ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಸೆ, ೧೭ ರಿಂದ ಅ,೭ ವರೆಗೆ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾದ್ಯಂತ ಸೇವೆ ಮತ್ತು ಸಮರ್ಪಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು ಪ್ರಧಾನಿ ಮೋದಿಯವರ ಹುಟ್ಟಿದ ಹಬ್ಬ ಸೆ, ೧೭ ಆಗಿದೆ ಆದರೆ ಅವರು ರಾಜಕೀಯವಾಗಿ ಅಧಿಕಾರಕ್ಕೆ ಬಂದು ಅ, ೦೭ ಕ್ಕೆ ೨೦ ವರ್ಷಗಳಾಗುತ್ತವೆ ಈ ಹಿನ್ನೆಲೆಯಲ್ಲಿ ಸೆ,೧೭ ರಿಂದ ಅ,೦೭ರ ವರೆಗೆ ೨೦ ದಿನಗಳ ಕಾಲ ಜಿಲ್ಲಾದ್ಯಂತ ಬೂತ್ ಹಾಗೂ ಶಕ್ತಿ ಕೇಂದ್ರಗಳಲ್ಲಿ ಸೇವೆ ಮತ್ತು ಸಮರ್ಪಣೆ ಹೆಸರಿನಲ್ಲಿ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳುಮೋದಿಜೀಯವರ ಸಾಧನೆ ಮತ್ತು ಅಭಿವೃದ್ಧಿಗಳ ಬಗ್ಗೆ ತಿಳಿಸಿ ಕಾರ್ಯಕರ್ತರನ್ನು ಮತ್ತಷ್ಟು ಹುಮ್ಮಸ್ಸುಗೊಳಿಸುವುದೆ ಆಗಿದೆ ಎಂದರು.
ಮುಖ್ಯವಾಗಿ ಶಿವಮೊಗ್ಗದಲ್ಲಿ ಸೆ,೧೭ ರಂದು ಇಡೀ ದಿನ ವಿವಿಧ ಕಾರ್ಯಕ್ರಮಗಳನ್ನು ಬೆಳಿಗ್ಗೆ ೮ ಗಂಟೆಯಿಂದ ಹಿಡಿದು ಸಂಜೆ ೭ರ ವರೆಗೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೮ಕ್ಕೆ ಪ್ರಧಾನಿಯವರಿಗೆ ಶುಭವಾಗಲಿ ಎಂದು ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ, ನಂತರ ೯ಕ್ಕೆ ಜಿಲ್ಲಾ ಕಾರ್ಯಕಾರಣಿ ಸಭೆ, ೧೦ ಕ್ಕೆ ರಕ್ತದಾನ ಶಿಬಿರ, ನಂತರ ಪೋಸ್ಟ್ ಕಾರ್ಡ್ ಅಭಿಯಾನ, ವೃದ್ಧಾಶ್ರಮದಲ್ಲಿ ಹಣ್ಣು-ಹಂಪಲು ವಿತರಣೆ, ಖಾದಿ ಖರೀದಿ, ಮಧ್ಯಾಹ್ನ ೧೨:೩೦ ಕ್ಕೆ ರೋಯಲ್ ಆರ್ಕೆಡ್ ಹೋಟೆಲ್ ನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಪಲಾನುಭವಿಗಳ ಹೇಳಿಕೆ ಕುರಿತು ಸಾಮಾಜಿಕ ಜಾಲ ತಾಣದವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮಧ್ಯಾಹ್ನದ ನಂತರ ಲಸಿಕಾ ಕೇಂದ್ರದ ವಾರಿಯರ್ಸ್ ಗಳಿಗೆ ಅಭಿನಂದನೆ, ೩ ಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕೈಗಾರಿಕ ಮತ್ತು ವಾಣಿಜ್ಯ ಸಂಘದ ಆವರಣದಲ್ಲಿ ವಿಚಾರ ಸಂಕಿರಣ, ಸಂಜೆ ೫ ಕ್ಕೆ ಹೊಳೆಹೊನ್ನೂರಿನಲ್ಲಿ ಜಲಮೂಲ ಸ್ವಚ್ಛತೆ ಹಾಗೂ ಸಂಜೆ ೭ಕ್ಕೆ ಸರ್ಕಾರದ ಯೋಜನೆಗಳ ಅಪಪ್ರಚಾರ ಮಾಡುವವರ ವಿರುದ್ಧ ಶಿವಪ್ಪ ನಾಯಕ ಪ್ರತಿಮೆ ಯಿಂದ ಗೋಪಿ ವೃತ್ತದವರೆಗೆ ೭೧ ಕಾರ್ಯಕರ್ತರಿಂದ ಪಂಜಿನ ಮೇರವಣಿಗೆ ಆಯೋಜಿಸಲಾಗಿದೆ ಎಂದರು.
ಈ ಎಲ್ಲಾ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಚಿವರಾದ ಅರಗ ಜ್ಞಾನೇಂದ್ರ, ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ಜನಪ್ರತಿನಿಧಿಗಳು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಆರ್.ಕೆ. ಸಿದ್ದರಾಮಣ್ಣ, ಪ್ರಮುಖರಾದ ಬಿ.ಆರ್ ಮಧುಸೂಧನ್. ಪದ್ಮಿನಿ ರಾವ್, ಬಿ.ಕೆ ಶ್ರೀನಾಥ್, ಶಿವರಾಜ್, ವಿದ್ಯಾ ಲಕ್ಷ್ಮೀಪತಿ, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.