Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಬಿರುಸಾದ ಶರಾವತಿ ಹಿನ್ನೀರು ಜನರ ನೆಟ್ವರ್ಕ್ ಹೋರಾಟ: ಕಟ್ಟಿನಕಾರಿನಿಂದ 15 ಕಿಲೋಮೀಟರ್ ಪಾದಯಾತ್ರೆ, ಪಕ್ಷಾತೀತವಾಗಿ ರಸ್ತೆಗಿಳಿದ ಮುಖಂಡರು

ಸಾಗರ ತಾಲೂಕು ಕರೂರು &ಬಾರಂಗಿ ಹೋಬಳಿಯಲ್ಲಿ ನಡೆಯುತ್ತಿರುವ ನೋ ನೆಟ್ವರ್ಕ್, ನೋ ವೋಟ್ ಅಭಿಯಾನ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು, ಶನಿವಾರ ತಾಲೂಕಿನ ಕಟ್ಟಿನಕಾರಿನಿಂದ ಕೋಗಾರಿನವರೆಗೆ ಬೃಹತ್ ಪಾದಯಾತ್ರೆ ನಡೆಸಿದ್ದು, ಆ ಭಾಗದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು.

ಪಾದಯಾತ್ರೆಯಲ್ಲಿ ಶರಾವತಿ ಹಿನ್ನೀರಿನ ಚನ್ನಗೊಂಡ ಗ್ರಾಮದ ಕಟ್ಟಿನಕಾರು. ಕಾರಣಿ. ಕೋಗಾರ್. ಬಾನುಕುಳಿ, ಹಲವಾರು ಗ್ರಾಮಗಳಿಂದ ವಿದ್ಯಾರ್ಥಿಗಳು. ಮಹಿಳಾ ಸಂಘಟನೆಯ ಪ್ರಮುಖರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಕಟ್ಟಿನಕಾರಿನಿಂದ ಕೋಗಾರ್ ತನಕ 15 ಕಿಲೋಮೀಟರ್ ಪಾದಯಾತ್ರೆಯಲ್ಲಿ ಭಾಗಿಯಾದ ಜನರು ಉರಿಬಿಸಿಲನ್ನೂ ಲೆಕ್ಕಿಸದೆ ತಮ್ಮ ಬೇಡಿಕೆಯನ್ನು ಮಂಡಿಸಿದರು.

ಬಾರಂಗಿ ಹೋಬಳಿಯ ಕೋಗಾರ್, ಕಟ್ಟಿನಕಾರು. ಕಾರಣಿಯ. ಬಿಳಿಗಾರು. ಇನ್ನೂ ಹಲವಾರು ಕುಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಇರುವ ಕಾರಣ ಡಿಜಿಟಲ್ ಇಂಡಿಯಾದ ಯಾವ ಪರಿಣಾಮವೂ ಆಗುತ್ತಿಲ್ಲ. ಆನ್‌ಲೈನ್‌ಯುಗದಲ್ಲಿನ ಸೇವೆಗಳಿಂದ ಈ ಭಾಗದ ಜನ ವಂಚಿತರಾಗಿದ್ದಾರೆ. ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಬರೀ ಸಭೆ ನಡೆಸಿರುವ ಸರಕಾರ ಪರಿಹಾರ ಮಾತ್ರ ಕಂಡುಕೊಂಡಿಲ್ಲ. ಈ ಭಾಗದಲ್ಲಿ ಹಲವು ಮಹಿಳಾ ಸಂಘಟನೆಗಳು ಹಾಗೂ ಗ್ರಾಮೀಣ ಸಹಕಾರ ಸಂಘಗಳಿದ್ದು ಇವುಗಳ ದಿನನಿತ್ಯದ ನಿರ್ವಹಣೆಗೆ ನೆಟ್ವರ್ಕ್ ಸಮಸ್ಯೆ ತಲೆದೋರಿರುದರಿಂದ ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಈಗಾಗಲೇ ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದು ಈ ಭಾಗದ ವಿದ್ಯಾರ್ಥಿಗಳು ಸಾಕಷ್ಟು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಶಾಲೆಗಳಿಗೆ ತೆರಳಲು 4 ರಿಂದ 5 ಕೀಲೋ ಮೀಟರ್ ದುರ್ಗಮ ಕಾಡಿನಲ್ಲಿ ಹಾದು ಹೋಗುವ ಪರಿಸ್ಥಿತಿ ಇದೆ.

ರಸ್ತೆ ತಡೆ:
ಕಟ್ಟಿನಕಾರಿನಿಂದ ಕೋಗಾರ್ ವೃತ್ತ ತಲುಪಿದ ಹೋರಾಟಗಾರರು ಸುಮಾರು 2 ಗಂಟೆಗಳ ಸಮಯ ಸಾಗರ – ಭಟ್ಕಳ ರಸ್ತೆ ತಡೆ ನಡೆಸಿದರು. ನಂತರ ಚನ್ನಗೊಂಡ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಕ್ಕೊತ್ತಾಯ ಪ್ರತಿಭಟನೆಯ ಮೂಲಕ ನೇಟ್ವರ್ಕ ನಿರ್ಮಾಣಕ್ಕೆ ಮೀನಾಮೇಶ ಎಣಿಸುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಪೋಷಣೆ ಕೂಗಲಾಯಿತು. ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ತೀ. ನಾ. ಶ್ರೀನಿವಾಸ್ .ಹೋರಾಟ ಸಮಿತಿಯ ಪ್ರಮುಖರಾದ ಗೌತಮ್ ಹೆಗಡೆ.ರಾಜಕುಮಾರ್.ಉದಯ್. ರಾಜಪ್ಪ. ಓಂಕಾರ್. ಸೇರಿದಂತೆ ಮಲ್ಲಿಕಾರ್ಜುನ ಹಕ್ರೆ. ರಾಜಶೇಖರ್ ಗಾಳಿಪುರ. ಪ್ರಭಾವತಿ ಚಂದ್ರಕುಮಾರ್. ಸತ್ಯ ನಾರಾಯಣ ಜಿ.ಟಿ. ದೇವರಾಜ್ ಕಪ್ಪದೂರು. ಯೋಗರಾಜ ಯಮಗಳಲೆ. ಶೇಖರಪ್ಪ ಹೆರಬೆಟ್ಟು. ನಾಗರಾಜ್ ಎಸ್ ಎಲ್. ಆರತಿ ಉದಯ್ ಕುಮಾರ್. ಚಂದ್ರಹಾಸ್ ಕೋಗಾರ್. ರಾಜೇಶ್ ಕಟ್ಟಿನಕಾರು. ಕೇಶವ ಹಾಡೋಳ್ಳಿ ಮತ್ತಿತರರು ಹಾಜರಿದ್ದರು.

ಜನರ ಬೇಡಿಕೆಗಳೇನು?

*ಕರೂರು ಬಾರಂಗಿ ಹೋಬಳಿಗೆ ಕನಿಷ್ಠ ೨೦ ಟವರ್ ನಿರ್ಮಾಣಕ್ಕೆ ತತ್ ಕ್ಷಣವೇ ಮುಂದಾಗಬೇಕು.
* ಶರಾವತಿ ಮುಳುಗಡೆ ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ
*ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು.

ಬರುವ ಜನವರಿ ೨೬ರ ವೇಳೆಗೆ ನೆಟ್ವರ್ಕ್ ನಿರ್ಮಾಣಕ್ಕೆ ಸರ್ಕಾರ ಪೂರಕ ಕ್ರಮಗಳನ್ನು ಕೈಗೊಳ್ಳದಿದ್ದರೆ. ಜನವರಿ ೨೬ರ ಗಣರಾಜ್ಯೋತ್ಸವ ದಿನದಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮಸ್ಥರೆಲ್ಲರ ಸಮ್ಮುಖದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದು
ಜಿ.ಟಿ.ಸತ್ಯನಾರಾಯಣ್,ಮಾಜಿ ಅಧ್ಯಕ್ಷ ,ತುಮರಿ ಗ್ರಾಮ ಪಂಚಾಯಿತಿ

ನನ್ನ ಅವಧಿಯಲ್ಲಿ ನೆಟ್ವರ್ಕ್ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದು ಈಗಲೂ ಸಹ ಹೋರಾಟದ ಜೊತೆಗೆ ಇದ್ದು ಮುಂದೆಯೂ ಸಹ ಈ ಈ ಭಾಗದ ಜನರ ಜೊತೆಗೆ ಇರುತ್ತೇನೆ

ರಾಜಶೇಖರ ಗಾಳಿಪುರ, ಬಿಜೆಪಿ ಮುಖಂಡ

ನೆಟ್ವರ್ಕ್ ಸಮಸ್ಯೆ ಸೇರಿದಂತೆ ಈ ಭಾಗದ ಮೂಲ ಭೂತ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

ಚಂದ್ರಶೇಖರ್ ನಾಯ್ಕ್, ತಹಶೀಲ್ದಾರರು ಸಾಗರ.

Ad Widget

Related posts

ಅರಣ್ಯಇಲಾಖೆಯ ಪಾತ್ರ ತುಂಬಾ ಮುಖ್ಯ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ

Malenadu Mirror Desk

ಮಲೆನಾಡಿಗೆ ಮತ್ತೆ ಒಕ್ಕರಿಸಿದ ಮಂಗನಕಾಯಿಲೆ

Malenadu Mirror Desk

ಮಾಸ್ಕ್ ವಿತರಿಸಿ ಶಿವಮೊಗ್ಗ ಪೊಲೀಸರಿಂದ ವಿಭಿನ್ನ ಜಾಗೃತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.