ಹತ್ತಾರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತ, ಶಿವಮೊಗ್ಗ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರಿಗೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ತೆಲಂಗಾಣ ರಾಜ್ಯದ ಸಿಗ್ಮಾ ಫೋಟೋಗ್ರಾಪಿ ಅಕಾಡೆಮಿ 2021ರ ರಾಷ್ಟ್ರೀಯ ಫೋಟೋಗ್ರಾಫಿ ಸ್ಪರ್ದೆಯಲ್ಲಿನ ಓಪನ್ ಕಲರ್ ವಿಭಾಗದ ಫೆಂಟಾಸ್ಟಿಕ್ ರನ್ ಚಿತ್ರಕ್ಕೆ ವಿಜುಯಲ್ ಫೋರ್ಸ್ ಬೆಳ್ಳಿ ಪದಕವನ್ನು ನೀಡಿ ಗೌರವಿಸಿದೆ. ಇದು ಧರ್ಮಸ್ಥಳ ಸಮೀಪದ ಬಂಗಾಡಿಕೊಲ್ಲಿಯಲ್ಲಿ ನಡೆದ ಕಂಬಳದ ಓಟದ ಚಿತ್ರಕ್ಕೆ ಲಭಿಸಿದ ಪ್ರಶಸ್ತಿಯಾಗಿರುತ್ತದೆ.
ಇದೇ ಸಂಸ್ಥೆಯು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತ ವ್ಯಕ್ತಿಯನ್ನು ಅತ್ಯಂತ ವ್ಯವಸ್ಥಿತವಾಗಿ ಆಸ್ಪತ್ರೆ ಸಿಬ್ಬಂದಿಗಳು ಸಾಗಿಸುತ್ತಿರುವಾಗ ತೆಗೆದ ಚಿತ್ರಕ್ಕೆ ಫೋಟೋ ಜರ್ನಲಿಸಂ ವಿಭಾಗದಲ್ಲಿ ಎಫ್‌ಐಪಿ ರಿಬ್ಬನ್ ಪ್ರಶಸ್ತಿ ಲಭಿಸಿದೆ. ಅಂತೆಯೇ ಶ್ರವಣ ಬೆಳಗೋಳದ ಮಹಾಮಸ್ತಾಕಾಭಿಕ್ಷೇಕದಲ್ಲಿ ತೆಗೆದ ಪಾದದ ನೈಜತೆಯ ಸರೆಂಡರ್ ಚಿತ್ರಣಕ್ಕೆ ಫೋಟೋ ಟ್ರಾವೆಲ್ ವಿಭಾಗದಲ್ಲಿ ಎಫ್‌ಐಪಿ ರಿಬ್ಬನ್ ಪ್ರಶಸ್ತಿ ಲಭಿಸಿದೆ.
ಅಲ್ಲದೇ ಒಟ್ಟು 8 ಛಾಯಾಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಈ ಮೂರು ಪ್ರಶಸ್ತಿಗಳನ್ನು ಪಡೆಯುದಿರುವ ಶಿವಮೊಗ್ಗ ನಾಗರಾಜ್ ಅವರ ಸಾಧನೆಗೆ ಅತ್ಮೀಯರು ಹಾಗೂ ಗಣ್ಯರು ಶುಭಕೋರಿದ್ದಾರೆ.