ತಾ ರೈತರ ಬೆನ್ನೆಲುಬು ಮುರಿಯುವ ಕೆಲಸ ಮಾಡಲಾಗಿದೆ. ಆದರೆ ಬಿಜೆಪಿ ರೈತರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿದೆ ಎಂದರು.
ಕೃಷಿ ಕಾಯ್ದೆಗಳಿಂದ ಮಾರುಕಟ್ಟೆ ವಿಸ್ತರಣೆಯಾಗಿದೆ. ರೈತರಿಗೆ ಹೆಚ್ಚಿನ ಅವಕಾಶ ಗಳು ಲಭ್ಯವಾಗಿವೆ. ಕಂಪನಿಗಳು ಹಾಗೂ ಕೃಷಿಕರ ನಡುವೆ ಒಪ್ಪಂದ ಏರ್ಪಟ್ಟು ಬೆಳೆ ಬೆಳೆದರೆ ಹೆಚ್ಚಿನ ಮೌಲ್ಯ ವರ್ಧನೆ ಸಾಧ್ಯವಾಗಲಿದೆ. ರೈತರು ಕೂಡ ಉದ್ಯಮ ಸ್ಥಾಪಿಸಿ ಹೆಚ್ಚಿನ ಆದಾಯ ಗಳಿಸಬಹುದಾಗಿದೆ ಎಂದರು.
ಒಪ್ಪಂದ ಕಾಯ್ದೆಯಲ್ಲಿ ಭೂಮಿ ಕಂಪನಿಗಳಿಗೆ ಹೋಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಸುಳ್ಳು. ಒಪ್ಪಂದ ಕೃಷಿಯಲ್ಲಿ ರೈತರಿಗೆ ಹೆಚ್ಚು ರಕ್ಷಣೆ ಸಿಗಲಿದೆ ಎಂಬುದನ್ನು ಮರೆ ಮಾಚಲಾಗುತ್ತಿದೆ. ರೈತರು ಕೂಡ ಆಲೋಚನಾ ಕ್ರಮ ಬದಲಿಸಿಕೊಳ್ಳಬೇಕೆಂದು ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಕುಮಾರ್ ಬಂಗಾರಪ್ಪ, ಅಶೋಕನಾಯ್ಕ, ಮುಖಂಡರಾದ ಎಂ.ಬಿ. ಭಾನುಪ್ರಕಾಶ್, ಗಿರೀಶ್ ಪಟೇಲ್, ಪ್ರಸನ್ನ ಕೆರೆಕೈ, ಎಸ್. ದತ್ತಾತ್ರಿ, ವೆಂಕಟೇಶ್ ನಾಯಕ, ಪವಿತ್ರ ರಾಮಯ್ಯ, ಗುರುಮೂರ್ತಿ ಮತ್ತಿತರರು ಇದ್ದರು.
previous post