Malenadu Mitra
ರಾಜ್ಯ ಶಿವಮೊಗ್ಗ

ಗಾಂಜಾ ಗುಂಗಿನಲ್ಲಿ ದಾಂಧಲೆ,ಪುಂಡರ ಬಂಧನ

ಶಿವಮೊಗ್ಗ: ಕದ್ದ ಕಾರಿನಲ್ಲಿ ಗಾಂಜಾ ಮತ್ತಿನಲ್ಲಿದ್ದ ಸಾಗುತ್ತಿದ್ದ ಯುವಕರ ತಂಡವೊಂದು ಶಿವಮೊಗ್ಗ ರವೀಂದ್ರನಗರ ಗಣಪತಿ ದೇವಸ್ಥಾನದ ಬಳಿ ಪಾದಚಾರಿ ಮತ್ತು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ದಾಂಧಲೆ ಮಾಡಿ ಬುಧವಾರ ಸಿಕ್ಕಿಬಿದ್ದಿದೆ.
ಅಮಲಿನಲ್ಲಿ ಆಯಾ ತಪ್ಪಿ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿಕೊಂಡ ಮೂವರು ಪುಂಡರನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗೋಪಾಳದ ಮೂವರನ್ನು ಬಂಧಿಸಿದ್ದು, ಟಿಪ್ಪುನಗರದ ಯುವಕ ನಾಪತ್ತೆಯಾಗಿದ್ದಾನೆ.

ಬೆಳ್ಳಂಬೆಳಗ್ಗೆ ಗಣಪತಿ ದೇವಸ್ಥಾನದ ಬಳಿ ಪಾದಾಚಾರಿಯೊಬ್ಬರಿಗೆ ಮತ್ತು ಪೊಲೀಸ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಸಾರ್ವಜನಿಕರು ಗುಂಪು ಸೇರಿಸುತ್ತಿದ್ದಂತೆ ಚಾಕು, ಮಚ್ಚುಗಳಿಂದ ಬೆದರಿಸಿ ಕಾರನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದರು.
ಗಾಂಧಿನಗರದ ೨ನೇ ತಿರುವಿನ ಮನೆಯೊಂದರಲ್ಲಿ ಅವಿತುಕೊಳ್ಳಲು ಯತ್ನಿಸಿದಾಗ ಬೆನ್ನಟ್ಟಿದ್ದ ಸಾರ್ವಜನಿಕರು ಮೂವರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಒಬ್ಬ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆ ಬಗ್ಗೆ ಮಾಹಿತಿ ನೀಡಿದರೂ ತಡವಾಗಿ ಸ್ಥಳಕ್ಕೆ ಬಂದ ಪೊಲೀಸರ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಮೂವರನ್ನು ವಶಕ್ಕೆ ಪಡೆದ ಪೊಲೀಸರು ಜಯನಗರ ಠಾಣೆಗೆ ಕರೆದೊಯ್ದು ತನಿಖೆ ಮುಂದುವರಿಸಿದರು. ಕಾರನ್ನು ಜಪ್ತಿ ಮಾಡಿದ್ದು ಎಸ್ಪಿ ಬಿ.ಎಂ.ಲಕ್ಷಿö್ಮÃಪ್ರಸಾದ್ ಜಯನಗರ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.’
ಬೆಕಿಗೆ ಬಂದ ಕಾರು ಕಳ್ಳತನ:
ವಿಚಿತ್ರವೆಂದರೆ ಯುವಕರು ಗೋಪಾಳದ ತುಂಗಾನಗರ ಏರಿಯಾದಲ್ಲಿ ಮಂಗಳವಾರ ರಾತ್ರಿ ಮಾರುತಿ-೮೦೦ ಕಾರನ್ನು ಕಳವು ಮಾಡಿದ್ದರು. ಗಾಂಜಾ ಮತ್ತಿನಲ್ಲಿ ಊರೆಲ್ಲ ಸುತ್ತಾಡಿದ್ದಾರೆ ಎನ್ನಲಾಗಿದೆ. ಕಾರು ಕಳವು ಆಗಿರುವ ಬಗ್ಗೆ ಮಾಲೀಕರು ಮಂಗಳವಾರ ರಾತ್ರಿಯೇ ತುಂಗಾನಗರ ಠಾಣೆಗೆ ತೆರೆಳಿ ದೂರು ನೀಡಿದ್ದರು. ಅದೇ ಕಾರು ರವೀಂದ್ರನಗರದ ಮುಖ್ಯ ರಸ್ತೆಯಲ್ಲಿ ಪತ್ತೆಯಾಗಿದೆ.

Ad Widget

Related posts

ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಸೀಟು ಹೆಚ್ಚಿಸಲು ಪ್ರಯತ್ನ: ಡಾ.ಸೆಲ್ವಕುಮಾರ್

Malenadu Mirror Desk

ಶಿವಮೊಗ್ಗದಲ್ಲಿ ಕೊರೊನಕ್ಕೆ 4 ಸಾವು, 184 ಸೋಂಕು

Malenadu Mirror Desk

ಪತ್ರಕರ್ತರು ಸುದ್ದಿ ನೈಜತೆಗೆ ಮೋಸವಾಗದಂತೆ ಜಾಗೃತೆವಹಿಸಬೇಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.