Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಕೇಂದ್ರ ಸರಕಾರದ ಜನವಿರೋಧಿ ಖಂಡಿಸಿ ಉಪವಾಸ ಸತ್ಯಾಗ್ರಹ

ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭಾಗಿ


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಕೈಗಾರಿಕೆ ಹಾಗೂ ಉದ್ದಿಮೆಗಳನ್ನು ದೊಡ್ಡ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಮೂಲಕ ಕಂಪನೀಕರಣಕ್ಕೆ ಮುಂದಾಗಿರುವುದು ದೇಶದ ಸ್ವಾತಂತ್ರ ಹರಣಕ್ಕೆ ಕಾರವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ಸೊರಬ ಪಟ್ಟಣದ ತಾಲೂಕು ಕಚೇರಿ ಮುಂಭಾಗ ವಿಶ್ವ ಮಾನವ ಶಕ್ತಿ ಶೋಧಕ ಸಮಾಜ ಟ್ರಸ್ಟ್ ವತಿಯಿಂದ ಶನಿವಾರ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹಮ್ಮಿಕೊಂಡ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರದಲ್ಲಿ ಆಡಳಿತದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಹಾಗೂ ಜನರ ಹಿತ ಕಾಯುವ ಬದಲು ಕೇಂದ್ರ ಸರ್ಕಾರದ ಅಜೆಂಡದಲ್ಲಿ ಕಂಪನೀಕರಣ, ಕೈಗಾರಿಕೆ, ಉದ್ದಿಮೆ, ವಾಣಿಜ್ಯವನ್ನು ಅದಾನಿ, ಅಂಬಾನಿಯವರಿಗೆ ಗುತ್ತಿಗೆ ನೀಡುವುದು ಅಥವಾ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಗದೀಕರಣ ಮಾಡುತ್ತಿದ್ದೇವೆ ಎಂದಿದ್ದಾರೆ. ಜನರ ಆಸ್ತಿಯಾಗಿರುವ ಹೆದ್ದಾರಿ, ಬಂದರು, ವಿದ್ಯುತ್ ಕ್ಷೇತ್ರವನ್ನು ಖಾಸಗಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರೀಪೇಯ್ಡ್ ಸಿಸ್ಟಂ ಮಾದರಿಯಲ್ಲಿ ವಿದ್ಯುತ್ ಮೀಟರ್‌ಗಳನ್ನು ಅಳವಡಿಸುವ ಯೋಜನೆ ಜಾರಿಯಾದರೆ ರೈತರು ಮತ್ತು ಜನಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊರೋನಾ ಲಾಕ್‌ಡೌನ್‌ನಂತಹ ಸಂದರ್ಭದಲ್ಲಿ ವಿವಾದಿತ ಕಾಯ್ದೆಗಳಾದ ಭೂಸುಧಾರಣೆ ಕಾನೂನು, ಎಪಿಎಂಸಿ ಕಾನೂನು, ಎಂಎಸ್‌ಪಿ ಕಾನೂನುಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ವಿಷಾದದ ಸಂಗತಿ. ಕೂಡಲೇ ಈ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತ ವಿರೋಧಿ ಕಾಯ್ದೆಗಳ ವಿರೋಧಿಸಿ ದೆಹಲಿಯಲ್ಲಿ ಸುಮಾರು ಹನ್ನೊಂದು ತಿಂಗಳಿಂದ ಶಾಂತಿಯುತವಾಗಿ ರೈತರು ಮಳೆ, ಗಾಳಿ, ಚಳಿ ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಅಹವಾಲುಗಳನ್ನು ಕೇಳಲು ಸಿದ್ದವಿಲ್ಲ ಎಂದು ಆರೋಪಿಸಿದ ಅವರು, ಪ್ರಸ್ತುತ ದಿನದಲ್ಲಿ ಮಹಾತ್ಮ ಗಾಂಧೀಜಿ ಮತ್ತೆ ಹುಟ್ಟಿ ಬರುವ ಅವಶ್ಯಕತೆ ಇದೆ ಎಂದರು.
ನಂತರ ರೈತ ಸಂಘದ ರಾಜಾಧ್ಯಾಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಾಲೂಕಿನ ನಡಹಳ್ಳಿ, ಉಳವಿಯ ಪತ್ರೆಸಾಲು ಹಾಗೂ ತಳೇಲುಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕಗಳಿಗೆ ಚಾಲನೆ ನೀಡಿದರು

.ಸತ್ಯಾಗ್ರಹದಲ್ಲಿ ವಿಶ್ವ ಮಾನವ ಶಕ್ತಿ ಶೋಧಕ ಸಮಾಜ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ ಮಾಸ್ತರ್ ನೇತೃತ್ವ ವಹಿಸಿದ್ದರು. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ ಗೌಡ, ಉಪಾಧ್ಯಕ್ಷ ಕುರುವಾ ಗಣೇಶ್, ಪ್ರಧಾನ ಕಾರ್ಯದರ್ಶಿ ಭೈರೇಗೌಡ ಭಕ್ತರಳ್ಳಿ,ದಾವಣಗೇರಿ ಜಿಲ್ಲಾ ಗೌರವಾಧ್ಯಕ್ಷ ಭರಮಗೌಡ, ಸಿದ್ಧಾಪುರ ತಾಲೂಕು ಸಂಘದ ಅಧ್ಯಕ್ಷ ವೀರಭದ್ರನಾಯ್ಕ್, ಖಲೀರ್ ಹುಸೇನ್ ಹಾವೇರಿ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಪ್ರಮುಖರಾದ, ರಾಜಪ್ಪ ಮಾಸ್ತರ್, ಉಮೇಶ್ ಪಾಟೀಲ್, ಮಂಜುನಾಥ ಆರೇಕೊಪ್ಪ, ಮೇಘರಾಜ ಬೆಟ್ಟದಕೂರ್ಲಿ, ಬಿ. ನಾಗರಾಜಗೌಡ ಆಲಹಳ್ಳಿ, ಸುಶೀಲ ಇಂದೂರ್ ಕಾಗೋಡು ಮಾಲತೇಶ ಕೊಡಕಣಿ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.

Ad Widget

Related posts

ಗುತ್ತಿಗೆದಾರರಿಗೆ ಶಾಸಕ ಹಾಲಪ್ಪ ಕ್ಲಾಸ್

Malenadu Mirror Desk

ಡಾ. ಪ್ರಸನ್ನಕುಮಾರ್ ಗೆ ಪ್ರತಿಷ್ಠಿತ ವಿಜ್ಹನ್ ಪ್ರಶಸ್ತಿ

Malenadu Mirror Desk

ಮುಕ್ತಮನಸ್ಸಿನಿಂದ ಜೀವನ ನೋಡಿದರೆ ಆಳದ ಅರಿವಾಗುತ್ತದೆ: ಇನ್ಫೋಸಿಸ್ ಸುಧಾಮೂರ್ತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.