ಶಿವಮೊಗ್ಗ ಸಮೀಪದ ಸೋಗಾನೆ ಗ್ರಾಮದ ಬೋಜಪ್ಪ ಕ್ಯಾಂಪ್‌ನಲ್ಲಿ ವಿದ್ಯುತ್ ತಗುಲಿ ರಾಮಚಂದ್ರನಾಯ್ಕ್ (೪೨) ಎಂಬ ರೈತ ಸಾವಿಗೀಡಾಗಿದ್ದಾರೆ. ಭತ್ತದ ಗದ್ದೆಗೆ ಗೊಬ್ಬರ ಹಾಕಲು ಹೋಗಿದ್ದ ರಾಮಚಂದ್ರ ನಾಯ್ಕ್ ಅವರಿಗೆ ವಿದ್ಯುತ್ ತಗುಲಿದೆ. ಪಕ್ಕದ ಜಮೀನಿನವರ ನಿರ್ಲಕ್ಷದಿಂದಾಗಿಯೇ ಅಮಾಯಕ ರೈತನ ಪ್ರಾಣಕ್ಕೆ ಕುತ್ತಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ,
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಅವರ ಸೋದರ ಮುರಳೀಧರ್ ಎಂಬುವವರ ಜಮೀನು ಪಕ್ಕದ್ದಲ್ಲಿದ್ದು, ಅವರ ಬೋರ್‌ವೆಲ್‌ಗೆ ಕಲ್ಪಿಸಿರುವ ವಿದ್ಯುತ್ ಸಂಪರ್ಕ ಅಸಮರ್ಪಕವಾಗಿದ್ದು, ಅವಘಡ ಸಂಭವಿಸಲು ಕಾರಣ ಎನ್ನಲಾಗಿದೆ. ಬೋರ್ ಮೀಟರ್ ನೆಲಕ್ಕೆ ತಾಗಿದ ಕಾರಣ ಶಾರ್ಟ್ ಸರ್ಕ್ಯುಟ್ ಆಗಿದೆ.
ಪಕ್ಕದ ಜಮೀನಿನವರ ನಿರ್ಲಕ್ಷö್ಯದಿಂದಾಗಿಯೇ ಈ ದುರಂತವಾಗಿದೆ ಎಂದು ರಾಮಚಂದ್ರನಾಯ್ಕ್ ಕುಟುಂಬ ಆರೋಪಿಸಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
previous post
next post