Malenadu Mitra
Uncategorized

ಛಾಯಾಗ್ರಹಣಕ್ಕಿರುವ ಸಾಮಾರ್ಥ್ಯ ವರ್ಣಿಸಲು ಸಾಧ್ಯವಿಲ್ಲ

ಛಾಯಾಗ್ರಹಣಕ್ಕಿರುವ ಸಾಮಾರ್ಥ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪದಗಳಲ್ಲಿ ವರ್ಣಿಸಲು ಸಾಧ್ಯವಿರದ ಎಷ್ಟೋ ಸಂಗತಿಗಳನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯಬಹುದು ಎಂದು ರೋಟರಿ ಶಿವಮೊಗ್ಗ ಪೂರ್ವಅಧ್ಯಕ್ಷ ಮಂಜುನಾಥ್ ಕದಂ ಹೇಳಿದರು.
ವಿಶ್ವಛಾಯಾಗ್ರಾಹಕರ ದಿನದ ಪ್ರಯುಕ್ತ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ಅವರಿಗೆ ಸನ್ಮಾನಿಸಿ ಮಾತನಾಡಿದರು.
ಛಾಯಾಗ್ರಾಹಕರ ಯೋಚನೆಗಳನ್ನು ಹಂಚಿಕೊಳ್ಳಲು, ಪ್ರೋತ್ಸಾಹಿಸುವ ಮೂಲಕ ಹಾಗೂ ಮುಂದಿನ ಪೀಳೀಗೆಗೆ ತಜ್ಞರಅನುಭವ, ತಾಂತ್ರಿಕ ಕೌಶಲ್ಯಗಳು ಹಾಗೂ ಪ್ರೇರಣೆ ನೀಡುವಉದ್ದೇಶದಿಂದ ಪ್ರತಿ ವರ್ಷಛಾಯಗ್ರಾಹಕರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ನಾಗರಾಜ್‌ಅವರುವನ್ಯಜೀವಿ ಛಾಯಾಗ್ರಾಹಕರಾಗಿಅದ್ಭುತ ಫೋಟೋಗ್ರಾಫಿಮಾಡುತ್ತಾರೆ.ವನ್ಯಜೀವಿ ರಕ್ಷಣೆ, ಪರಿಸರರಕ್ಷಣೆಹಾಗೂ ವಿವಿಧ ವಿಷಯಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದು, ಕನ್ನಡ ಪರಿಷತ್ ಹಾಗೂ ಅನೇಕ ಹೆಸರಾಂತ ಸಂಘ ಸಂಸ್ಥೆಗಳಲ್ಲಿ ಅವರ ಸೇವೆಸ್ಮರಿಸಬಹುದುಎಂದರು.
ವಿಶ್ವಛಾಯಾಗ್ರಾಹಕರ ದಿನಾಚರಣೆಯಪ್ರಯುಕ್ತ ಪತ್ರಿಕಾ ಛಾಯಾಗ್ರಾಹಕ ಹಾಗೂ  ಅಂತರಾಷ್ಟ್ರೀಯ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಸೇರಿದಂತೆ ಇತರೆ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ನಾಗರಾಜ್‌ಅವರಿಗೆರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ರೋಟರಿ ವಲಯ ಸಹಾಯಕಮಾಜಿಗವರ್ನರ್ ಜಿ.ವಿಜಯ್‌ಕುಮಾರ್, ರೋಟರಿ ಮಾಜಿಅಧ್ಯಕ್ಷಕೆ.ಜಿ.ರಾಮಚಂದ್ರರಾವ್, ರೋಟರಿಜಿಲ್ಲಾ ಸಂಪಾದಕ ವಸಂತ್ ಹೋಬಳಿದಾರ್‌ಉಪಸ್ಥಿತರಿದ್ದರು.

ಬಾಂಗ್ಲಾದೇಶ ಆಗಿಲೆ ಫೋಟೋಗ್ರಫಿಕ್ ಸೊಸೈಟಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಆನರಬಲ್ ಮೆನ್ಷನ್‌ಗೌರವ, ಅಮೆರಿಕದ ನ್ಯೂಯಾರ್ಕ್, ನಾರ್ತ್ ಮೆಸಿಡೋನಿಯಾ ಸೇರಿಅನೇಕ ರಾಷ್ಟ್ರಗಳಲ್ಲಿ ಇವರ ಛಾಯಾಚಿತ್ರಗಳು ಪ್ರದರ್ಶನಗೊಂಡಿದೆ.ದೆಹಲಿಯ ವೈಲ್ಡ್ ಲೈಫ್ ಫೋಟೋಗ್ರಫಿ ಅಸೋಶಿಯೇಶನ್ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯಛಾಯಾಚಿತ್ರ ಸ್ಪರ್ಧೆಯಲ್ಲಿಚಿನ್ನ ಬೆಳ್ಳಿ ಸೇರಿಇತರ ಪ್ರಶಸ್ತಿಗಳು ಲಭಿಸಿವೆ.೩ ಅಂತರಾಷ್ಟ್ರೀಯ ಪ್ರಶಸ್ತಿಗಳು ವೆಸ್ಟ್ ಬೆಂಗಾಲ್‌ನ ವಿಬ್ರಂಟ್ ಕಲರ್ ನ್ಯಾಷನಲ್‌ಡಿಜಿಟಲ್ ಸರ್ಕ್ಯೂಟ್ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಡೈಲಿ ಲೈಫ್ ವಿಭಾಗದಲ್ಲಿ ಬೆಸ್ಟ್ ಸ್ಟೋರಿ ಅವಾರ್ಡ್‌ಚಿನ್ನದ ಪದಕ ಹಾಗೂ ವಿ.ಸಿ ಮೆರಿಟ್‌ಅವಾರ್ಡ್ ಹಾಗೂ ರಾಷ್ಟ್ರೀಯ ಪಿಚ್ಚರ್ ಕ್ಯೂಬ್‌ಆರ್ಟ್‌ಕ್ಲಬ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಪಿ.ಎ.ಸಿ ಚಿನ್ನದ ಪದಕಕ್ಕೆ ನಾಗರಾಜ್ ಅವರು ಭಾಜನರಾಗಿರುತ್ತಾರೆ.

Ad Widget

Related posts

ಬೆಳ್ಳಂಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಸಿಟಿ ಬಸ್ ಪಲ್ಟಿ: ಹಲವರಿಗೆ ಗಾಯ

Malenadu Mirror Desk

ಚಿತ್ರಸಿರಿಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಭೇಟಿ,ಕೋಳಿ ಕಜ್ಜಾಯ ಸವಿದು, ಚಿತ್ತಾರ,ತೋರಣ ಬುಟ್ಟಿ ಖರೀದಿ

Malenadu Mirror Desk

ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್ ಗೆ ವಿಮಾನ :ನೂತನ ಮಾರ್ಗದಲ್ಲಿ ಸ್ಪೈಸ್‌ ಜೆಟ್‌ ಸಂಚಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.