Malenadu Mitra
ರಾಜ್ಯ

ಅಂಗನವಾಡಿ,ಅಕ್ಷರ ದಾಸೋಹ ನೌಕರರ ಪ್ರತಿಭಟನೆ

 ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ ಮತ್ತು ಆಶಾ ಕಾರ್ಯಕರ್ತರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಂಗನವಾಡಿ, ಅಕ್ಷರದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ. ಜೀವನ ಭದ್ರತೆ ಇಲ್ಲವಾಗಿದೆ. ರಾಜ್ಯ ಸರ್ಕಾರ ಕೂಡಲೇ ನೌಕರರಿಗೆ ಜೀವನ ಭದ್ರತೆ ನೀಡಬೇಕು. ಸಂರಕ್ಷಣೆ, ಮರಣ ಪರಿಹಾರ, ಕನಿಷ್ಠ ವೇತನ ಮತ್ತು ಪಿಂಚಣಿ ಸೌಲಭ್ಯವನ್ನು ನಮಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ನೌಕರರಿಗೆ ಸುರಕ್ಷತೆ ನೀಡಬೇಕು. ಕೋವಿಡ್ ಇನ್ನೂ ಮುಗಿದಿಲ್ಲವಾದ್ದರಿಂದ ಮಾಸ್ಕ್, ಸ್ಯಾನಿಟೈಸರ್ ಮತ್ತು ಲಸಿಕೆ ನೀಡಲು ಆದ್ಯತೆ ನೀಡಬೇಕು. ಹೆಚ್ಚುವರಿಯಾಗಿ ಮಾಸಿಕ ೧೦ ಸಾವಿರ ರೂ.ಗಳ ವಿಶೇಷ ಭತ್ಯೆ ನೀಡಬೇಕು. ಕೋವಿಡ್‌ನಿಂದ ಮೃತಪಟ್ಟವರಿಗೆ ೧೦ ಲಕ್ಷ ರೂ.ಗಳ ಪರಿಹಾರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭವಿಷ್ಯನಿಧಿ, ಇಎಸ್‌ಐ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನವನ್ನು ಹೆಚ್ಚಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ನಿವೃತ್ತಿ ವೇತನ ನಿಗಧಿ ಮಾಡಬೇಕು. ನಿವೃತ್ತಿ ವೇತನ ನಿಗಧಿ ಮಾಡುವವರೆಗೂ ೧.೫ ಲಕ್ಷ ಇಡುಗಂಟು ಬಿಡುಗಡೆ ಮಾಡಬೇಕು. ನೂತನ ಶಿಕ್ಷಣ ನೀತಿಯಿಂದ ಐಸಿಡಿಎಸ್ ಮತ್ತು ಬಿಸಿಯೂಟ ಯೋಜನೆಗಳನ್ನು ರಕ್ಷಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್. ಹನುಮಮ್ಮ, ತುಳಸಿಪ್ರಭ, ವಿಜಯಲಕ್ಷ್ಮೀ,ಭಾಗ್ಯಮ್ಮ, ಅಶ್ವಿನಿ, ತಾರಾ, ಚಂದ್ರಮ್ಮ, ಸುನಿತಾ, ನಾಗರತ್ನ ಸೇರಿದಂತೆ ಹಲವರಿದ್ದರು.

Ad Widget

Related posts

ಚಿತ್ರ ಬಿಡಿಸಿಕೊಡುವೆನೆಂದು ಚಿತ್ರಪಟವನ್ನೇ ಸೇರಿಬಿಟ್ಟೆಯಾ ಗೆಳೆಯ…

Malenadu Mirror Desk

ಅಹಿಂದ ವರ್ಗಕ್ಕೆ ಕಾಂಗ್ರೆಸ್ ಮೇಲೆ ವಿಶ್ವಾಸ ಇಲ್ಲ

Malenadu Mirror Desk

ಸಜಾಬಂಧಿ ಖೈದಿ ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.