Malenadu Mitra
ರಾಜ್ಯ ಶಿವಮೊಗ್ಗ

ರೈತರಿಗೆ ಶಕ್ತಿ ತುಂಬುವ ಕೆಲಸ: ಸಂಸದ ಬಿ.ವೈ ರಾಘವೇಂದ್ರ

ರೈತ ನಮ್ಮ ಬೆನ್ನೆಲುಬು ಅಂತ ಬೇರೆ ಪಕ್ಷಗಳು ಭಾಷಣ ಮಾಡಿದರೂ ಆದರೆ, ನಮ್ಮ ಪ್ರಧಾನಿ ಮೋದಿಜಿ ನೇತೃತ್ವದ ಸರ್ಕಾರ ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಕಿಸಾನ್ ಸನ್ಮಾನ್ ಯೋಜನೆಯ ಅಡಿಯಲ್ಲಿ ನೇರವಾಗಿ ಹಣವನ್ನು ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಶಿವಮೊಗ್ಗದ ಜಿಲ್ಲಾ ಪಂಚಾಯತ್ ಅಬ್ದುಲ್ ಸಜೀರ್ ಸಾಬ್ ಸಭಾಂಗಣದಲ್ಲಿ ಕೆನರಾ ಬ್ಯಾಂಕ್, ಮಾರ್ಗದರ್ಶಿ ಬ್ಯಾಂಕ್ ಕೃಷಿ ಮೂಲ ಸೌಕರ್ಯ ನಿಧಿಯ ’ಟೌನ್ ಹಾಲ್ ಸಭೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದಿಂದ ಮಹಾಮಾರಿ ಕರೋನಾ ಸಂದರ್ಭದಲ್ಲಿ ಕೃಷಿ ಮೂಲ ಸೌಕರ್ಯ ಯೋಜನೆಗೆ ೧ ಲಕ್ಷ ಕೋಟಿ ರೂ. ಹಣಕಾಸು ಸೌಲಭ್ಯವನ್ನು ನೀಡಿದ್ದಾರೆ . ಇದರಲ್ಲಿ  ನಮ್ಮ ಕರ್ನಾಟಕಕ್ಕೆ ೪೫೨೫ ಕೋಟಿ(೪ ವರ್ಷಕ್ಕೆ) ನಿಗಧಿಪಡಿಸಿದ್ದಾರೆ ಎಂದರು.
ಬ್ಯಾಂಕ್ ಸಿಬ್ಬಂದಿಗೆ ಅಭಿನಂದನೆ :
ರಾಷ್ಟೀಕೃತ ಬ್ಯಾಂಕ್, ಪ್ರೈವೇಟ್ ಬ್ಯಾಂಕ್, ಕೋ ಓಪರೆಟಿವ್ ಬ್ಯಾಂಕ್ ಮತ್ತು ಅಲ್ಲಿನ ಸಿಬ್ಬಂದಿಗಳು ೨೪/೭ ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ಅಭಿನಂದನೆ, ನಮ್ಮ ರೈತರು ಬ್ಯಾಂಕ್ ಗೆ ಬಂದಾಗ ಶೀಘ್ರವಾಗಿ ಕೆಲಸವನ್ನು ಮಾಡಿಕೊಡಿ, ನಮ್ಮ  ಡಿಜಿಟಲ್ ಇಂಡಿಯಾ ಮತ್ತು ಅನೇಕ ಚಟುವಟಿಕೆಗಳು ಬ್ಯಾಂಕ್ ಮೂಲಕ ತಲುಪುತ್ತಿದೆ ಸರ್ಕಾರದ ಯೋಜನೆಯಲ್ಲಿ ಹೆಚ್ಚು ಜನರಿಗೆ ತಲುಪಿಸುವುದು ನಮ್ಮ ಕೆಲಸವಾಗಿದೆ ಎಂದರು.
ಉಜ್ವಲ ಯೋಜನೆ ಸಾಮಾನ್ಯ ಜನರಿಗೆ ತಲುಪುತ್ತಿದೆ. ಫಸಲ್ ಭೀಮಾ ಯೋಜನೆಯ ಮೂಲಕ ಬೆಳೆದ ಫಸಲಿಗೆ ನೇರವಾಗುತ್ತಿದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ದೀಪಾವಳಿಯವರೆಗೆ ಅಕ್ಕಿಯನ್ನು ಮತ್ತು ಮುದ್ರಾ ಯೋಜನೆಯಲ್ಲಿ ಸುಲಭವಾಗಿ ಸ್ಟಾರ್ಟ್ ಆಪ್ ಪ್ರಾರಂಭಿಸುವ ಕೆಲಸವನ್ನು ನಮ್ಮ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್, ಕೆನರಾ ಬ್ಯಾಂಕ್ ಉಪ ಪ್ರಬಂಧಕ ಸಂದೀಪ್ ರಾವ್.ಪಿ, ಪಾಲಿಕೆಯ ಮಹಾ ಪೌರರಾದ ಸುನೀತಾ ಅಣ್ಣಪ್ಪ, ನಬಾರ್ಡ್ ಬಿ. ರವಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್ ಮತ್ತಿತರು ಉಪಸ್ಥಿತರಿದ್ದರು.

Ad Widget

Related posts

ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಹೃದ್ರೋಗಕ್ಕೆ ಗುಣಮಟ್ಟದ ಚಿಕಿತ್ಸೆ ಲಭ್ಯ: ಡಾ.ಮಂಜುನಾಥ್

Malenadu Mirror Desk

ಕಲ್ಲುತೂರಾಟ ಖಂಡಿಸಿ ಅ.12 ಕ್ಕೆ ಬಿಜೆಪಿ ಪ್ರತಿಭಟನಾ ಸಭೆ

Malenadu Mirror Desk

ಹಲವು ಸಂದೇಶ ನೀಡಿದ ಈಡಿಗರ ಹಕ್ಕೊತ್ತಾಯ ಸಮಾವೇಶ, ಸಮುದಾಯದ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ಸಮುದಾಯದ ನಾಯಕರು ಭ್ರಮೆಯಿಂದ ಹೊರಬರಲಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.