Malenadu Mitra
ಶಿವಮೊಗ್ಗ

ಜನತೆ ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು :ಡಾ.ಮಹಾಂತ ಸ್ವಾಮೀಜಿ

12 ನೇ ಶತಮಾನದ ಶರಣರ ತತ್ವ ಸಿದ್ಧಾಂತ, ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಮಠಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಡೆ ಸಂಸ್ಥಾನ ಮಠ, ಸೊರಬ ಮುರುಘಾ ಮಠದ ಡಾ.ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಸೊರಬ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡ ಸಂಸ್ಥಾಪಕರ ದಿನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಂಸ್ಕೃತಿಗೆ ನಮ್ಮ ಜಿಲ್ಲೆಯ ಕೊಡುಗೆ ದೊಡ್ಡದಿದ್ದು, ಶರಣ ಸಾಹಿತ್ಯ ಪರಿಷತ್ತು ವಚನ ಸಾಹಿತ್ಯ ಕೇಂದ್ರೀಕರಿಸಿಕೊಂಡು ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿದೆ ಎಂದ ಅವರು ಬಸವಣ್ಣನವರು ಕಂದಾಚಾರ, ಮೌಢ್ಯಗಳನ್ನು ತೊಲಗಿಸಲು ಪ್ರಯತ್ನಿಸಿದ್ದರು. ಇಂದಿನ ಜನತೆ ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು. ಮೈಸೂರಿನ ಸುತ್ತೂರು ಮಠದ ಶ್ರೀಗಳ ಚಿಂತನೆಯಿಂದ ಇಂದು ಶರಣ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದೆ ಎಂದರು.
ಶಿವಮೊಗ್ಗ ಮಲೆನಾಡು ಅಭಿವೃದ್ಧಿ ಮಂಡಳಿ ನಿರ್ದೇಶಕ ಅಶೋಕ್ ನಾಯ್ಕ ಉದ್ಘಾಟಿಸಿ ಮಾತನಾಡಿ, ೧೨ ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲಾ ಜಾತಿ, ವರ್ಗದವರು ಸೇರಿಸಿಕೊಂಡು ಹೊಸ ನಾಡು ಕಟ್ಟಲು ಮುಂದಾಗಿದ್ದರು. ಆ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದೆ ಎಂದ ಅವರು ಅಲ್ಲಮ ಪ್ರಭು, ಅಕ್ಕಮಹಾದೇವಿಯಂತಹ ಮಹಾನ್ ವಚನಕಾರರನ್ನು ನಮ್ಮ ಜಿಲ್ಲೆ ಹೊಂದಿದ್ದು ಹೆಮ್ಮೆ ಎಂದರು.
ರಾಜ್ಯ ಬಸವ ಬಳಗದ ಸಂಚಾಲಕ ಮಹಾಂತೇಶ್ ಕಳ್ಳಿಕೊನಿ ಅವರು ವಚನ ಸಾಹಿತ್ಯ ಮತ್ತು ಸಾಮಾಜಿಕ ಪರಿವರ್ತನೆ ಬಗ್ಗೆ ಉನ್ಯಾಸ ನೀಡಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಸೊರಬದ ಅಧ್ಯಕ್ಷ ಎಸ್.ಕೃಷ್ಣಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೂತನ ಅಧ್ಯಕ್ಷ ಮೃತ್ಯುಂಜಯ ಗೌಡ, ಉದ್ಯಮಿ ಎಂ.ಎನ್.ಗುರುಮೂರ್ತಿ, ಡಾ.ಎಚ್.ಇ.ಜ್ಞಾನೇಶ್, ಪಾಣಿ ರಾಜಪ್ಪ, ದೇವಕಿ ಪಾಣಿ, ಲೋಲಾಕ್ಷ್ಮಮ್ಮ, ಜಯಮಾಲ, ಡಿ.ಎಸ್.ಶಂಕರ್ ಇತರರಿದ್ದರು. ಸದಸ್ಯ ವಿಜೇಂದ್ರ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಸುನಂದ ನಿರೂಪಿಸಿದರು. ಸಂಗೀತ ಶಿಕ್ಷಕ ಪ್ರವೀಣ್ ಭಂಡಾರಿ ಮತ್ತು ಶಿಷ್ಯ ಬಳಗದಿಂದ ವಚನ ಗಾಯನ ನಡೆಯಿತು.

Ad Widget

Related posts

ಶಿವಮೊಗ್ಗದಲ್ಲಿ 720 ಮಂದಿಗೆ ಸೋಂಕು, 5 ಸಾವು

Malenadu Mirror Desk

ಗ್ರಾಮ ಪಂಚಾಯಿತಿಗಳ ಬಲವರ್ಧನೆಗೆ ಕ್ರಮ: ಡಿ.ಎಸ್. ಅರುಣ್

Malenadu Mirror Desk

ಶಿವಮೊಗ್ಗದಲ್ಲಿ 1 ಸಾವು, 304 ಮಂದಿಗೆ ಸೋಂಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.