ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಖಂಡಿಸಿ ಶಿವಮೊಗ್ಗ ಶಾಶ್ವತಿ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಾಂಸ್ಕೃತಿಕ ನಗರ ಮೈಸೂರಿನ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಪುಣ್ಯ ಸ್ಥಳದಲ್ಲಿ ಇಂತಹ ಅಮಾನವೀಯ ಪೈಶಾಚಿಕ ನೀಚ ಕೃತ್ಯ ನಡೆದಿರುವುದು ನಾಡಿನ ಜನತೆ ತಲೆ ತಗ್ಗಿಸುವ ಸಂಗತಿಯಾಗಿದೆ. ಕಾಮುಕರಿಗೆ ಕೇವಲ ಜೈಲು ಶಿಕ್ಷೆ ನೀಡದೇ ಗಲ್ಲು ಶಿಕ್ಷೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಮತ್ತು ಇಂತಹ ಘಟನೆಗಳು ನಡೆದಾಗ ರಾಜಕಾರಣಿಗಳು ವಿವಾದಾತ್ಮಕ ಹೇಳಿಕೆ ನೀಡಬಾರದು. ಇದರ ಜೊತೆಗೆ ಪೋಷಕರು ಕೂಡ ಎಚ್ಚರಿಕೆ ವಹಿಸಬೇಕು. ಶಿಕ್ಷೆ ವಿಳಂಬವಾಗದೇ ಆದಷ್ಟು ಶೀಘ್ರ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವೇದಿಕೆಯ ಅಧ್ಯಕ್ಷೆ ಡಾ. ಶಾಂತಾ ಸುರೇಂದ್ರ, ಲೋಲಾಕ್ಷಿ, ಭಾಗ್ಯಲಕ್ಷ್ಮಿ, ಶಾಂತಾ, ಮಂಜುಳಾ, ಲಲಿತಾ, ವಾಣಿ, ಪ್ರೇಮಾ, ನಂದಿನಿ, ಮಾಲಾ, ಮಂಜುಳಾ, ಮೀನಾ, ಸ್ನೇಹ, ಕೀರ್ತಿ, ಸುಜಾತಾ, ಸುಮಿತ್ರ
next post