ಸೊರಬ: ಶೋಷಿತ ಸಮುದಾಯ ಸೇರಿದಂತೆ ಮನುಷ್ಯ ಕುಲಕ್ಕೆ ನಾರಾಯಣ ಗುರುಗಳ ಕೊಡುಗೆ ಅಪಾರವಾದದ್ದು ಎಂದು ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್ ಹೇಳಿದರು.
ಪಟ್ಟಣ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಆರ್ಯ ಈಡಿಗ(ದೀವರ) ಸಮಾಜ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಸಿಆರ್‍ಪಿ ಮಂಜಪ್ಪ ಹುಲ್ತಿಕೊಪ್ಪ ಉಪನ್ಯಾಸ ನೀಡಿ, ಶಿಕ್ಷಣವನ್ನು ಜಾತಿ ಆಧಾರಿತವಾಗಿ ನೀಡದೆ ಸಮುದಾಯ ಆಧರಿತವಾಗಿ ನೀಡಿದವರು ನಾರಾಯಣ ಗುರು. ಕೇರಳ, ತಮಿಳುನಾಡು, ಶ್ರೀಲಂಕ, ಕರ್ನಾಟಕದಲ್ಲಿ 79 ದೇವಾಲಯಗಳನ್ನು ಕಟ್ಟುವ ಮೂಲಕ ಹೊಸ ಆಧ್ಯಾತ್ಮಿಕತೆ ಬಿತ್ತಿದ್ದಲ್ಲದೆ ದೇವಸ್ಥಾನಗಳಲ್ಲಿ ಶಿಕ್ಷಣ ನೀಡಲು ಕರೆ ನೀಡಿದ್ದರು ಎಂದ ಅವರು ಮಾನವ ಧರ್ಮದ ನಿರ್ಮಾಣಕ್ಕಾಗಿ ಹೋರಾಡಿದ ಮಹಾನ್ ಸಮಾಜ ಸುಧಾರಕ ನಾರಾಯಣ ಗುರುವಾಗಿದ್ದಾರೆ ಎಂದರು.
ತಾಲೂಕು ಆರ್ಯ ಈಡಿಗ(ದೀವರ) ಸಂಘದ ಅಧ್ಯಕ್ಷ ಕೆ.ಅಜ್ಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಸೀಲ್ದಾರ್ ಶಿವಾನಂದ ಪಿ.ರಾಣೆ, ಇಓ ಕೆ.ಜಿ.ಕುಮಾರ್, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಜಿ.ಡಿ.ನಾಯ್ಕ್, ತಾಲೂಕು ನಾರಾಯಣ ಗುರು ಪ್ರತಿಷ್ಠಾನದ ಅಧ್ಯಕ್ಷ ಜಗದೀಶ್ ಕುಳವಳ್ಳಿ, ಶ್ರೀ ನಾಯಾರಣ ಗುರು ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು, ತಾಲೂಕು ಅಧ್ಯಕ್ಷ ಶಿವಕುಮಾರ್, ಬಿಎಸ್ ಎನ್ ಡಿಪಿ ತಾಲೂಕು ಅಧ್ಯಕ್ಷ ನಾಗೇಶ್, ಜಿಲ್ಲಾಧ್ಯಕ್ಷ ನಾಗರಾಜ್, ತಾಲೂಕು ಈಡಿಗ ಸಂಘದ ಮಾಜಿ ಅಧ್ಯಕ್ಷ ಹನುಮಂತಪ್ಪ ಯಲಸಿ, ನೌಕರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್, ಕರವೇ ಅಧ್ಯಕ್ಷ ಸಿ.ಕೆ.ಬಲೀಂದ್ರಪ್ಪ, ಜೆ.ಶಿವಾನಂದಪ್ಪ, ಎಂ.ಡಿ.ಶೇಖರ್, ಲಿಂಗೇಶ್, ಕಲ್ಲಪ್ಪ, ಸುಮಿತ್ರ ನಾಯ್ಕ್, ವಿನೋದ್ ಸೇರಿದಂತೆ ಸಮಾಜದ ಮುಖಂಡರಿದ್ದರು.
previous post