Malenadu Mitra
ರಾಜ್ಯ ಶಿವಮೊಗ್ಗ

ಸರ್ವರಿಗೂ ಸಂವಿಧಾನ’ ನಾಟಕ ಸಂವಿಧಾನದ ಅಶಯಗಳನ್ನು ಪ್ರತಿಬಿಂಬಿಸಲಿ: ಆರ್.ಕೆ.ಸಿದ್ರಾಮಣ್ಣ

`

ನಮ್ಮ ಸಂವಿಧಾನದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ರಂಗಾಯಣದ ವತಿಯಿಂದ ನಿರ್ಮಿಸಲಾಗುತ್ತಿರುವ `ಸರ್ವರಿಗೂ ಸಂವಿಧಾನ’ ನಾಟಕ ಸಂವಿಧಾನದ ಆಶಯಗಳನ್ನು ಪ್ರತಿಬಿಂಬಿಸಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ ಅವರು ಹೇಳಿದರು.

ಶಿವಮೊಗ್ಗ ರಂಗಾಯಣದಲ್ಲಿ ಶನಿವಾರ ಸರ್ವರಿಗೂ ಸಂವಿಧಾನ ನಾಟಕ ರಚನಾ ಕಮ್ಮಟ ಮತ್ತು ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂವಿಧಾನ ಪ್ರಜಾಪ್ರಭುತ್ವದ ಮಾದರಿ ಸಂವಿಧಾನವಾಗಿದ್ದು, ಅದರ ಮೂಲತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆಯಬೇಕಿದೆ. ದೇಶದ ಆಡಳಿತ ಸಂವಿಧಾನದ ಆಶಯದಂತೆ ನಡೆಯುತ್ತಿದೆ ಹೊರತು ಯಾವುದೇ ವ್ಯಕ್ತಿ ಕೇಂದ್ರಿತವಲ್ಲ. ಕಾಲಘಟ್ಟದ ಅವಶ್ಯಕತೆಗಳಿಗೆ ಅನುಗುಣವಾಗಿ ಶಾಸನಗಳನ್ನು ರಚಿಸುವುದು ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡುವುದು ಮಾತ್ರ ಶಾಸಕಾಂಗದ ಜವಾಬ್ದಾರಿ. ಎಲ್ಲಾ ಕಾಯ್ದೆಗಳಿಗೆ ಮೂಲ ಸಂವಿಧಾನವಾಗಿದೆ. ಆದ್ದರಿಂದ ಸಂವಿಧಾನದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸುವ ನಾಟಕ ರಚನೆಗೆ ಕೈ ಹಾಕಿರುವುದು ಸ್ವಾಗತಾರ್ಹ. ಸಂವಿಧಾನದ ಪೀಠಿಕೆಯಲ್ಲಿ ಅದರ ಸಮಗ್ರ ಆಶಯ ಚಿತ್ರಿತವಾಗಿದೆ. ಸಂವಿಧಾನ ಪ್ರತಿಯೊಬ್ಬರಿಗೆ ಕೇವಲ ಹಕ್ಕನ್ನು ಮಾತ್ರವಲ್ಲದೆ ಕರ್ತವ್ಯವನ್ನೂ ನಿಗದಿಪಡಿಸಿದೆ. ಇತರರ ಮೂಲಭೂತ ಹಕ್ಕುಗಳನ್ನು ಗೌರವಿಸುವ ಆಶಯ ಸಹ ನಾಟಕದಲ್ಲಿ ಮೂಡಿ ಬರಲಿ ಎಂದು ಹಾರೈಸಿದರು.

ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಟಕವನ್ನು ಕಟ್ಟಲಾಗುತ್ತಿದೆ. ನಾಟಕ ರಚನೆ ಬಳಿಕ ಅದನ್ನು ನಾಡಿನ ಎಲ್ಲಾ ಕಡೆ ಪ್ರದರ್ಶನ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ನಾಟಕ ರಚನೆಕಾರ ರಾಜಪ್ಪ ದಳವಾಯಿ, ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಸದಾನಂದ, ಹಿರಿಯ ರಂಗಕರ್ಮಿ ಸಾಸ್ವೆಹಳ್ಳಿ ಸತೀಶ್, ರಂಗಕಲಾವಿದೆ ರೇವತಿರಾಂ ಕುಂದನಾಡು ಉಪಸ್ಥಿತರಿದ್ದರು. ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ವಂದಿಸಿದರು.

Ad Widget

Related posts

ಸಿ.ಟಿ.ರವಿಯನ್ನ ಅರೆಸ್ಟ್ ಮಾಡಿದ್ದೇ ಒಳ್ಳೆಯದು: ಸಚಿವ ಮಧು ಬಂಗಾರಪ್ಪ

Malenadu Mirror Desk

ಶರಾವತಿ ಸಂತ್ರಸ್ತ ರಿಂದ ಶರಾವತಿ ಚಳುವಳಿ :ಆರ್. ಎಂ. ಮಂಜುನಾಥ್ ಗೌಡ

Malenadu Mirror Desk

ಈಶ್ವರಪ್ಪ ಪತ್ರವೂ… ಬಿಜೆಪಿಯ ಸಂಚಲನವೂ…

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.