Malenadu Mitra
ರಾಜ್ಯ ಸಾಗರ

ಸಿಗಂದೂರಲ್ಲಿ ಶರನ್ನವರಾತ್ರಿ ಉತ್ಸವ ಆರಂಭ

ಭಕ್ತರ ಆರಾಧನಾ ಕೇಂದ್ರ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ಗುರುವಾರ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಆರಂಭವಾಯಿತು. ರಾಣೆಬೆನ್ನೂರು ತಾಲೂಕು ಅರೆ ಮಲ್ಲಾಪುರಶರಣಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಸರಕಾರ, ಸಂವಿಧಾನಗಳು ಬರುವ ಮುನ್ನವೇ ದೇಶದಲ್ಲಿ ಮಠಮಾನ್ಯಗಳು, ದೇಗುಲಗಳು ಇದ್ದವು. ಈ ಪರಂಪರೆಗೆ ಚ್ಯುತಿಬಾರದಂತೆ ಸರಕಾರಗಳು ನಡೆದುಕೊಳ್ಳಬೇಕೆಂದು. ಧಾರ್ಮಿಕ ಕೇಂದ್ರಗಳ ರಕ್ಷಣೆ ಮತ್ತು ಭಕ್ತರ ಭಾವನೆಗಳಿಗೆ ದಕ್ಕೆಯಾಗುವ ನಿರ್ಧಾರಗಳು ಸರಕಾರಗಳಿಂದ ಆಗಬಾರದು. ಸಿಗಂದೂರು ಈ ನಾಡಿನ ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ. ಬೇಡುವ ವರ ನೀಡುವ ತಾಯಿಯ ಸೇವೆಯನ್ನು ಆಡಳಿತ ಮಂಡಳಿ ಅಚ್ಚುಕಟ್ಟಾಗಿ ಮಾಡುತ್ತಿದೆ. ಶರವನ್ನವರಾತ್ರಿ ಆರಂಭದ ದಿನ ದೇಗುಲಕ್ಕೆ ಬಂದಿರುವುದು ಸಂತೋಷವಾಗಿದೆ.ಸಿಗಂದೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿದ ಅವರು, ಸರಕಾರ ಯಾವುದೇ ದೇವಸ್ಥಾನಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು.
ಸ್ವಾಮೀಜಿಯನ್ನು ದೇವಾಲಯಕ್ಕೆ ಡೊಳ್ಳು ಕುಣಿತ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಧರ್ಮದಶಿ ಡಾ.ರಾಮಪ್ಪ, ಚೌಡಮ್ಮದೇವಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸ್ಥಳೀಯ ಮುಖಂಡರು ಹಾಗೂ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉತ್ಸವದಲ್ಲಿ ಭಾಗವಹಿಸಿದ್ದರು

Ad Widget

Related posts

ಸರಕಾರ ಒಪಿಎಸ್ ಜಾರಿ ಮಾಡುವ ಮಾತು ತಪ್ಪಬಾರದು: ಆಯನೂರು ಮಂಜುನಾಥ್ ಹೇಳಿಕೆ

Malenadu Mirror Desk

ಸೋಲುವ ಹತಾಷೆಯಿಂದ ಸಿದ್ದರಾಮಯ್ಯ ಆಪಾದನೆ: ಸಿ.ಟಿ ರವಿ

Malenadu Mirror Desk

ಪಠ್ಯ ಕಡಿತಗೊಳಿಸುವ ಯಾವುದೇ ಯೋಚನೆ ಸರ್ಕಾರಕ್ಕೆ ಇಲ್ಲ: ಸಚಿವ ಬಿ.ಸಿ. ನಾಗೇಶ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.