ಶಿವಮೊಗ್ಗ,ಆ.೩೦: ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ಸೊರಬ ತಾಲೂಕು ಘಟಕದಿಂದ ನಾರಾಯಣಗುರು ಜಯಂತಿ ಆಚರಿಸಲಾಯಿತು. ಚಂದ್ರಗುತ್ತಿ ಹೋಬಳಿಯ ಹರೀಶಿ ಸರ್ಕಲ್ ಬಳಿ ನಡೆದ ಸಮಾರಂಭದಲ್ಲಿ ಮುಖಂಡರಾದ ತಬಲಿಬಂಗಾರಪ್ಪ,
ಸಂಘಟನೆ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಕೈಸೋಡಿ, ತಾಲ್ಲೂಕು ಗೌರವ ಅಧ್ಯಕ್ಷರು ಕಲ್ಲಪ್ಪ ಚಿತ್ರಟ್ಟೇಹಳ್ಳಿ, ಬಂಗಾರಪ್ಪ ಕಂಟ್ರಾಕ್ಟರ್,ತಾಲ್ಲೂಕು ಅಧ್ಯಕ್ಷರು ನಾಗೇಶ ರಾಜೀವನಗರ, ಉಪಾಧ್ಯಕ್ಷ ತ್ಯಾಗರಾಜ ಹುಲ್ತಿಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ್ ಸಾರೇಮರೂರು,
ಮಣ್ಣತಿ ಪರಮೇಶ್ವರ, ಹರೀಶಿ ಗ್ರಾಮ ಪಂಚಾಯತಿ ಅಧ್ಯಕ್ಷರು ರಾಕೇಶ್, ಉಮಾಪತಿ, ಹಾಗು ಹೇಮಂತ್ ನೆಲ್ಲೂರು,ಚಿದಂಬರ ನೆಲ್ಲೂರು ಮತ್ತಿತರರು ಭಾಗವಹಿಸಿದ್ದರು.
previous post