Malenadu Mitra
ರಾಜ್ಯ ಶಿವಮೊಗ್ಗ

ಅರಣ್ಯಾಧಿಕಾರಿಗಳ ದುರಾಡಳಿತ ಖಂಡಿಸಿ ಪಾದಯಾತ್ರೆ


ಮೂರು ವರ್ಷಗಳಿಂದ ನಿರಂತರವಾಗಿ ಬಡ ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸುತ್ತಿದ್ದು ಸುಳ್ಳು ಕೇಸು ಗಳನ್ನು ದಾಖಲಿಸುವುದರ ಮೂಲಕ ಕಿರುಕುಳ ನೀಡುತ್ತಿದ್ದನ್ನು ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೀರ್ಥಹಳ್ಳಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ  ಪಾದಯಾತ್ರೆ ನಡೆಸಿದರು.
ಮಂಡಗದ್ದೆ ಹೋಬಳಿಯ ಹೆಗಲತ್ತಿ ಕೆಪ್ಪೆಸರ ಗ್ರಾಮದಿಂದ ಮಂಡಗದ್ದೆ ವಲಯ ಅರಣ್ಯಾಧಿಕಾರಿಗಳ  ಕಚೇರಿವರೆಗೆ  ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸಿದರು.
ನಂತರ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆ ಮಿತಿ ಮೀರಿದೆ. ದ್ವೇಷದ ರಾಜಕಾರಣ ಮಾಡುವ ಬಿಜೆಪಿಯವರ ಮನಸ್ಥಿತಿ ಅಮಾನವೀಯ,ಬಡ ರೈತರ ಕೃಷಿ ಜಮೀನಿನ ಮೇಲೆ ಕ್ರೌರ್ಯ ನೆಡೆಸುವ ಅರಣ್ಯಾಧಿಕಾರಿಗಳು ಕ್ಷೇತ್ರದ ಶಾಸಕ,ಗೃಹ ಸಚಿವ ಆರಗ ಜ್ಞಾನೇಂದ್ರರ ಅಣತಿಯಂತೆ ಕೆಲಸಮಾಡುತ್ತಿರುವುದು ಖಂಡನೀಯ ಎಂದರು.


ಶ್ರೀಮಂತ ರೈತರುಗಳು ಬಿಜೆಪಿಯಲ್ಲಿದ್ದು ಅಂತವರು ಒತ್ತುವರಿ ಮಾಡಿದರೆ ಬೆಂಬಲಿಸುವ ಅರಣ್ಯ ಇಲಾಖೆ, ಶಾಸಕರು ಕಾಂಗ್ರೆಸ್ ಬೆಂಬಲಿತರು,ಬಡವರ ಮೇಲೆ ದೌರ್ಜನ್ಯ ನೆಡೆಸುತ್ತಾರೆ.ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಬಡವರ ಹಾಗೂ ರೈತ ವಿರೋಧಿ ಸರ್ಕಾರವಾಗಿದೆ.ಬಡ ರೈತ ಮಂಜುನಾಥ್ ರನ್ನು ಕೆಲವು ರಾಜಕೀಯ ಶಕ್ತಿ ಬೆದರಿಸಿ ಈ ಪಾದಯಾತ್ರೆಯಿಂದ ದೂರ ಉಳಿಯುವಂತೆ ಮಾಡುತ್ತಿದೆ.ಯಾರು ಏನೇ ಮಾಡಿದರೂ ನಾನು ಅಂಜುವುದಿಲ್ಲ.ಸತ್ಯ ಹಾಗೂ ನ್ಯಾಯದ ಪರವಾಗಿ ಹೋರಾಟ ಮಾಡುತ್ತ ಬಂದಿದ್ದೇನೆ,ಸತ್ಯ ಅಹಿಂಸೆಯನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧಿ ಜಯಂತಿಯಂದು ಈ ಹೋರಾಟ ಹಮ್ಮಿಕೊಂಡಿದ್ದೇನೆ,ಪಾದಯಾತ್ರೆ ಮೂಲಕ ಸರ್ಕಾರವನ್ನು ಎಚ್ಚರಿಸುವ,ದೌರ್ಜನ್ಯ ಒಳಗಾದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವುದು ಕಾಂಗ್ರೆಸ್ ಪಕ್ಷದ ಹಕ್ಕಾಗಿದೆ ಎಂದರು.


 ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರವರ ಆದೇಶದಂತೆ  ಕ್ಷೇತ್ರದ ಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಗಾಂಧಿ ಚಿಂತನೆಗಳನ್ನು ಪ್ರಸ್ತುತ ಪಡಿಸಲಾಯಿತು.
ಪಾದಯಾತ್ರೆಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಕೆಸ್ತೂರ್ ಮಂಜುನಾಥ್,ಮುಡುಬ ರಾಘವೇಂದ್ರ,ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ ಶೆಟ್ಟಿ,ಪುಟ್ಟೊಡ್ಲು ರಾಘವೇಂದ್ರ,ತಾ.ಪಂ. ಮಾಜಿ ಅಧ್ಯಕ್ಷೆ ನವಮಣಿ,ಮುಖಂಡರಾದ ಅಮ್ರಪಾಲಿ ಸುರೇಶ್,ಆದರ್ಶ ಹುಂಚದ ಕಟ್ಟೆ,ಚಂದ್ರಮೌಳಿ,ವಿಲಿಯಂ ಡಿಸೋಜ,ಹಸಿರುಮನೆ ಮಹಬಲೇಶ್,ಕೇಳೂರು ಮಿತ್ರ,  ಮಹಾಬಲ,ಪ.ಪಂ.ಸದಸ್ಯರಾದ ಗೀತಾ ರಮೇಶ್,ಸುಶೀಲ ಶೆಟ್ಟಿ,ನಮ್ರತ್, ಅಜಾದಿ ಹಾಗೂ   ಅರಣ್ಯಾಧಿಕಾರಿ ಕಿರುಕುಳದಿಂದ ನೊಂದ   ನೂರಾರು ಗ್ರಾಮಸ್ಥರು ಪಾದಯಾತ್ರೆಯಲ್ಲಿದ್ದರು.

Ad Widget

Related posts

ಕಾಂಗ್ರೆಸ್ ಸರಕಾರ ರೈತರಿಗೆ ಭೂಮಿ ಭಾಗ್ಯ ನೀಡಲಿ: ತೀ.ನ.ಶ್ರೀನಿವಾಸ್

Malenadu Mirror Desk

ಹಣಗೆರೆಕಟ್ಟೆ ಲಾಜ್ ನಲ್ಲಿ ಮಹಿಳಾ ಪ್ರವಾಸಿ ಕೊಲೆ, ಮೃತದೇಹ ಪತ್ತೆ

Malenadu Mirror Desk

ಹಿಜಾಬ್ ಪ್ರತಿಭಟನೆ ಯಥಾಸ್ಥಿತಿ , ಬೇಟಿ ಬಚಾವೊ ,ಬೇಟಿ ಪಡಾವೊ ಅಂತಿರಿ ಕಾಲೇಜಿಗೆ ಬಿಡುತ್ತಿಲ್ಲ: ವಿದ್ಯಾರ್ಥಿನಿಯರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.