ಸಾಗರ ತಾಲೂಕು ಕರೂರು-ಬಾರಂಗಿ ಹೋಬಳಿಯಲ್ಲಿನ ಮೊಬೈಲ್ ನೆಟ್ವರ್ಕ್ ಸಮಸ್ಯೆ ಪರಿಹರಿಸಬೇಕು ಮತ್ತು ಹಿನ್ನೀರ ಪ್ರದೇಶಕ್ಕೆ ಪೊಲೀಸ್ ಉಪಠಾಣೆ ಮಂಜೂರು ಮಾಡಬೇಕೆಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಬೇಳೂರು ಅವರು, ನೆಟ್ವರ್ಕ್ ಸಮಸ್ಯೆಯಿಂದ ತುಮರಿ ಭಾಗದ ಜನರಿಗೆ ತೀವ್ರ ತೊಂದರೆಯಾಗಿದೆ. ಆನ್‍ಲೈನ್ ಕ್ಲಾಸ್ ಕೇಳಲಾಗದೆ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಆಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಬೇಕು. ಇತ್ತಿಚಿಗೆ ಕರೂರು-ಬಾರಂಗಿ ಹೋಬಳಿಯಲ್ಲಿ ಅಪರಾಧ ಕೃತ್ಯಗಳು ವರದಿಯಾಗಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಉಪಠಾಣೆ ಮಂಜೂರು ಮಾಡಬೇಕೆಂದು ಕೆಪಿಸಿಸಿ ವಕ್ತಾರರೂ ಆದ ಗೋಪಾಲಕೃಷ್ಣ ಅವರು ಸಿಎಂಗೆ ಮನವಿ ಮಾಡಿದರು.
ಸಮಸ್ಯೆಯನ್ನು ಆಲಿಸಿದ ಮುಖ್ಯಮಂತ್ರಿಗಳು ತಮ್ಮ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗೆ ಪತ್ರ ಬರೆಯಲು ತಿಳಿಸಿದರು
previous post
next post