Malenadu Mitra
ರಾಜ್ಯ ಶಿವಮೊಗ್ಗ

ಮಾಜಿ ಆದ್ರೇನ್ …ಬಾಸು … ಮಾಸೇ ಗುರು…

.
ರಾಜಾಹುಲಿಗೆ ಸಿಕ್ತು ಆತ್ಮೀಯ ಸ್ವಾಗತ


ಏನಪಾ ಇದು ಸಿನೆಮಾ ಡೈಲಾಗ್ ಅಂದ್ಕೊಂಡ್ರಾ…. ಇಲ್ಲ ಮೊನ್ನೆ ಮೊನ್ನೆ ಮುಖ್ಯಮಂತ್ರಿ ಖುರ್ಚಿಯಿಂದ ಇಳಿದ ರಾಜಾಹುಲಿ ಬಿಎಸ್ ಯಡಿಯೂರಪ್ಪ ಅವರಿಗೆ ತವರು ಜಿಲ್ಲೆ ಶಿವಮೊಗ್ಗದಲ್ಲಿ ದೊರೆತ ಭಾರೀ ಸ್ವಾಗತವನ್ನು ನೋಡಿದಾಗ ಯಾರಿಗೇ ಆದರೂ ಹೀಗೆ ಅನಿಸದಿರದು.
ಹೌದು!. ಸಿಎಂಗಾದಿಯಿಂದ ಇಳಿದ ಬಳಿಕ ಇದೇ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬಂದ ಯಡಿಯೂರಪ್ಪ ಅವರನ್ನು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಶಿವಮೊಗ್ಗಕ್ಕೆ ಬರುವುದು ಎಲ್ಲರಿಗೂ ಗೊತ್ತಿರಲಿಲ್ಲ ಆದರೂ ಪಕ್ಷದ ಕಾರ್ಯಕರ್ತರಿಗೆ ಗೊತ್ತಿದ್ದ ಕಾರಣ ವಿನೋಬನಗರದಲ್ಲಿರುವ ಅವರ ಮನೆಯ ಬಳಿ ತುಂಬಾ ಜನ ನೆರೆದಿದ್ದರು.
ಬಿಎಸ್‌ವೈ ಬರುತ್ತಿದ್ದಂತೆ ಪಟಾಕಿ ಸಿಡಿಸಿ,ಜೈಕಾರ ಮೊಳಗಿಸಿ ಸ್ವಾಗತಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಪ್ರವಾಸ ಮಾಡಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಹೇಳುವ ಮೂಲಕ ತಮ್ಮಲ್ಲಿನ್ನೂ ರಾಜಕೀಯ ಕಸುವಿದೆ ಎಂಬ ಸಂದೇಶವನ್ನು ವಿರೋಧಿಗಳಿಗೆ ನೀಡಿದರು. ಆಧಿಕಾರ ಇರಲಿ ಬಿಡಲಿ ಶಿವಮೊಗ್ಗದ ಅಭಿವೃದ್ಧಿಗೆ ಹಿನ್ನಡೆಯಾಗದು ಎಂಬ ಅಭಯವನ್ನು ಪಕ್ಷದ ಕಾರ್ಯಕರ್ತರಿಗೆ ನೀಡಿದರು.

ಸೆಲ್ಫೀ ಹವಾ

ಯಡಿಯೂರಪ್ಪ ಅವರೊಂದಿಗೆ ಫೋಟೋ ಸೆಷನ್‌ಗೆ ಹೆಚ್ಚಿನ ಬೇಡಿಕೆ ಇತ್ತು. ಗಂಡು-ಹೆಣ್ಣು ಬೇಧವಿಲ್ಲದೆ ಎಲ್ಲರೂ ನೆಚ್ಚಿನ ನಾಯಕನೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಮಹಿಳಾ ಕಾರ್ಯಕರ್ತರು ರಾಖಿ ಕಟ್ಟಿ ಆಶೀರ್ವಾದ ಪಡೆದರು. ಇನ್ನು ಅವರು ರಾಜ್ಯ ಪ್ರವಾಸಕ್ಕಾಗಿ ಇತ್ತೀಚೆಗಷ್ಟೇ ಖರೀದಿ ಮಾಡಿರುವ ಒಂದು ಕೋಟಿ ರೂ. ಮೌಲ್ಯದ ಕಾರಿನ ಮುಂದೆಯೂ ಕೆಲವು ಕಾರ್ಯಕರ್ತರು ಸೆಲ್ಫಿ ತೆಗೆಸಿಕೊಂಡರು. ಮಾಸ್‌ಲೀಡರ್ ಒಬ್ಬರು ರಿಲ್ಯಾಕ್ಸ್ ಮೂಡ್‌ನಲ್ಲಿ ಊರಿಗೆ ಬಂದರೂ ಅವರ ಅಭಿಮಾನಿಗಳು ಅವರಿಗೆ ಬಿಡುವುಕೊಡದಂತೆ ಜತೆಗಿದ್ದು ಸಂಭ್ರಮಿಸಿದರು.
ಈ ಸಂದರ್ಭ ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ತಂದೆಯವರಿಗೆ ಸಾಥ್ ನೀಡಿದರು. ಜಿಲ್ಲಾ ಬಿಜೆಪಿ ಅದ್ಯಕ್ಷ ಮೇಘರಾಜ್, ಒಡನಾಡಿ ಪದ್ಮನಾಭ್ ಭಟ್ ಸೇರಿದಂತೆ ಅನೇಕ ಮುಖಂಡರು ಸ್ಥಳೀಯ ಬಿಜೆಪಿ ನಾಯಕರು ಹಾಜರಿದ್ದರು. ಯಡಿಯೂರಪ್ಪಅವರು ಇನ್ನೂ ನಾಲ್ಕು ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯಲ್ಲಿಯೇ ಇರುತ್ತಾರೆ.

Ad Widget

Related posts

ಶಿವಮೊಗ್ಗದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ, ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಸಂಸದರ ಸೂಚನೆ,ಆರೋಪಿಗಳು ಪೊಲೀಸ್ ವಶಕ್ಕೆ

Malenadu Mirror Desk

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆ.11ರಿಂದ ವಿಮಾನ ಹಾರಾಟ, ಸಚಿವ ಎಂ.ಬಿ.ಪಾಟೀಲ್ ಹೇಳಿಕೆ, ರಾಜ್ಯ ಸರ್ಕಾರದಿಂದ ಕಾರ್ಯಾಚರಣೆ ಮತ್ತು ನಿರ್ವಹಣೆಗೊಳ್ಳಲಿರುವ ಮೊದಲ ಏರ್ ಪೋರ್ಟ್

Malenadu Mirror Desk

ಭದ್ರಾವತಿಯಲ್ಲಿ ಕೆಜಿಗಟ್ಟಲೇ ಗಾಂಜಾ ವಶ : ಮೂವರ ಬಂಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.