ಸೊರಬ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಕೆ.ವಿಶ್ವನಾಥ್ ಹಾಗೂ ಕನ್ನಡ ಉಪನ್ಯಾಸಕ ಜಿ.ಬಂಗಾರಪ್ಪ ಅವರು ನಿವೃತ್ತಿಯಾದ ನಿಮಿತ್ತ ಕಾಲೇಜಿನಲ್ಲಿ ಕಾಲೇಜು, ಸಂಘ-ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಿ ಗೌರವಿಸುವ ಮೂಲಕ ಶನಿವಾರ ಬೀಳ್ಕೊಡುಗೆ ನೀಡಲಾಯಿತು.
ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಮಾತನಾಡಿ, ಸರಕಾರಿ ಕೆಲಸದಲ್ಲಿ ವಯೋ ನಿವೃತ್ತಿ ಎಂಬುದು ಸರಕಾರಿ ಸೇವೆಗೆ ಮಾತ್ರ ಸೀಮಿತವಾಗಿದ್ದು, ಸಮಾಜ ಸೇವೆಗೆ ಅಲ್ಲ. ಹೀಗಾಗಿ ನಿವೃತ್ತಿ ಹೊಂದಿದ ಉಪನ್ಯಾಸಕರು ತಮ್ಮ ಅನುಭವ ಕಜಾನೆ ಬಳಸಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ತೊಡಗಿ ಸಮಾಜಕ್ಕೆ ಕೊಡುಗೆ ನೀಡಬೇಕು. ತಮ್ಮ ಬಂಧಮುಕ್ತ ಜೀವನದಲ್ಲಿ ವೈಯಕ್ತಿಕ ಆಸೆ, ಆಕಾಂಕ್ಷೆ, ಚಿಂತನೆಗಳಿಗೆ ಹೊಸರೂಪ ಕೊಡುವ ಮೂಲಕ ಕುಟುಂಬ, ಸಮಾಜದಲ್ಲಿ ತೆರೆದುಕೊಳ್ಳಲು ಮುಂದಾಗಬೇಕು ಎಂದರು.
ಪ್ರಾಂಶುಪಾಲ ಸುರೇಶಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಉಪನ್ಯಾಸಕರಾದ ಅರ್ಥಶಾಸ್ತ್ರ ಉಪನ್ಯಾಸಕ ಕೆ.ವಿಶ್ವನಾಥ್ ಹಾಗೂ ಕನ್ನಡ ಉಪನ್ಯಾಸಕ ಜಿ.ಬಂಗಾರಪ್ಪ ಸನ್ಮಾನ ಸ್ವೀಕರಿಸಿ ತಮ್ಮ ಸೇವಾ ಅನುಭವಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ಸರಸ್ವತಿ ಪ್ರಾರ್ಥಿಸಿ, ಉಪನ್ಯಾಸಕರಾದ ಗೇಭೂಷಣ್ ಸ್ವಾಗತಿಸಿ, ವಿಜಯ್ ದಟ್ಟೇರ್ ನಿರೂಪಿಸಿದರು.
ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಭಾಸ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ತೊಗರ್ಸಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ಶಿವಾನಂದಪ್ಪ, ಸರೋಜಾ ಬಂಗಾರಪ್ಪ, ನಿವೃತ್ತ ಉಪನ್ಯಾಸಕ ಎಚ್.ಕೆ.ಚಂದ್ರಶೇಖರ್, ಉಪನ್ಯಾಸಕರಾದ ಎಂ.ಬಂಗಾರಪ್ಪ, ಚಿದಾನಂದ್, ಆರೀಫ ಬೇಗಂ, ಘನಶ್ಯಾಮ, ಮಲ್ಲಿಕಾರ್ಜುನ, ಮಂಜುನಾಥ್, ಸಚಿನ್, ಎಸ್.ಎಂ.ನೀಲೇಶ್, ವಸಂತ್ ಇತರರಿದ್ದರು.
ಶಿಷ್ಯನಿಂದ ಗುರುವಿಗೆ ಬೀಳ್ಕೊಡುಗೆ
ಕಾಲೇಜಿನ ಪ್ರಾಂಶುಪಾಲ ಸುರೇಶಪ್ಪ ಅವರು ನಿವೃತ್ತಿ ಹೊಂದಿದ ಕೆ.ವಿಶ್ವನಾಥ್ ಅವರ ಶಿಷ್ಯರಾಗಿದ್ದು, ಗುರುಗಳಿಗೆ ಮನತುಂಬಿ ಗೌರವಪೂರ್ವಕವಾಗಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು.
೦