Malenadu Mitra
ಶಿಕಾರಿಪುರ ಶಿವಮೊಗ್ಗ

 ಸಂಗೊಳ್ಳಿ ರಾಯಣ್ಣ ಪ್ರತಿಮೆ: ರಾಯಣ್ಣ ಅಭಿಮಾನಿಗಳ ಬಳಗ ಮನವಿ

 ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಶಿಕಾರಿಪುರದಲ್ಲಿ ಯಾವ ಜಾಗದಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿತ್ತೋ ಅದೇ ಜಾಗದಲ್ಲಿ ಪ್ರತಿಷ್ಠಾಪಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗ ಹಾಗೂ ಹಾಲುಮತ ಮಹಾಸಭಾದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
 ಸಂಗೊಳ್ಳಿ ರಾಯಣ್ಣನ ಜನ್ಮದಿನ ಆಗಸ್ಟ್ ೧೫ ರಂದು ಗೌರವ ನಮನಕ್ಕೆ ಮುಖ್ಯಮಂತ್ರಿ ಆದೇಶ ಹೊರಡಿಸುತ್ತಿದ್ದಂತೆ ಶಿಕಾರಿಪುರದಲ್ಲಿ ರಾತ್ರೋರಾತ್ರಿ ಶಿಕಾರಿಪುರದಲ್ಲಿ ರಾಯಣ್ಣ ಪ್ರತಿಮೆ ತೆಗೆಯುವ ಮೂಲಕ ಅಪಮಾನ ಮಾಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪನವರ ಕ್ಷೇತ್ರದಲ್ಲಿ ಈ ರೀತಿ ಆಗಿರುವುದು ಖಂಡನೀಯವೆಂದು ಹೇಳಿದ್ದಾರೆ.
   ಈಸೂರು ದಂಗೆಯ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿಸಿದ ಶಿಕರಿಪುರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆಗೆಯುವ ಮೂಲಕ ಅಪಮಾನ ಮಾಡಲಾಗಿದೆ. ಇಡೀ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಇದಾಗಿದೆ. ಬ್ರಿಟೀಷರಿಗೆ ಸೋಲು ಉಣಿಸಿದ ತಾಲೂಕಿನಲ್ಲಿ ರಾಯಣ್ಣ ಪ್ರತಿಮೆಗೆ ಆದ್ಯತೆ ನೀಡಬೇಕಿತ್ತು. ಆದರೆ ಪ್ರತಿಮೆಯನ್ನು ಜಿಲ್ಲಾಧಿಕಾರಿ ಕಚೇರಿಗೆ ತೆಗೆದುಕೊಂಡು ಹೋಗಿರುವುದು ಸರಿಯಲ್ಲಿವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ರಾಯಣ್ಣ ಪ್ರತಿಮೆ ಸ್ಥಾಪಿಸಿ ಅದಕ್ಕೆ ರಕ್ಷಣೆ ಕೊಡುವುದು ಸಮಾಜದ ಮುಖಂಡರಿಗೆ ಗೊತ್ತಿತ್ತು. ಆದರೆ ರಾತ್ರೋರಾತ್ರಿ ಹೇಡಿಗಳ ರೀತಿಯಲ್ಲಿ ಅದನ್ನು ಸ್ಥಳಾಂತರ ಮಾಡಲಾಗಿದೆ. ಇದಕ್ಕೆ ಕಾರಣರಾದವರು ತಕ್ಷಣ ಕ್ಷಮೆ ಕೇಳಬೇಕು. ಅದೇ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
  ಪ್ರತಿಭಟನೆಯಲ್ಲಿ ಬಳಗದ ಅಧ್ಯಕ್ಷ ಹುಲ್ಮಾರ್ ಮಹೇಶ್, ಹಾಲುಮತ ಮಹಾಸಭಾ ಅಧ್ಯಕ್ಷ ದಾನೇಶ್ ಸಿ., ಪ್ರಮುಖರಾದ ಗಣೇಶ್ ಬಳಿಗಿ,  ಡಿ ಡಿ ಶಿವಕುಮಾರ್ ನಾಗರಾಜ್ ಕೋಣನೂರ್, ಡಾ. ಸೌಮ್ಯ ಪ್ರಶಾಂತ್, ಎ.ಎಚ್. ಸುನೀಲ್, ಷಡಾಕ್ಷರಪ್ಪ ಜಿ.ಆರ್., ಪುಷ್ಪಲತಾ, ರಾಘವೇಂದ್ರ ಬಿ.ಆರ್. ಮತ್ತಿತರರು ಇದ್ದರು.

Ad Widget

Related posts

ಬೆಳಗಾವಿ ಅಧಿವೇಶನ ವೀಕ್ಷಿಸಿದ ಸೊರಬದ ಕಾಲೇಜು ವಿದ್ಯಾರ್ಥಿಗಳು

Malenadu Mirror Desk

ದೇವಾ.. ಹೆಣ್ಣು ಹೆತ್ತವರಿಗೆ ಇದೆಂತಾ ಘೋರ ಅನ್ಯಾಯ, 20 ದಿನದ ಅಂತರದಲ್ಲಿ ಕರುಳ ಕುಡಿಗಳ ಕಳೆದುಕೊಂಡ ಕಾರ್ಮಿಕರು

Malenadu Mirror Desk

ಗೆಜ್ಜೆ ಕಟ್ಟಿ ಕುಣಿದ ಹುಡುಗನ ಹೆಜ್ಜೆಗುರುತಷ್ಟೇ ಉಳಿದದ್ದು… ಲೋಹಿತ್ ಕಿಡದುಂಬೆ ನಿಧನಕ್ಕೆ ಹಿನ್ನೀರ ಜನರ ಕಂಬನಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.