Malenadu Mitra
ರಾಜ್ಯ ಶಿವಮೊಗ್ಗ

ಆಗಸ್ಟ್ 27ರಂದು ಈಡಿಗ ಸಮುದಾಯ ಭವನದ ಗುದ್ದಲಿ ಪೂಜೆ


ಸೊರಬ: ಈಡಿಗ ಸಮುದಾಯದ ಬಹು ದಿನಗಳ ಬೇಡಿಕೆಯಾಗಿದ್ದ ಸಮುದಾಯದ ಭವನದ ಗುದ್ದಲಿಪೂಜೆ ಕಾರ್ಯಕ್ರಮ ಆ. 27ರಂದು ಬೆಳಿಗ್ಗೆ ೯ಕ್ಕೆ ಪಟ್ಟಣದ ಸಾಗರ ರಸ್ತೆಯ ಹಿರೇಶಕುನದಲ್ಲಿನ ಸಮಾಜದ ನಿವೇಶನದಲ್ಲಿ ಜರುಗಲಿದೆ ಎಂದು ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಕೆ. ಅಜ್ಜಪ್ಪ ಕಾಸರಗುಪ್ಪೆ ತಿಳಿಸಿದರು.


ಬುಧವಾರ ಪಟ್ಟಣದಲ್ಲಿ ಈಡಿಗ ಸಮುದಾಯ ಭವನದ ಭೂಮಿ ಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ, ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಬಹುಸಂಖ್ಯಾತ ಸಮುದಾಯವಾಗಿರುವ ಈಡಿಗ ಜನಾಂಗದ ಸ್ವಂತ ಸಮುದಾಯ ಭವನ ಇರಲಿಲ್ಲ. ಬಹುದಿನಗಳ ಕನಸು ಈಡೇರಿತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸಮುದಾಯ ಭವನದ ಗುದ್ದಲಿಪೂಜೆ ನೆರವೇರಿಸಲಿದ್ದು, ಶಾಸಕ ಎಸ್. ಕುಮಾರ್ ಬಂಗಾರಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ತಾಲ್ಲೂಕು ಆರ್ಯ ಈಡಿಗ (ದೀವರ) ಸಂಘದ ಅಧ್ಯಕ್ಷ ಕೆ. ಅಜ್ಜಪ್ಪ ಅಧ್ಯಕ್ಷತೆ ವಹಿಸುವರು. ಗೃಹ ಸಚಿವ ಅರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಿಂಗದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ, ಶಾಸಕರಾದ ಎಚ್. ಹಾಲಪ್ಪ, ಭಾರತಿ ಶೆಟ್ಟಿ, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಗೋಪಾಲಕೃಷ್ಣ ಬೇಳೂರು, ಚಲನಚಿತ್ರ ನಿರ್ಮಾಪಕ ಎಂ.ವಿ. ಕೃಷ್ಣಪ್ಪ, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಆರ್. ಶ್ರೀಧರ್, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.


ಸಭಾ ಭವನದ ಗುದ್ದಲಿಪೂಜಾ ಕಾರ್ಯಕ್ರಮ ಕಳೆದ ನಾಲ್ಕು ತಿಂಗಳ ಹಿಂದೆಯೇ ಜರುಗಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾದ ಪರಿಣಾಮ ತಡವಾಯಿತು. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರೇ ನೆರವೇರಿಸುವರು ಎಂಬ ಮಹದಾಕಾಂಕ್ಷೆ ಇತ್ತು. ಇದೀಗ ಕಾಲ ಕೂಡಿ ಬಂದಿದ್ದು, ಜಿಲ್ಲೆಯ ಎಲ್ಲಾ ಜನಪ್ರನಿಧಿಗಳ ಸಮ್ಮುಖದಲ್ಲಿ ಜರುಗುತ್ತಿರುವುದು ಸಂತಸ ತಂದಿದೆ. ತಾಲ್ಲೂಕಿನ ಈಡಿಗ ಸಮುದಾಯವರು ಸೇರಿದಂತೆ ಇತರೆ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಎಂ.ಡಿ. ಶೇಖರ್, ಸಂಘದ ಖಜಾಂಚಿ ಎಚ್. ಮಹಾದೇವಪ್ಪ, ಮಾಜಿ ಅಧ್ಯಕ್ಷ ಹನುಮಂತಪ್ಪ ಯಲಸಿ, ಜಿ.ಡಿ. ನಾಯ್ಕ್ ಇತರರಿದ್ದರು.

Ad Widget

Related posts

ಕಾಗೋಡು ಚಳವಳಿಗೆ -70 , ಆತ್ಮಾವಲೋಕನಕ್ಕಿದು ಸಕಾಲ

Malenadu Mirror Desk

ಶಿವಮೊಗ್ಗ ಜಿಲ್ಲೆಯಲ್ಲಿ 98 ಹೊಸ ಕೇಸ್‍

Malenadu Mirror Desk

ಒಳಮೀಸಲಾತಿಯಲ್ಲಿ ಬಂಜಾರರಿಗೆ ನ್ಯಾಯ ಸಿಕ್ಕಿದೆ: ಶಾಸಕ ಅಶೋಕ್ ನಾಯ್ಕ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.