Malenadu Mitra
ರಾಜ್ಯ ಶಿವಮೊಗ್ಗ

ಇಂದಿನ ನೆಮ್ಮದಿ ಹಿಂದಿನವರ ಹೋರಾಟದ ಫಲ: ಮಂಜಮ್ಮ ಗಣಪತಿಯಪ್ಪ ವಡ್ನಾಲ

ಶಿವಮೊಗ್ಗ : ನಾವು ಇಷ್ಟೊಂದು ಸಂತೋಷವಾಗಿ ಬಾಳುತ್ತಿದ್ದೇವೆ ಎಂದಾದರೆ ಅದರ ಹಿಂದೆ ನೂರಾರು ವರುಷಗಳ ಹೋರಾಟ ಇದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಗಣಪತಿಯಪ್ಪ ಅವರ ಮಡದಿ ಮಂಜಮ್ಮ ಹೆಚ್.ಗಣಪತಿಯಪ್ಪ ವಡ್ನಾಲ ಹೇಳಿದರು.
ಜಿಲ್ಲೆಯ ಸ್ವಾತಂತ್ರ ಹೋರಾಟಗಾರರ ನೆನಪು ಕಾರ್ಯಕ್ರಮವನ್ನು ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ಹಿಂದೆ ಅನೇಕ ಕುಟುಂಬಗಳು ಬೆನ್ನೆಲುಬಾಗಿ ಇದ್ದವು. ಅಂತಹ ಕುಟುಂಬಗಳನ್ನು ಇತ್ತೀಚಿನ ದಿನಗಳಲ್ಲಿ ಗಮನಕ್ಕೆ ತೆಗೆದುಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಅನೇಕರ ಹೋರಾಟ ಬಲಿದಾನಗಳಿಂದಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಅನೇಕರು ಹೋರಾಡಿ ಪ್ರಾಣ ತೆತ್ತಿದ್ದಾರೆ ಹೇಳಿದರು.


ಸಾಹಿತಿ ಡಾ.ಜೆ.ಕೆ.ರಮೇಶ್ ತೀರ್ಥಹಳ್ಳಿ ಮಾತನಾಡಿ, ಸ್ವಾತಂತ್ರ್ಯ ಚಳುವಳಿಗೆ ಶಿವಮೊಗ್ಗ ಜಿಲ್ಲೆಯ ಹೋರಾಟಗಾರರ ಪಾತ್ರ ಸಾಕಷ್ಟಿದೆ, ಮಹಾತ್ಮ ಗಾಂಧಿಜಿಯವರು ಜಿಲ್ಲೆಗೆ ಬಂದಮೇಲೆ ಸ್ವಾತಂತ್ರ್ಯ ಚಳುವಳಿಯ ಕಾವು ಹೆಚ್ಚಿತು. ಇದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಹೋರಾಟದ ಕಿಚ್ಚು ಹರಡಿತು. ತೀರ್ಥಹಳ್ಳಿ ತಾಲೂಕಿನಲ್ಲಿ ಅನೇಕ ಹೋರಾಟಗಾರರು ಮುಖ್ಯವಾಗಿ ಕಾಣಿಸಿಕೊಳ್ಳುತ್ತಾರೆ. ಮಲೆನಾಡಿನ ಸಂಸ್ಸøತಿಯನ್ನು ಒಳಗೊಂಡ ಅನೇಕ ಅಂಶಗಳು ಈ ಚಳುವಳಿಯಲ್ಲಿ ಅಡವಾಗಿತ್ತು ಎನ್ನುವುದು ಅತಿ ಪ್ರಮುಖವಾದ ಅಂಶವಾಗಿದೆ.ಸ್ವಾರ್ಥರಹಿತ ಸ್ವಾತಂತ್ರ್ಯ ಹೋರಾಟದಿಂದಾಗಿಯೇ ಭವ್ಯ ಭಾರತ ನಿರ್ಮಾಣ ಸಾಧ್ಯವಾಯಿತು.ಇತ್ತೀಚಿನ ದಿನಗಳಲ್ಲಿ ಚಳುವಳಿಗಳು ಎನ್ನುವ ಕಲ್ಪನೆಯೇ ಇಲ್ಲದಂತಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಸಾಗರ ತಾಲೂಕಿನ ಕುರಿತಾಗಿ ಚಿಂತಕ ದೇವೇಂದ್ರ ಬೆಳೆಯೂರು, ಹೊಸನಗರ ತಾಲೂಕಿನ ಕುರಿತಾಗಿ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಎಂ.ವಿ.ಜಯರಾಮ್, ಡಾ.ಮಾರ್ಶಲ್ ಶರಾಮ್, ಭದ್ರಾವತಿ ತಾಲೂಕಿನ ಕುರಿತಾಗಿ ಎಂ.ಪಿ.ಎಂ.ನ ಕಾರ್ಮಿಕ ಮುಖಂಡ ಹೆಚ್.ತಿಮ್ಮಪ್ಪ, ಉಮೇಶ್ ಹಿರೇನಲ್ಲೂರು ಮತ್ತಿತರರಿದ್ದರು.

Ad Widget

Related posts

ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ ಗೆಲವು ಶತಸಿದ್ಧ: ಕಾಂಗ್ರೆಸ್ ನಾಯಕರು, ಹೊಸಮುಖ ಮತ್ತು ಶಾಂತಿಸೌಹಾರ್ದತೆ ಶಿವಮೊಗ್ಗಜನ ಬಯಸುತ್ತಾರೆ

Malenadu Mirror Desk

ಮತ್ತದೇ ಬೇಸರ…ಮತ್ತದೇ ದೂರು…

Malenadu Mirror Desk

ನಾಪತ್ತೆಯಾಗಿದ್ದ ಗಿರಿರಾಜ್ ಸಿಕ್ಕಿದ್ದು ಹೇಗೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.