Malenadu Mitra
ರಾಜ್ಯ ಶಿವಮೊಗ್ಗ

ಸದನದಲ್ಲಿ ನಿಮ್ಹಾನ್ಸ್ ಅವ್ಯವಸ್ಥೆ ಬಿಚ್ಚಿಟ್ಟ ಶಾಸಕ; ನಾನು ನನ್ನ ಇಬ್ಬರು ಸಂಬಂಧಿಗಳನ್ನು ಕಳೆದುಕೊಂಡಿದ್ದೇನೆ:ಹಾಲಪ್ಪ

ನಾನು ನನ್ನ ಇಬ್ಬರು ಸಂಬಂಧಿಗಳನ್ನು ಕಳೆದುಕೊಂಡಿದ್ದೇನೆ…ಸರಕಾರಿ ಆರೋಗ್ಯ ಸಂಸ್ಥೆಯಲ್ಲಿ ಇರುವ ಅವ್ಯವಸ್ಥೆ ಬಗ್ಗೆ ಮಾತನಾಡಲು ಅವಕಾಶ ಕೊಡುವುದಿಲ್ಲ ಅಂತೀರಿ… ನಾನೇನು ಸರಕಾರ ಅಥವಾ ಪಕ್ಷದ ವಿರುದ್ಧ ಮಾತನಾಡಿದೆನಾ….. ಹೀಗೆಂದು ಆಕ್ರೋಶ ವ್ಯಕ್ತಪಡಿಸಿದವರು ಆಡಳಿತ ಪಕ್ಷದ ಶಾಸಕರೇ ಆದ ಸಾಗರ ಕ್ಷೇತ್ರದ ಹರತಾಳು ಹಾಲಪ್ಪ.
ವಿಧಾನ ಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಹಾಲಪ್ಪ, ವೆಂಟಿಲೇಟರ್ ಕೊರತೆಯಿಂದ ನನ್ನ ಪತ್ನಿಯ ಸೋದರಿ ಮತ್ತು ಸೋದರನನ್ನು ಕಳೆದುಕೊಂಡಿದ್ದೇವೆ. ಈಗ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯ ಬ್ರೈನ್ ಹೆಮರೇಜ್ ಆಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಆದರೆ ನಿಮ್ಹಾನ್ಸ್‌ನಲ್ಲಿ ವೆಂಟಿಲೇಟರ್ ಇಲ್ಲ ಎಂದು ಅವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಳ್ಳುತ್ತಿಲ್ಲ ಎಂದು ಹಾಲಪ್ಪ ಸದನದಲ್ಲಿ ಅಸಹಾಯಕತೆ ತೋಡಿಕೊಂಡರು.
ಆರೋಗ್ಯ ಇಲಾಖೆ ಆಯುಕ್ತರು ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಸಂಪರ್ಕಿಸಿದರೆ ಅವರು ಸಿಗಲಿಲ್ಲ. ನಿಮ್ಹಾನ್ಸ್ ನಿರ್ದೇಶಕರು ವೆಂಟಿಲೇಟರ್ ಇಲ್ಲ ಎಂದು ಹೇಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನನುದಾನದಲ್ಲಿ ನಡೆಯುವ ನಿಮ್ಹಾನ್ಸ್‌ಗೆ ರಾಜ್ಯ ಸರಕಾರದಿಂದ ಅಗತ್ಯವಿರುವ ವೆಂಟಿಲೇಟರ್‌ಗಳನ್ನಾದರೂ ಪೂರೈಸಿ ಎಂದು ಸರಕಾರವನ್ನು ಒತ್ತಾಯಿಸಿದರು. ಆರಂಭದಲ್ಲಿ ತಮಗೆ ಮಾತಿಗೆ ಅವಕಾಶ ಕೊಡದ ಸ್ಪೀಕರ್ ವಿರುದ್ಧ ಮುನಿಸಿಕೊಂಡಿದ್ದ ಹಾಲಪ್ಪ ನಾನೇನು ಸರಕಾರದ ವಿರುದ್ಧ ಅಥವಾ ಪಕ್ಷದ ವಿರುದ್ಧ ಮಾತನಾಡಿಲ್ಲ  ಎಂದು ಹಾಲಪ್ಪ ಆಕ್ರೋಶ ಹೊರಹಾಕಿದ್ದರು.

ಆರೋಗ್ಯ ಸಚಿವರ ಸಮಜಾಯಿಷಿ


ಶೂನ್ಯವೇಳೆಯಲ್ಲಿ ಹಾಲಪ್ಪ ಅವರು ಸದನದ ಗಮನಕ್ಕೆ ತಂದ ವಿಷಯವನ್ನು ಪ್ರಸ್ತಾಪ ಮಾಡಿದ ಸ್ಪೀಕರ್ ಕಾಗೇರಿ ಅವರು ಉತ್ತರ ನೀಡುವಂತೆ ಆರೋಗ್ಯ ಸಚಿವ  ಡಾ.ಕೆ.ಸುಧಾಕರ್ ಅವರಿಗೆ ಸೂಚಿಸಿದರು. ಹಾಲಪ್ಪ ಅವರು ಗಮನಕ್ಕೆ ತಂದ ವಿಷಯದ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ.ನಿಮ್ಹಾನ್ಸ್‌ಗೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಂದ ರೋಗಿಗಳು ಬರುವುದರಿಂದ ಅಲ್ಲಿ ಯಾವತ್ತೂ ರಷ್ ಇರುತ್ತದೆ. ವೆಂಟಿಲೇಟರ್ ಅಳವಡಿಸಿದ್ದನ್ನು ಬದಲು ಮಾಡಿ ಮತ್ತೊಬ್ಬರಿಗೆ ಕೊಡಲು ಆಗುವುದಿಲ್ಲ. ಹಾಲಪ್ಪ ಅವರ ಕ್ಷೇತ್ರದ ರೋಗಿಯನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕಳಿಸಲು ಸೂಚನೆ ನೀಡಲಾಗಿದೆ ಎಂದು ಸುಧಾಕರ್ ಸಮಜಾಯಿಷಿ ನೀಡಿದರು.ಆದರೆ ಅಲ್ಲೂ ಚಿಕಿತ್ಸೆ ಫಲಿಸದೆ ಗ್ರಾಮ ಪಂಚಾಯಿತಿ ಸದಸ್ಯ ಬಂಗಾರಪ್ಪ ನಿಧನರಾಗಿದ್ದಾರೆ

Ad Widget

Related posts

ಆನೆ ಹಾವಳಿ : ಬೆಳೆ ಹಾನಿ ಪರಿಶೀಲಿಸಿದ ಶಾಸಕಿ ಶಾರದಾ ಪೂರ್ಯನಾಯ್ಕ್

Malenadu Mirror Desk

ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿ; ಹಾನಿ ಪರಿಶೀಲನೆ,418 ಕೋಟಿ ರೂ.ಆಸ್ತಿಪಾಸ್ತಿ ನಷ್ಟದ ಅಂದಾಜು

Malenadu Mirror Desk

ಅಡಿಕೆ ಕಳ್ಳರು ಅಂದರ್, ಕದ್ದದ್ದು ಎಷ್ಟು ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.