ರಿಪ್ಪನ್‍ಪೇಟೆ;-ಕೋಣಂದೂರು ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕೋಣಂದೂರು ಎನ್.ಇ.ಎಸ್.ಕಾಲೇಜ್‍ನಲ್ಲಿ ಹಲವು ದಶಕಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುವ ಮೂಲಕ ಮಲೆನಾಡಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುವುದರೊಂದಿಗೆ ಜನಮಾನಸಲ್ಲಿ ಉಳಿಯುವಂತಹ ವ್ಯಕ್ತಿತ್ವವನ್ನು ಬೆಳಸಿಕೊಂಡ ಶಿಕ್ಷಣ ತಜ್ಞ ಪ್ರೋ.ಹೆಚ್.ಎಸ್.ಗಣೇಶ್‍ಮೂರ್ತಿಯವರ ನೆನಪು ಸದಾ ಉಳಿಯುವಂತಾಗಲು ವೃತ್ತಕ್ಕೆ ಗಣೇಶ್‍ಮೂರ್ತಿ ಹೆಸರು ನಾಮಕರಣ ಮಾಡುವುದರಿಂದ ಮೃತರ ಅತ್ಮಕ್ಕೆ ಶಾಂತಿ ಕರುಣಿಸಿದಂತಾಗುವುದೆಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸಮೀಪದ ಅಮೃತ ಗ್ರಾಮದಲ್ಲಿನ ಶೈಲಾಪಾರಂನಲ್ಲಿ ಅವರ ಬದುಕಿನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿ ಅಪಾರ ಸೇವೆಯನ್ನು ಸ್ಮರಿಸಿ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗಣೇಶ್‍ಮೂರ್ತಿ ಸರಳ ವ್ಯಕ್ತಿತ್ವದ ಅಪ್ರತಿಮ ಶಿಕ್ಷಣ ತಜ್ಞರಾಗಿದ್ದು ಮಲೆನಾಡಿನ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಅಸಕ್ತಿ ವಹಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಪಾರ ಕೊಡುಗೆ ನೀಡಿದ್ದಾರೆಂದು ಹೇಳಿ ಅವರ ಭಾವಚಿತ್ರಕ್ಕೆ ದೀಪಾ ಬೆಳಗಿಸಿ ಪುಪ್ಪ ನಮನ ಸಲ್ಲಿದರು.
ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್,ಮಾಜಿಶಾಸಕ ಡಾ.ಜಿ.ಡಿ.ನಾರಾಯಣಪ್ಪ,ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ, ವಿಎಸ್‍ಎಸ್‍ಎನ್ ಅಧ್ಯಕ್ಷ ಬಂಡಿದಿನೇಶ್ ,ಗ್ರಾ.ಪಂ.ಉಪಾಧ್ಯಕ್ಷ .ಬಂಡಿ ಲಿಂಗರಾಜ್,ಗ್ರಾ.ಪಂ.ಸ.ಸಚಿನ್‍ಗೌಡ,ಇನ್ನಿತರ ಊರಿನ ಪ್ರಮುಖರು ಪಾಲ್ಗೊಂಡಿದ್ದರು.